ಕುಮಾರಸ್ವಾಮಿಯನ್ನ ಕರಿಯ ಎಂದಿದ್ದಕ್ಕೆ ಕ್ಷಮೆ ಕೇಳಿದ ಜಮೀರ್..!
ಮೈಸೂರು: ಚನ್ನಪಟ್ಟಣ ಉಪಚುನಾವಣೆಯ ರಂಗು ಜೋರಾಗಿದೆ. ಗೆಲುವಿನ ಗದ್ದುಗೆಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಯುದ್ಧವನ್ನೇ ನಡೆಸುತ್ತಿವೆ. ಇದರ ನಡುವೆ ಜಮೀರ್ ಅಹ್ಮದ್ ಮಾತಿನ ಬರದಲ್ಲಿ ನಾಲಿಗೆ ಹರಿಬಿಟ್ಟಿದ್ದರು. ಕುಮಾರಸ್ವಾಮಿ ಅವರನ್ನು ಕರಿಯ ಎಂದು ಹೇಳಿದ್ದರು. ಇದೀಗ ಆ ಮಾತಿಗೆ ಕ್ಷಮೆ ಕೋರಿದ್ದಾರೆ.
ಭಾನುವಾರ ಚನ್ನಪಟ್ಟಣದಲ್ಲಿ ಪ್ರಚಾರ ಕಾರ್ಯ ನಡೆಸುತ್ತಿರುವಾಗ ಜಮೀರ್ ಅಹ್ಮದ್ ನಾಲಿಗೆ ಹರಿಬಿಟ್ಟಿದ್ದರು. ಬಿಜೆಪಿಯವರಿಗಿಂತ ಕರಿಯ ಕುಮಾರಸ್ವಾಮಿ ಹೆಚ್ಚು ಡೇಂಜರ್ ಎಂದು ಉರ್ದುವಿನಲ್ಲಿ ಹೇಳಿದ್ದರು. ಈ ಹೇಳಿಕೆ ವಿರೋಧ ಪಕ್ಷಗಳಿಗೆ ಆಹಾರವಾಗಿತ್ತು. ಆಡಳಿತ ಪಕ್ಷವನ್ನು ಈ ಮಾತಿನಿಂದಾನೇ ಮಣಿಸುವ ಪ್ರಯತ್ನ ನಡೆಸಿದರು. ಕಾಂಗ್ತೆಸ್ ನಾಯಕರಲ್ಲಿಯೇ ಈ ಮಾತಿಗೆ ಆಕ್ಷೇಪ ವ್ಯಕ್ತವಾಗಿತ್ತು. ಜಮೀರ್ ಮಾತಿನಿಂದ ಕಾಂಗ್ರೆಸ್ ಕೂಡ ಮುಜುಗರಕ್ಕೊಳಗಾಯಿತು. ಈ ಮಾತು ಚುನಾವಣೆಯ ಮೇಲೆ ಪರಿಣಾಮ ಬೀರಬಾರದೆಂದು ಈಗ ಸ್ಪಷ್ಟನೆ ಸಮೇತ ಕ್ಷಮೆ ಕೇಳಿದ್ದಾರೆ. ತಾವ್ಯಾಕೆ ಕುಮಾರಸ್ವಾಮಿ ಅವರನ್ನು ಕರಿಯ ಎಂದಿದ್ದು ಎಂಬುದನ್ನು ವಿವರಿಸಿದ್ದಾರೆ.
'ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ನಾನು ಹೇಳಿದ ಉದ್ದೇಶವೆ ಬೇರೆ. ಈ ಹಿಂದೆ ನಾನು ಅವರು ಜೊತೆಯಲ್ಲಿದ್ದಾಗ ನನ್ನನ್ನು ಅವರು ಕರೆಯುತ್ತಾ ಇದ್ದದ್ದು ಕುಳ್ಳ ಎಂದು. ನಾನು ಅವರನ್ನು ಕರೆಯುತ್ತಾ ಇದ್ದದ್ದು ಕರಿಯಣ್ಣ ಎಂದು. ಪ್ರೀತಿಯಿಂದ ಅವರು ಕುಳ್ಳ ಎಂದಾಗ ನಾನು ಅಷ್ಟೇ ಪ್ರೀತಿಯಿಂದ ಕರಿಯಣ್ಣ ಎನ್ನುತ್ತಿದ್ದೆ. ಅದನ್ನಷ್ಟೇ ಈಗಲೂ ಹೇಳಿರುವುದು. ಅವರ ಮೇಲೆ ನನಗೂ ಗೌರವವಿದೆ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳಲು ಸಿದ್ಧನಿದ್ದೇನೆ ಎಂದು ತಾವೂ ಆಡಿದ ಮಾತಿಗೆ ಕ್ಷಮೆ ಕೇಳಿದ್ದಾರೆ. ಅದರಲ್ಲೂ ಜೆಡಿಎಸ್ ಕಾರ್ಯಕರ್ತರಿಗೆ ಕ್ಷಮೆಯಾಚಿಸಿದ್ದಾರೆ.