Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನಿನ್ನೆ ಅವಮಾನ.. ಇಂದು ಸನ್ಮಾನ : ರೈತನ ಬಳಿ ಕ್ಷಮೆ ಕೇಳಿದ ಜಿಟಿ ಮಾಲ್ ಸಿಬ್ಬಂದಿ..!

01:31 PM Jul 17, 2024 IST | suddionenews
Advertisement

ಬೆಂಗಳೂರು: ರಾಯಚೂರು ಮೂಲದ ರೈತನಿಗೆ ನಿನ್ನೆ ಜಿಟಿ ಮಾಲ್ ಸಿಬ್ಬಂದಿ ಅವಮಾನ ಮಾಡಿದ್ದರು. ಪಂಚೆ ಹಾಕಿದ್ದ ರೈತನನ್ನು ಒಳಗೆ ಬಿಡದೆ ಅವಮಾನ ಮಾಡಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಇಂದು ಕನ್ನಡಪರ ಸಂಘಟನೆಯವರು ಜಿಟಿ ಮಾಲ್ ಮುಂದೆ ಪ್ರತಿಭಟನೆಗೆ ಕೂತಿದ್ದರು. ರೂಪೇಶ್ ರಾಜಣ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು.

Advertisement

ಇನ್ನು ಪಂಚೆ ಹಾಕಿದ್ದವರನ್ನು ಒಳಗೆ ಬಿಡಲ್ಲ ಎಂದಿದ್ದ ಜಿಟಿ ಮಾಲ್ ಒಳಗೆ ಇಂದು ಬೆಳಗ್ಗೆಯಿಂದ ಪಂಚೆ ಹಾಕಿದ ಹಿರಿಯರೇ ಭೇಟಿ ನೀಡಿದ್ದರು. ಪ್ರತಿಭಟನೆ ದೊಡ್ಡ ಮಟ್ಟಕ್ಕೆ ತಲುಪುವುದಕ್ಕೂ ಮುನ್ನ ಎಚ್ಚೆತ್ತ ಜಿಟಿ ಮಾಲ್ ಸಿಬ್ಬಂದಿ ರೈತನನ್ನು ಕ್ಷಮೆ ಕೇಳಿದ್ದಾರೆ. ರೈತ ಫಕೀರಪ್ಪನನ್ನು ಕರೆಸಿ ಕ್ಷಮೆಯಾಚಿಸಿ, ಹಾರ ಹಾಕಿ ಸನ್ಮಾಮ ಮಾಡಿದ್ದಾರೆ. ನಿನ್ನೆ ಅವಮಾನ ಮಾಡಿದ್ದವರೇ ಇಂದು ಫಕೀರಪ್ಪನಿಗೆ ಸನ್ಮಾನ ಮಾಡಿದ್ದಾರೆ.

ರೈತ ಫಕೀರಪ್ಪ ಮೂಲತಃ ರಾಯಚೂರಿನವರು. ಅವರ ಮಗ ನಾಗರಾಜು ಇಲ್ಲೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗನನ್ನು ನೋಡುವುದಕ್ಕೆ ಫಕೀರಪ್ಪ ಬೆಂಗಳೂರಿಗೆ ಬಂದಿದ್ದರು. ಎಲ್ಲಾ ಮಕ್ಕಳಿಗೂ ಅಪ್ಪ ಅಮ್ಮನನ್ನು ಸುತ್ತಾಡಿಸುವ ಆಸೆ ಇದ್ದೆ ಇರುತ್ತದೆ. ಅದೆಲ್ಲೂ ಬೆಂಗಳೂರೆಂಬ ಮಹಾನಗರದಲ್ಲಿ ಹಳ್ಳಿ ಪ್ರದೇಶದಲ್ಲಿರುವ ಅಪ್ಪ-ಅಮ್ಮನಿಗೆ ತೋರಿಸಲು ಸಾಕಷ್ಟು ಪ್ರದೇಶಗಳಿದ್ದಾವೆ. ಅದರಂತೆ ನಾಗರಾಜು, ತನ್ನ ತಂದೆ ಕರೆದುಕಿಂಡು ಜಿಟಿ ಮಾಲ್ ಗೆ ಹೋಗಿದ್ದರು. ಸಿನಿಮಾ ತೋರಿಸಿಕೊಂಡು ಬರುವುದಕ್ಕೆಂದು. ಆದರೆ ಪಂಚೆ ತೊಟ್ಟಿದ್ದ ಫಕೀರಪ್ಪನನ್ನು ಸಿಬ್ಬಂದಿಗಳು ಗೇಟಲ್ಲಿಯೇ ತಡೆದರು. ಒಳಗೆ ಬಿಡದೆ, ನಮಗೆ ಪಂಚೆ ತೊಟ್ಟವರನ್ನು ಬಿಡಬಾರದೆಂಬ ಸೂಚನೆ ಇದೆ ಎಂದು ದಬಾಯಿಸಿ ಕಳುಹಿಸಿದ್ದರು. ಇದೀಗ ಮಾಲ್ ಸಿಬ್ಬಂದಿಗಳ ತಪ್ಪು ಅವರಿಗೆ ಅರಿವಾಗುವಂತೆ ಮಾಧ್ಯಮದವರು, ಕನ್ನಡ ಪರ ಸಂಘಟನೆಗಳು ಮಾಡಿದ್ದು, ಕ್ಷಮೆ ಕೇಳಿದ್ದಾರೆ.

Advertisement

Advertisement
Tags :
apologized to the farmerGT Mall staffToday's honorYesterday's shameಇಂದು ಸನ್ಮಾನಕ್ಷಮೆಜಿಟಿ ಮಾಲ್ ಸಿಬ್ಬಂದಿನಿನ್ನೆ ಅವಮಾನರೈತ
Advertisement
Next Article