ಯುವರಾಜ್ ಕುಮಾರ್-ಶ್ರಿದೇವಿ ಡಿವೋರ್ಸ್ : ದೊಡ್ಮನೆ ಕುಟುಂಬದಲ್ಲಿ ಮೊದಲ ಡಿವೋರ್ಸ್
ಬೆಂಗಳೂರು: ದೊಡ್ಮನೆಯ ಕುಡಿ ಯಿವ ರಾಜ್‍ಕುಮಾರ್ ಹಾಗೂ ಶ್ರೀದೇವಿ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಸ್ಯಾಂಡಲ್ವುಡ್ನ ದೊಡ್ಮನೆಯಲ್ಲಿ ಬೆಳಕಿಗೆ ಬಂದಿರೋ ಮೊದಲ ಡಿವೋರ್ಸ್ ಕೇಸ್ ಇದಾಗಿದೆ. ಕಳೆದ 4 ದಿನಗಳ ಹಿಂದೆಯೇ ಯುವ ರಾಜ್‌ಕುಮಾರ್ ಅವರು ಫ್ಯಾಮಿಲಿ ಕೋರ್ಟ್ನಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಯುವ ರಾಜ್‍ಕುಮಾರ್ ಪತ್ನಿ ಶ್ರೀದೇವಿ ರಾಜ್ ಅಕಾಡೆಮಿ ನಡೆಸಿಕೊಂಡು ಹೋಗುತ್ತಿದ್ದರು. ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಶ್ರೀದೇವಿ ಮೈಸೂರು ಮೂಲದವರಾಗಿದ್ದರು. ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಯುವ-ಶ್ರೀದೇವಿ ದೂರವಾಗುತ್ತಿದ್ದಾರೆ. ಶ್ರೀದೇವಿಗೆ ಈಗಾಗಲೇ ಯುವರಾಜ್ ಕುಮಾರ್ ಕಡೆಯಿಂದ ನೋಟೀಸ್ ಕೂಡ ಕಳುಹಿಸಲಾಗಿದೆ. ಆದರೆ ಶ್ರೀದೇವಿ ಸದ್ಯಕ್ಕೆ ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ.
ಶ್ರೀದೇವಿ ವಿರುದ್ಧ ಕ್ರೌರ್ಯದ ಆರೋಪ ಮಾಡಿರೋ ಯುವರಾಜ್ ಕುಮಾರ್, ಶಾಂತಿನಗರದ ಫ್ಯಾಮಿಲಿ ಕೋರ್ಟ್ ನಲ್ಲಿ ಡಿವೋರ್ಸ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. 6ನೇ ತಾರೀಖು ಅರ್ಜಿ ಸಲ್ಲಿಸಿರುವ ಯುವರಾಜ್‌ಕುಮಾರ್, ಕೋರ್ಟ್ ನಿಂದ ಯುವ ಪತ್ನಿ ಶ್ರೀದೇವಿಗೆ ನೋಟಿಸ್ ನೀಡಿದ್ದಾರೆ. ಶ್ರೀದೇವಿ ಮೇಲೆ ಮಾನಸಿಕ ಕಿರುಕುಳ ಕೊಟ್ಟ ಆರೋಪ ಮಾಡಿದ್ದಾರೆ.
ಕಳೆದ ಆರು ತಿಂಗಳ ಹಿಂದೆಯೇ ದಂಪತಿ ದೂರ ದೂರ ಆಗಿದ್ದರು ಎನ್ನಲಾಗ್ತಾ ಇದೆ. ಹೀಗಾಗಿಯೇ ಯುವ ಸಿನಿಮಾದ ಯಾವ ಇವೆಂಟ್ ನಲ್ಲೂ ಶ್ರೀದೇವಿ ಕಾಣಿಸಿಕೊಂಡಿರಲಿಲ್ಲ. ಸಿನಿಮಾ ಸಕ್ಸಸ್ ವೇಳೆಯೂ ಬಂದಿರಲಿಲ್ಲ. ಸದ್ಯ ಅಮೆರಿಕಾದಲ್ಲಿರುವ ಶ್ರೀದೇವಿ, ಈಗ ಡಿಸ್ಟರ್ಬ್ ಆಗಿದ್ದೀನಿ ಮಾತನಾಡುವುದಕ್ಕೆ ಆಗಲ್ಲ ಎಂದೇ ಹೇಳಿದ್ದಾರೆ. ಆದರೆ ಇಬ್ಬರ ನಡುವೆ ಏನಾಯಿತು, ಡಿವೋರ್ಸ್ ತನಕ ಯಾಕೆ ಬಂದ್ರು ಎಂಬುದೇ ಅಭಿಮಾನಿಗಳ ಬೇಸರವಾಗಿದೆ.