Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ASIA CUP - 2023, IND vs BAN :  ವ್ಯರ್ಥವಾದ ಗಿಲ್ ಶತಕ, 11 ವರ್ಷಗಳಲ್ಲಿ ಮೊದಲ ಬಾರಿಗೆ ಸೋತ ಭಾರತ...!

07:47 AM Sep 16, 2023 IST | suddionenews
Advertisement

 

Advertisement

• ಬಾಂಗ್ಲಾದೇಶದೊಂದಿಗೆ ಕೊನೆಯ ಎಸೆತದವರೆಗೂ ರೋಚಕ ಹೋರಾಟ

• ಗೆಲುವಿಗೆ 7 ರನ್‌ಗಳ ಅಂತರದಲ್ಲಿ ಭಾರತ ಆಲೌಟ್ ಆಗಿದೆ

Advertisement

• ಶುಭಮನ್ ಗಿಲ್ ಶತಕ ವ್ಯರ್ಥವಾಯಿತು

 

ಸುದ್ದಿಒನ್ ಸ್ಪೋರ್ಟ್ಸ್ ಡೆಸ್ಕ್

ಸೂಪರ್-4 ರ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಸೋತಿದೆ. ಈ ಪಂದ್ಯದಲ್ಲಿ ಐದು ಬದಲಾವಣೆಗಳೊಂದಿಗೆ ಕಣಕ್ಕೆ ಇಳಿದ ಟೀಂ ಇಂಡಿಯಾ 266 ರನ್ ಗಳ ಗುರಿಯನ್ನು ತಲುಪಲು ಸಾಧ್ಯವಾಗಲಿಲ್ಲ.
ಗೆಲುವಿಗೆ ಕೇವಲ 7 ರನ್‌ಗಳಿರುವಾಗ ಸೋತಿದೆ.

ಭಾರತ 49.5 ಓವರ್‌ಗಳಲ್ಲಿ 259 ರನ್‌ಗಳಿಗೆ ಆಲೌಟಾಯಿತು. 11 ವರ್ಷಗಳಲ್ಲಿ ಬಾಂಗ್ಲಾದೇಶ ಏಷ್ಯಾಕಪ್‌ನಲ್ಲಿ ಭಾರತವನ್ನು ಸೋಲಿಸಿದ್ದು ಇದೇ ಮೊದಲು. ಆ ತಂಡದ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಆದರೆ, ಏಷ್ಯಾಕಪ್ ನಲ್ಲಿ ಟೀಂ ಇಂಡಿಯಾ ಈಗಾಗಲೇ ಫೈನಲ್ ತಲುಪಿರುವ ಕಾರಣ ಭಾರತಕ್ಕೆ ಇದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿತ್ತು.

ಬಾಂಗ್ಲಾದೇಶ ನೀಡಿದ 266 ರನ್‌ಗಳ ಗುರಿಯನ್ನು ಬೆನ್ನತ್ತಿದ ಭಾರತ ಮೊದಲ ಓವರ್‌ನಲ್ಲಿ ನಾಯಕ ರೋಹಿತ್ ಶರ್ಮಾ ಡಕ್ ಔಟ್ ಆದರು. ತಿಲಕ್ ವರ್ಮಾ ಕೂಡ ಒಂದೇ ಅಂಕೆಯಲ್ಲಿ ಪೆವಿಲಿಯನ್ ತಲುಪಿದರು.

ಒಂದು ಕಡೆ ವಿಕೆಟ್‌ಗಳು ಮೇಲಿಂದ ಮೇಲೆ ಬೀಳುತ್ತಿದ್ದರೂ ಯುವ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಛಲದಂಕ ಮಲ್ಲನಂತೆ  ಸಾಧ್ಯವಾದಾಗಲೆಲ್ಲಾ ಚೆಂಡನ್ನು ಬೌಂಡರಿಗೆ ಕಳುಹಿಸುವ ಮೂಲಕ ಸ್ಕೋರ್ ಬೋರ್ಡ್ ನಲ್ಲಿ  ರನ್‌ಗಳ ಏರಿಕೆಗೆ ಅಪಾರ ಕೊಡುಗೆ ನೀಡಿದರು.

ಉತ್ತಮ ಬ್ಯಾಟಿಂಗ್ ನಡೆಸಿದ ಗಿಲ್ ಶತಕ ಪೂರೈಸಿದರು. 2023ರಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಎನಿಸಿಕೊಂಡರು. ಗಿಲ್ 36 ಇನ್ನಿಂಗ್ಸ್‌ಗಳಲ್ಲಿ 6 ಶತಕಗಳನ್ನು ಗಳಿಸಿದರು. ನಂತರದ ಸ್ಥಾನದಲ್ಲಿರುವ ಕೊಹ್ಲಿ 22 ಇನ್ನಿಂಗ್ಸ್ ಗಳಲ್ಲಿ 5 ಶತಕ ಸಿಡಿಸಿದ್ದಾರೆ.  133 ಎಸೆತಗಳಲ್ಲಿ 121 ರನ್ ಗಳಿಸಿ ಅಂತಿಮವಾಗಿ ಪೆವಿಲಿಯನ್ ತಲುಪಿದರು.
ಗಿಲ್ 43.4 ಓವರ್‌ಗಳಲ್ಲಿ 209 ರನ್‌ಗಳಿಗೆ ಔಟಾದರು.

ಸೋಲನ್ನೇ ಅಂತಿಮ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಶಾರ್ದೂಲ್ ಠಾಕೂರ್ (11) ಮತ್ತು ಅಕ್ಷರ್ ಪಟೇಲ್ (34 ಎಸೆತಗಳಲ್ಲಿ 42) ಟೀಂ ಇಂಡಿಯಾ ಪಾಳೆಯದಲ್ಲಿ ಭರವಸೆ ಮೂಡಿಸಿದರು.  ಆದರೆ ಕೊನೆಗೆ ಇಬ್ಬರೂ ಔಟಾಗಿದ್ದರಿಂದ ಟೀಂ ಇಂಡಿಯಾ ಸೋಲನುಭವಿಸಿತು. 49.5 ಓವರ್‌ಗಳಲ್ಲಿ 259 ರನ್‌ಗಳಿಗೆ ಆಲೌಟ್ ಆಯಿತು. 2023ರ ಏಷ್ಯಾಕಪ್‌ನಲ್ಲಿ ಭಾರತಕ್ಕೆ ಇದು ಮೊದಲ ಸೋಲು.

ಪಂದ್ಯದಲ್ಲಿ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಬಾಂಗ್ಲಾದೇಶ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿತು. ಒಂದು ಹಂತದಲ್ಲಿ ಅಲ್ಪ ಮೊತ್ತಕ್ಕೆ ಸೀಮಿತವಾದಂತೆ ತೋರಿದ ಬಾಂಗ್ಲಾದೇಶ, ನಾಯಕ ಶಕೀಬ್ ಅಲ್ ಹಸನ್ (80) ಹಾಗೂ ತೌಹಿದ್ ಹ್ರಿದೊಯ್ (54) ರನ್ ಗಳೊಂದಿಗೆ ತಂಡಕ್ಕೆ ಉತ್ತಮ ಸ್ಕೋರ್ ನೀಡಿದರು. ಭಾರತದ ಬೌಲರ್‌ಗಳ ಪೈಕಿ ಶಾರ್ದೂಲ್ ಠಾಕೂರ್ 3 ಮತ್ತು ಶಮಿ 2 ವಿಕೆಟ್ ಪಡೆದರು.

ಈ ಪಂದ್ಯದಲ್ಲಿ ಭಾರತ ಐದು ಬದಲಾವಣೆಗಳೊಂದಿಗೆ ಕಣಕ್ಕೆ‌ ಇಳಿದಿತ್ತು. ವಿರಾಟ್ ಕೊಹ್ಲಿ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಮತ್ತು ಉಪನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್ ಮತ್ತು ಪ್ರಸಾದ್ ಕೃಷ್ಣ ತಂಡದಲ್ಲಿದ್ದರು.

ಸ್ಕೋರ್ ವಿವರಗಳು  
ಬಾಂಗ್ಲಾದೇಶ ಇನ್ನಿಂಗ್ಸ್: 
1) ತಂಜೀದ್ (ಬಿ) ಶಾರ್ದೂಲ್ 13;
2) ಲಿಟನ್ ದಾಸ್ (ಬಿ) ಶಮಿ 0;
3) ಅನಾಮುಲ್ (ಸಿ) ರಾಹುಲ್ (ಬಿ) ಶಾರ್ದೂಲ್ 4;
4) ಶಾಕಿಬ್ (ಬಿ) ಶಾರ್ದೂಲ್ 80;
5) ಮೀರಜ್ (ಸಿ) ರೋಹಿತ್ (ಬಿ) ಅಕ್ಷರ 13;
6) ತೌಹೀದ್ (ಸಿ) ತಿಲಕ್ (ಬಿ) ಶಮಿ 54;
7) ಶಮಿಮ್ (ಎಲ್ಬಿ) (ಬಿ) ಜಡೇಜಾ 1;
8) ನಸುಮ್ (ಬಿ) ಪ್ರಸಿದ್ಧ್ 44;
9) ಮೆಹದಿ ಹಸನ್ (ಔಟಾಗದೆ) 29; 
10) ತಂಜಿಮ್ (ಔಟಾಗದೆ) 14; 

ಎಕ್ಸ್ಟ್ರಾಗಳು 13; ಒಟ್ಟು (50 ಓವರ್‌ಗಳಲ್ಲಿ 8 ವಿಕೆಟ್‌ಗೆ) 265.

ವಿಕೆಟ್‌ಗಳ ಪತನ: 1–13, 2–15, 3–28, 4–59, 5–160, 6–161, 7–193, 8–238.

ಬೌಲಿಂಗ್: ಶಮಿ 8-1-32-2, ಶಾರ್ದೂಲ್ 10-0-65-3, ಪ್ರಸಿದ್ಧ್ 9-0-43-1, ಅಕ್ಷರ್ ಪಟೇಲ್ 9-0-47-1, ತಿಲಕ್ 4-0-21-0, ಜಡೇಜಾ 10 –1–53–1.

ಭಾರತದ ಇನ್ನಿಂಗ್ಸ್
1) ರೋಹಿತ್ (ಸಿ) ಅನಾಮುಲ್ (ಬಿ) ತಂಜಿಮ್ 0;
2) ಗಿಲ್ (ಸಿ) ತೌಹೀದ್ (ಬಿ) ಮೆಹದಿ 121;
3) ತಿಲಕ್ (ಬಿ) ತಂಜಿಮ್ 5;
4) ಕೆಎಲ್ ರಾಹುಲ್ (ಸಿ) ಶಮೀಮ್ (ಬಿ) ಮೆಹದಿ 19;
5) ಇಶಾನ್ ಕಿಶನ್ (ಎಲ್ಬಿ) (ಬಿ) ಮಿರಾಜ್ 5;
6) ಸೂರ್ಯಕುಮಾರ್ (ಬಿ) ಶಕೀಬ್ 26;
7) ಜಡೇಜಾ (ಬಿ) ಮುಸ್ತಫಿಜುರ್ 7;
8) ಅಕ್ಷರ್ (ಸಿ) ತಂಝೀದ್ (ಬಿ) ಮುಸ್ತಫಿಜುರ್ 42;
9) ಶಾರ್ದೂಲ್ (ಸಿ) ಮೀರಜ್ (ಬಿ) ಮುಸ್ತಫಿಜುರ್ 11;
10) ಶಮಿ (ರನ್ ಔಟ್) 6;
11) ಪ್ರಸಿದ್ಧ್ (ಔಟಾಗದೆ) 0; 

ಎಕ್ಸ್ಟ್ರಾಗಳು 17; ಒಟ್ಟು (49.5 ಓವರ್‌ಗಳಲ್ಲಿ ಆಲೌಟ್) 259.

ವಿಕೆಟ್‌ಗಳ ಪತನ: 1–2, 2–17, 3–74, 4–94, 5–139, 6–170, 7–209, 8–249, 9–254, 10–259.

ಬೌಲಿಂಗ್: ತಂಝೀಮ್ 7.5-1-32-2, ಮುಸ್ತಫಿಜುರ್ 8-0-50-3, ನಸುಮ್ 10-0-50-0, ಶಕೀಬ್ 10-2-43-1, ಮೆಹದಿ ಹಸನ್ 9-1-50-2, ಮಿರಾಜ್ 5 –0–29–1

2023 ಏಷ್ಯಾಕಪ್‌ನ ಅಂತಿಮ ಪಂದ್ಯ ಭಾನುವಾರ (ಸೆಪ್ಟೆಂಬರ್. 17) ನಡೆಯಲಿದೆ. ಭಾರತ-ಶ್ರೀಲಂಕಾ ತಂಡಗಳು ತಮ್ಮ ಭವಿಷ್ಯವನ್ನು ನಿರ್ಧರಿಸಲಿವೆ.

Advertisement
Tags :
Asia Cup - 2023featuredIND vs BANsuddioneಗಿಲ್ಭಾರತಶತಕಸುದ್ದಿಒನ್
Advertisement
Next Article