Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಯಾಸೀರ್ ವರ್ಸಸ್ ಭರತ್ ಬೊಮ್ಮಾಯಿ : ಬೆಟ್ಟಿಂಗ್ ನಲ್ಲಿ ಜೋಡೆತ್ತನ್ನೇ ಮುಂದಿಟ್ಟ ರೈತ..!

02:29 PM Nov 20, 2024 IST | suddionenews
Advertisement

ಹಾವೇರಿ: ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಬಗ್ಗೆಯೇ ಎಲ್ಲರಿಗೂ ಗೊತ್ತಿರುವುದೇ. ಆದರೆ ರಾಜಕೀಯ ವಿಚಾರದಲ್ಲೂ ಬೆಟ್ಟಿಂಗ್ ನಡೆಯಲಿದೆ. ಅದರಲ್ಲೂ ರೈತರೇ ಬೆಟ್ಟಿಂಗ್ ನಡೆಸಲು ನಿಂತಿದ್ದಾರೆ. ರಾಜ್ಯದಲ್ಲಿ ಮೂರು ಕ್ಷೇತ್ರಗಳ ಉಪಚುನಾವಣೆ ನಡೆದಿದೆ. ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಮೂರು ಕ್ಷೇತ್ರಗಳ ಚುನಾವಣೆಗಳು ಸಾಕಷ್ಟು ಗಮನ ಸೆಳೆದಿತ್ತು. ಮೂರು ಕ್ಷೇತ್ರದಲ್ಲೂ ಗೆಲ್ಲುವ ಅಭ್ಯರ್ಥಿಗಳ ಬಗ್ಗೆ ಸಹಜವಾಗಿಯೇ ಕುತೂಹಲವೂ ಇತ್ತು. ಚುನಾವಣೆಯೂ ಮುಗಿದಿದೆ. ಇದೀಗ ಬೆಟ್ಟಿಂಗ್ ದಂಧೆ ಜೋರು ಸದ್ದು ಮಾಡುತ್ತಿದೆ.

Advertisement

ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಥಳೀಯರು ಮನೆ, ಮಠ, ಕುರಿ ಕೋಳಿಗಳನ್ನೇ ಅಡವಿಟ್ಟಿದ್ದರು. ಆದರೆ ಇದೀಗ ಬೆಟ್ಟಿಂಗ್ ಭೂತ ಶಿಗ್ಗಾಂವಿ ಕಡೆಗೂ ಪಯಷ ಬೆಳೆಸಿದ್ದು, ರೈತರು ಜೋಡೆತ್ತುಗಳನ್ಬೇ ಬೆಟ್ಟಿಂಗ್ ದಂಧೆಯ ಮುಂದಿಟ್ಟಿದ್ದಾರೆ. ರೈತರಿಗೆ ಹಸುಗಳೇ ಜೀವನ, ಜಮೀನೇ ಬದುಕು. ಹೀಗಿರುವಾಗ ತಮ್ಮ ಬದುಕನ್ನೇ ಬೆಟ್ಟಿಂಗ್ ದಂಧೆಗೆ ಬಾಜಿ ಕಟ್ಟಿದ್ದಾರೆ.

ಶಿಗ್ಗಾಂವಿ ಉಪಚುನಾವಣಾ ಕಣದಲ್ಲಿ ಸಂಸದ ಬಸವರಾಜ್ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಅವರು ಬಿಜೆಪಿಯಿಂದ ಸ್ಪರ್ಧೆ ಮಾಡಿದ್ರೆ, ಯಾಸಿರ್ ಅಹ್ಮದ್ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ದರು. ನವೆಂಬರ್ 23ಕ್ಕೆ ಫಲಿತಾಂಶ ಹೊರಬೀಳಲಿದೆ. ಇನ್ನೆರಡು ದಿನಗಳು ಮಾತ್ರ ಬಾಕಿ ಇದೆ. ಈಗಾಗಲೇ ಜನರ ಮನಸ್ಸಲ್ಲಿ ಯಾರು ಗೆಲ್ಲಬಹುದು ಎಂಬ ಕುತೂಹಲವಿದ್ದರೆ, ಫಾಲೋವರ್ಸ್ ಗಳಿಗೆಲ್ಲ ನಮ್ಮ ನೆಚ್ಚಿನ ನಾಯಕನೇ ಗೆಲ್ಲಬೇಕು ಎಂಬ ಹಂಬಲ ಇದೆ. ಜೊತೆಗೆ ನಿರೀಕ್ಷೆಯೂ ಇದೆ. ಅದೇ ಹುಮ್ಮಸ್ಸಿನಲ್ಲಿ ತಮ್ಮ ನಾಯಕನ ಪರವಾಗಿ ಪ್ರಾಣಿ, ಜಮೀನುಗಳನ್ನೇ ಭಾಜಿ ಕಟ್ಟಿದ್ದಾರೆ. ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಪರವಾಗಿ ಇಬ್ಬರು ಜೋಡೆತ್ತುಗಳನ್ನು ಬೆಟ್ಟಿಂಗ್ ಕಟ್ಟಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Advertisement

Advertisement
Tags :
Bharat BommaihaveriYasirಬೆಟ್ಟಿಂಗ್ಭರತ್ ಬೊಮ್ಮಾಯಿಯಾಸೀರ್ಹಾವೇರಿ
Advertisement
Next Article