Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಿದ್ದರಾಮಯ್ಯ ಸರ್ಕಾರಕ್ಕೆ ವರ್ಷದ ಸಂಭ್ರಮ : ಬಿಜೆಪಿಯ ಪ್ಲ್ಯಾನ್ ಏನು ಗೊತ್ತಾ..?

03:35 PM May 17, 2024 IST | suddionenews
Advertisement

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ 135 ಕ್ಷೇತ್ರದಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿ, ಸ್ವತಂತ್ರವಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ಇದೀಗ ಆ ಸಂತಸದ ಗಳಿಗೆಗೆ ಭರ್ತಿ ಒಂದು ವರ್ಷವಾಗುತ್ತಿದೆ. ಮೇ20ಕ್ಕೆ ಸರ್ಕಾರ ರಚನೆ ಮಾಡಿ ಒಂದು ವರ್ಷ. ಈ ಒಂದು ವರ್ಷದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರ ಘೋಷಿಸಿದ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಇದರಿಂದ ರಾಜ್ಯದ ಮಹಿಳೆಯರು ಕೂಡ ಸಂತಸದಲ್ಲಿದ್ದಾರೆ.

Advertisement

ಈ ಸುಸಂದರ್ಭದಲ್ಲಿ ಬಿಜೆಪಿ ಆರೋಪಗಳ ಪಟ್ಟಿ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿದೆ. ರಾಜ್ಯದಲ್ಲಿ ಕೆಲವೊಂದು ಕೆಟ್ಟ ಘಟನೆಗಳು ನಡೆಯುತ್ತಿವೆ. ಅದರಲ್ಲಿ ಕೊಲೆಯೂ ಒಂದು. ಈ ಪ್ರಕರಣಗಳನ್ನು ಮುಂದಿಟ್ಟುಕೊಂಡು ಕಾನೂನು ಸುವ್ಯವಸ್ಥೆಯ ಬಗ್ಗೆ ಮಾತನಾಡಲು ಸಿದ್ಧತೆ ಮಾಡಿಕೊಂಡಿದೆ. ಕಾನೂನು ಸುವ್ಯವಸ್ಥೆಯ ವೈಫಲ್ಯಗಳನ್ನು ಪಟ್ಟಿ ಮಾಡಿಕೊಂಡು ಇದು ಸರ್ಕಾರದ ನೆಗೆಟಿವ್ ರೋಲ್ ಎಂದು ಬಿಂಬಿಸುವ ಪ್ಲ್ಯಾನ್ ಇದಾಗಿದೆ. ಅಷ್ಟೇ ಅಲ್ಲದೆ ಬರ ನಿರ್ವಹಣೆಯಲ್ಲೂ ವಿಫಲವಾಗಿದೆ, ರೈತರಿಗೆ ಬರಬೇಕಾದ ಪರಿಹಾರ ಸಿಕ್ಕಿಲ್ಲ ಎಂಬೆಲ್ಲಾ ಅಂಶಗಳನ್ನಿಟ್ಟುಕೊಂಡು ಸರ್ಕಾರದ ಮೇಲೆ ಮುಗಿಬೀಳಲು ಸಿದ್ಧವಾಗಿದೆ.

ಇನ್ನು ಕಾಂಗ್ರೆಸ್ ಒಂದು ವರ್ಷ ಪೂರೈಸಿರುವ ಸಂಭ್ರಮವನ್ನು ದೊಡ್ಡ ಮಟ್ಟದಲ್ಲಿಯೇ ಸೆಲೆಬ್ರೇಟ್ ಮಾಡಲಿದೆ. ಸಾಧನಾ ಸಮಾವೇಶ ಮಾಡುವ ಮೂಲಕ, ರಾಜ್ಯದ ಜನತೆಗೆ ಏನೆಲ್ಲಾ ಕೊಟ್ವಿ, ಮುಂದೆ ಏನೆಲ್ಲಾ ಕೊಡಲಿದ್ದೇವೆ ಎಂಬೆಲ್ಲಾ ವಿಚಾರಗಳನ್ನು ಜನತೆಗೆ ಮುಟ್ಟಿಸಲಿದ್ದಾರೆ. ಲೋಕಸಭಾ ಚುನಾವಣೆಯೂ ಮುಗಿದಿದ್ದು, ಜೂನ್ 4ಕ್ಕೆ ಫಲಿತಾಂಶ ಬರಲಿದೆ‌. ರಾಜ್ಯದಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆದ್ದುಕೊಂಡರೆ ಆ ಸಂಭ್ರಮವನ್ನು ಒಟ್ಟಿಗೆ ಸೇರಿ ಮಾಡುವ ಯೋಜನೆಯನ್ನು ಕಾಂಗ್ರೆಸ್ ಹಾಕಿಕೊಂಡಿದೆಯಂತೆ.

Advertisement

Advertisement
Tags :
BjpBJP's planCM SiddaramaiahSiddaramaiah governmentYear celebrationಬಿಜೆಪಿವರ್ಷದ ಸಂಭ್ರಮಸಿದ್ದರಾಮಯ್ಯಸಿದ್ದರಾಮಯ್ಯ ಸರ್ಕಾರ
Advertisement
Next Article