For the best experience, open
https://m.suddione.com
on your mobile browser.
Advertisement

ಏಷ್ಯಾ ಕಪ್ - 2023 : ಪಾಕ್ ವೇಗಿಗಳ ಅಬ್ಬರ,  ಟೀಂ ಇಂಡಿಯಾ 266 ಕ್ಕೆ ಆಲೌಟ್, ಮತ್ತೆ ಮಳೆ...!

08:22 PM Sep 02, 2023 IST | suddionenews
ಏಷ್ಯಾ ಕಪ್   2023   ಪಾಕ್ ವೇಗಿಗಳ ಅಬ್ಬರ   ಟೀಂ ಇಂಡಿಯಾ 266 ಕ್ಕೆ ಆಲೌಟ್  ಮತ್ತೆ ಮಳೆ
Advertisement

ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್
ಸ್ಟೇಡಿಯಂನಲ್ಲಿ 2023 ರ ಏಷ್ಯಾ ಕಪ್‌ನ ಮೂರನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಪೈಪೋಟಿ ನಡೆಸುತ್ತಿವೆ.

ಪಾಕ್ ವೇಗಿಗಳ ಅಬ್ಬರದಿಂದ ಟೀಂ ಇಂಡಿಯಾದ ಮೊದಲ ಶ್ರೇಣಿಯ ಆಟಗಾರರು ವಿಫಲವಾದ ಹಿನ್ನೆಲೆ ಇಶಾನ್ ಕಿಶನ್ (82), ಹಾರ್ದಿಕ್ ಪಾಂಡ್ಯ (87) ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಇಬ್ಬರೂ ಅರ್ಧಶತಕ ಸಿಡಿಸಿದ್ದರಿಂದ ಭಾರತ ತಂಡ ಉತ್ತಮ ಸ್ಕೋರ್ ಗಳಿಸಲು ಸಾಧ್ಯವಾಯಿತು. 48.5 ಓವರ್‌ಗಳಲ್ಲಿ 266 ರನ್ ಗಳಿಸಿತು.

Advertisement
Advertisement

ಪಾಕಿಸ್ತಾನದ ಬೌಲರ್‌ಗಳ ಪೈಕಿ ಶಾಹೀನ್ ಅಫ್ರಿದಿ ಅತಿ ಹೆಚ್ಚು, ನಾಲ್ಕು ವಿಕೆಟ್ ಪಡೆದರೆ, ನಸೀಮ್ ಶಾ ಮತ್ತು ಹ್ಯಾರಿಸ್ ರವೂಫ್ ತಲಾ ಮೂರು ವಿಕೆಟ್ ಪಡೆದರು. 267 ರನ್‌ಗಳ ಗುರಿಯೊಂದಿಗೆ ಪಾಕಿಸ್ತಾನ ಕಣಕ್ಕೆ ಇಳಿಯಲಿದೆ. ಸದ್ಯ ಮಳೆ ಮತ್ತೆ ಶುರುವಾಗಿದ್ದು, ಮಳೆಯು ನಿಂತ ನಂತರ ಆಟ ಮುಂದುವರೆಯಲಿದೆ.

Advertisement

Advertisement
Advertisement
Tags :
Advertisement