Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಏಷ್ಯಾ ಕಪ್ 2023 IND VS SL : ಲಂಕಾ ವಿರುದ್ಧ ಜಯ,  ಫೈನಲ್‌ ತಲುಪಿದ ಭಾರತ

07:40 AM Sep 13, 2023 IST | suddionenews
Advertisement

 

Advertisement

ಸುದ್ದಿಒನ್ ಡೆಸ್ಕ್

ಬೌಲರ್‌ಗಳು ತಮ್ಮ ಉತ್ತಮ ಪ್ರದರ್ಶನ ನೀಡಿದ್ದರಿಂದ ಭಾರತವು ಶ್ರೀಲಂಕಾ ವಿರುದ್ಧ ಏಷ್ಯಾ ಕಪ್ 2023 ಟೂರ್ನಿಯ ಸೂಪರ್-4 ಪಂದ್ಯವನ್ನು ಗೆದ್ದಿದೆ. ನಿನ್ನೆ (ಸೆಪ್ಟೆಂಬರ್ 12) ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 41 ರನ್ ಗಳ ಜಯ ಸಾಧಿಸಿದೆ. ಇದರೊಂದಿಗೆ 2023ರ ಏಷ್ಯಾಕಪ್ ಟೂರ್ನಿಯ ಫೈನಲ್ ತಲುಪಿದೆ.

Advertisement

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 49.1 ಓವರ್‌ಗಳಲ್ಲಿ 213 ರನ್‌ಗಳಿಗೆ ಆಲೌಟಾಯಿತು. ರೋಹಿತ್ ಶರ್ಮಾ (53) ಅರ್ಧಶತಕದೊಂದಿಗೆ ಮಿಂಚಿದರು. ಕೆಎಲ್ ರಾಹುಲ್ (39) ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಶ್ರೀಲಂಕಾ ಬೌಲರ್‌ಗಳ ಪೈಕಿ ದಿನುತ್ ವೆಲ್ಲಾಲ ಐದು ವಿಕೆಟ್ ಕಬಳಿಸಿದರೆ, ಚರಿತ್ ಅಸಲಂಕಾ ನಾಲ್ಕು ವಿಕೆಟ್ ಪಡೆದು ಮಿಂಚಿದರು.

ಭಾರತದ ಬೌಲರ್‌ಗಳ ಉತ್ತಮ ಪ್ರದರ್ಶನದಿಂದಾಗಿ ಶ್ರೀಲಂಕಾ 41.3 ಓವರ್‌ಗಳಲ್ಲಿ 172 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಸ್ಪಿನ್ನರ್ ಕುಲದೀಪ್ ಯಾದವ್ ನಾಲ್ಕು ವಿಕೆಟ್‌ಗಳೊಂದಿಗೆ ಅದ್ಭುತ ಪ್ರದರ್ಶನ ನೀಡಿದರು.ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದರು. ಸಿರಾಜ್ ಮತ್ತು ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.

ಅಲ್ಪ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡವನ್ನು ಕಟ್ಟಿಹಾಕುವಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಯಶಸ್ವಿಯಾದರು. ಅದ್ಭುತವಾಗಿ ಬೌಲಿಂಗ್ ಮಾಡುವ ಮೂಲಕ ತಂಡವನ್ನು ಗೆಲ್ಲಿಸಿದರು. ಬೌಲಿಂಗ್ ನಲ್ಲಿ ಬಲಿಷ್ಠರಾಗಿದ್ದ ದುನಿತ್ ವೆಲ್ಲಾಲೆ (ಔಟಾಗದೆ 42) ಬ್ಯಾಟಿಂಗ್ ನಲ್ಲೂ ಮಿಂಚಿದರೂ ಶ್ರೀಲಂಕಾ ಗೆಲ್ಲಲಾಗಲಿಲ್ಲ. ಧನಂಜಯ ಡಿ'ಸಿಲ್ವಾ (41) ಆಕರ್ಷಕ ಆಟವಾಡಿದರೂ ಲಂಕಾದ ಉಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಈ ಗೆಲುವಿನೊಂದಿಗೆ ಭಾರತ ನಾಲ್ಕು ಅಂಕಗಳೊಂದಿಗೆ ಸೂಪರ್-4 ರ ಅಗ್ರಸ್ಥಾನವನ್ನು ತಲುಪಿತು ಮತ್ತು ಏಷ್ಯಾ ಕಪ್ 2023 ರ ಫೈನಲ್ ಪ್ರವೇಶಿಸಿತು.

ಸ್ಕೋರ್ ವಿವರಗಳು 
ಭಾರತ ಇನಿಂಗ್ಸ್:
1) ರೋಹಿತ್ ಶರ್ಮಾ (ಬಿ) 53;
2) ಗಿಲ್ (ಬಿ) ವೆಲಾಲಾಗೆ 19;
3) ಕೊಹ್ಲಿ (ಸಿ) ಶನಕ (ಬಿ) ವೆಲಾಲಗೆ 3;
4) ಇಶಾನ್ ಕಿಶನ್ (ಸಿ) ವೆಲಲಾಗೆ (ಬಿ) ಅಸಲಂಕಾ 33;
5) ರಾಹುಲ್ (ಸಿ&ಬಿ) ವೆಲಾಲಾಗೆ 39;
6) ಹಾರ್ದಿಕ್ ಪಾಂಡ್ಯ (ಸಿ) ಮೆಂಡಿಸ್ (ಬಿ) ವೆಲಾಲಾಗೆ 5;
7) ಜಡೇಜಾ (ಸಿ) ಮೆಂಡಿಸ್ (ಬಿ) ಅಸಲಂಕಾ 4;
8) ಅಕ್ಷರ್ ಪಟೇಲ್ (ಸಿ) ಸಮರವಿಕ್ರಮ (ಬಿ) ತೀಕ್ಷಣ್ 26;
9) ಬುಮ್ರಾ (ಬಿ) ಅಸಲಂಕಾ 5;
10) ಕುಲದೀಪ್ (ಸಿ) ಧನಂಜಯ (ಬಿ) ಅಸಲಂಕಾ 0;
11)  ಸಿರಾಜ್ (ಔಟಾಗದೆ) 5;

ಎಕ್ಸ್ಟ್ರಾಗಳು 21; ಒಟ್ಟು (49.1 ಓವರ್‌ಗಳಲ್ಲಿ ಆಲೌಟ್) 213.

ವಿಕೆಟ್‌ಗಳ ಪತನ:
1–80, 2–90,  3–91, 4–154,  5–170, 6–172,  7–178, 8–186,  9–186, 10–213

ಬೌಲಿಂಗ್: ರಜಿತಾ 4-0-30-0, ತೀಕ್ಷಣ 9.1-0- 41-1, ಶನಕ 3-0-24-0, ಪತಿರಣ 4-0-31-0, ವೆಲಾಲಗೆ 10-1-40-5, ಧನಂಜಯ 10- 0–28– 0, ಅಸಲಂಕಾ 9–1–18–4.

ಶ್ರೀಲಂಕಾ ಇನಿಂಗ್ಸ್: 
1) ನಿಸಂಕಾ (ಸಿ) ರಾಹುಲ್ (ಬಿ) ಬುಮ್ರಾ 6;
2) ಕರುಣಾರತ್ನೆ (ಸಿ) ಗಿಲ್ (ಬಿ) ಸಿರಾಜ್ 2;
3) ಮೆಂಡಿಸ್ (ಸಿ) (ಉಪ) ಸೂರ್ಯಕುಮಾರ್ (ಬಿ) ಬುಮ್ರಾ 15;
4) ಸಮರವಿಕ್ರಮ (ಸ್ಟಂಪ್ಡ್) ರಾಹುಲ್ (ಬಿ) ಕುಲದೀಪ್ 17;
5) ಅಸಲಂಕಾ (ಸಿ) ರಾಹುಲ್ (ಬಿ) ಕುಲದೀಪ್ 22;
6) ಧನಂಜಯ (ಸಿ) ಗಿಲ್ (ಬಿ) ಜಡೇಜಾ 41;
7) ಶನಕ (ಸಿ) ರೋಹಿತ್ (ಬಿ) ಜಡೇಜಾ 9;
8) ವೆಲಾಲಗೆ (ಔಟಾಗದೆ) 42;
9) ಥಿಕ್ಷನ್ (ಸಿ) (ಉಪ) ಸೂರ್ಯಕುಮಾರ್ (ಬಿ) ಪಾಂಡ್ಯ 2;
10) ರಜಿತಾ (ಬಿ) ಕುಲದೀಪ್ 1;
11) ಪತಿರಾನ (ಬಿ) ಕುಲದೀಪ್ 0;

ಎಕ್ಸ್ಟ್ರಾಗಳು 15; ಒಟ್ಟು (41.3 ಓವರ್‌ಗಳಲ್ಲಿ ಆಲೌಟ್) 172.

ವಿಕೆಟ್‌ಗಳ ಪತನ: 1–7, 2–25, 3–25, 4–68, 5–73, 6–99, 7–162, 8–171, 9–172, 10–172

ಬೌಲಿಂಗ್: ಬುಮ್ರಾ 7-1-30-2, ಸಿರಾಜ್ 5- 2-17-1, ಪಾಂಡ್ಯ 5-0-14-1, ಕುಲದೀಪ್ 9.3- 0- 43-4, ಜಡೇಜಾ 10-0-33-2, ಅಕ್ಷರ 5 –0–29 –0.

Advertisement
Tags :
Asia Cup - 2023cricketfeaturedIND VS SLsuddioneಏಷ್ಯಾ ಕಪ್ - 2023ಭಾರತಸುದ್ದಿಒನ್
Advertisement
Next Article