ಎಸ್.ಎಂ.ಕೃಷ್ಣ ಮನೆಗೆ ಯಶ್ ಭೇಟಿ : ಮಾಜಿ ಸಿಎಂ ಬಗ್ಗೆ ರಾಕಿಬಾಯ್ ಹೇಳಿದ್ದೇನು..?
ಬೆಂಗಳೂರು: ವಯೋಸಹಜ ಅನಾರೋಗ್ಯದಿಂದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಇತ್ತೀಚೆಗಷ್ಟೇ ನಿಧನರಾಗಿದ್ದರು. ಮಂಡ್ಯ ಜಿಲ್ಲೆಯ ಹುಟ್ಟೂರಿನಲ್ಲಿ ಅಂತ್ಯ ಸಂಸ್ಕಾರವನ್ನು ನಡೆಸಲಾಗಿತ್ತು. ಆ ಸಮಯದಲ್ಲಿ ಯಶ್ ಶೂಟಿಂಗ್ ನಲ್ಲಿದ್ದ ಕಾರಣ ಬರಲು ಸಾಧ್ಯವಾಗಿರಲಿಲ್ಲ. ಇದೀಗ ಇಂದು ಎಸ್.ಎಂ.ಕೃಷ್ಣ ಅವರ ಮನೆಗೆ ಭೇಟಿ ನೀಡಿದ್ದಾರೆ. ಸದಾಶಿವನಗರದಲ್ಲಿರುವ ಮನೆಗೆ ಪತ್ನಿ ರಾಧಿಕಾ ಜೊತೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಯಶ್, ಎಸ್ ಎಂ ಕೃಷ್ಣ ಅವರನ್ನು ಈ ರಾಜ್ಯದಲ್ಲಿ ಪ್ರತಿಯೊಬ್ಬರು ಎಸ್.ಎಂ.ಕೃಷ್ಣ ಅವರನ್ನ ನೆನಪಿಸಿಕೊಳ್ಳಬೇಕು. ಅವರ ಕೊಡುಗೆ ಅಪಾರ. ಇವತ್ತು ಬೆಂಗಳೂರು ಹಾಗೂ ಇಡೀ ರಾಜ್ಯದಲ್ಲಿ ಅವರು ಮಾಡಿರುವ ಸೇವೆ ಕಣ್ಣ ಮುಂದೆ ಇದೆ. ಅವರು ಅದ್ಭುತವಾದ ಬದುಕನ್ನು ಬದುಕಿದ್ದವರು ಎಂಬುದು ಎಲ್ಲರಿಗೂ ಗೊತ್ತು. ಎಸ್.ಎಂ.ಕೃಷ್ಣ ಅವರದ್ದು ಧೀಮಂತ ವ್ಯಕ್ತಿತ್ವ.
ಅವರು ನಿಧನರಾದಾಗ ನಾವೂ ಊರಲ್ಲಿ ಇರಲಿಲ್ಲ. ಹಾಗಾಗಿ ಈಗ ಖುದ್ದಾಗಿ ಬಂಸಿದ್ದೇವೆ. ಅವರ ಆಶೀರ್ವಾದ ಸದಾ ನನ್ನ ಮೇಲೆ ಇತ್ತು. ನನ್ನ ಎಲ್ಲಾ ಬೆಳವಣಿಗೆಯ ಮೇಲೆ ಅವರ ಹಾರೈಕೆ ಇತ್ತು. ಖಂಡಿತ ಅವರನ್ನ ಮಿಸ್ ಮಾಡಿಕೊಳ್ಳುತ್ತೇವೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ. ಎಲ್ಲರಿಗೂ ಅವರು ಸದಾ ಒಳ್ಳೆಯದ್ದನ್ನೇ ಬಯಸುತ್ತಿದ್ದರು. ಅವರ ಮನಸ್ಥಿತಿಯೇ ಸದಾ ಬೆಳವಣಿಗೆಗೆ ಕಡೆ ಇದ್ದಿದ್ದರಿಂದ ಬೇರೋಬ್ಬರ ಬೆಳವಣಿಗೆ ನೋಡಿ ಹರಸುತ್ತಿದ್ದರು. ಅವರಾಗಲಿ, ಅಮ್ಮನಾಗಲಿ ಅವರ ಇಡೀ ಕುಟುಂಬವೇ ಹಾಗೆ. ಅವರನ್ನು ತುಂಬಾ ಹಿಂದೆ ಭೇಟಿಯಾಗಿದ್ದೆ. ಅವರ ಜೊತೆಗೆ ಸಮಯ ಕಳೆದಿದ್ದು ಸ್ಮರಣೀಯವಾಗಿದೆ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.