For the best experience, open
https://m.suddione.com
on your mobile browser.
Advertisement

ಯಶ್ ಮುಂದಿನ ಸಿನಿಮಾ ಅನೌನ್ಸ್ : Toxic ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರೋ ಲೇಡಿ ಯಾರು..?

11:29 AM Dec 08, 2023 IST | suddionenews
ಯಶ್ ಮುಂದಿನ ಸಿನಿಮಾ ಅನೌನ್ಸ್   toxic ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರೋ ಲೇಡಿ ಯಾರು
Advertisement

ಕೆಜಿಎಫ್ ಸರಣಿ ಮುಗಿದ ಮೇಲಂತೂ ಯಶ್ ಮುಂದಿನ ಸಿನಿಮಾಗೆ ಅಭಿಮಾನಿಗಳು ಕಾದಿದ್ದು ಅದೆಷ್ಟೋ. ಕಂಡಕಂಡಲ್ಲಿ, ಸಿಕ್ಕ ಸಿಕ್ಕಲ್ಲಿ ಮುಂದಿನ ಸಿನಿಮಾದ ಅಪ್ಡೇಟ್ ಕೇಳುತ್ತಾ ಇದ್ದರು‌. ಬರೀ ಯಶ್ ಮಾತ್ರವಲ್ಲ ರಾಧಿಕಾ ಅವರಿಗೂ ಕಾಟ ಕೊಟ್ಟಿದ್ದಾರೆ. ಅಣ್ಣನ ಮುಂದಿನ ಸಿನಿಮಾ ಯಾವಾಗ ಅಂತ ರಾಧಿಕಾ ಹಾಕು ವ ಪೋಸ್ಟರ್ ಗಳಿಗೆಲ್ಲಾ ಕಮೆಂಟ್ ಮೂಲಕ ಪ್ರಶ್ನಿಸಿದ್ದಾರೆ. ಇದೀಗ ಅದಕ್ಕೆ ಕಾಲ ಕೂಡಿ ಬಂದಿದೆ. ಕಡೆಗೂ ಯಶ್ ಸಿನಿಮಾ ಅನೌನ್ಸ್ ಆಗಿದೆ.

Advertisement

ಇಂದು ಯಶ್ 19ನೇ ಸಿನಿಮಾದ ಟೈಟಲ್ ಅನೌನ್ಸ್ ಆಗಿದೆ. ಅದುವೇ 'ಟಾಕ್ಸಿಕ್'. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಸಿನಿಮಾದ ಟೈಟಲ್ ಲಾಂಚ್ ಆಗುತ್ತಿದ್ದಂತೆ ಫ್ಯಾನ್ಸ್ ಜೋಶ್ ಜೋರಾಗಿತ್ತು. ಟೈಟಲ್ ಲಾಂಚ್ ಪೋಸ್ಟರ್ ನಲ್ಲಿ ಲುಕ್ ಕೂಡ ರಿವೀಲ್ ಆಗಿದೆ. ಆದರೆ ಸ್ವಲ್ಪೇ ಸ್ವಲ್ಪ ಕಂಡ ಯಶ್ ನೋಟವನ್ನು ಹೆಚ್ಚು ನೋಡುವ ಕಾತುರ ಸಹಜವಾಗಿಯೇ ಹೆಚ್ಚಾಗಿದೆ.

Advertisement

Advertisement

ಟಾಕ್ಸಿಕ್ ಸಿನಿಮಾವನ್ನು ಮಹಿಳಾ ನಿರ್ದೇಶಕಿಯೊಬ್ಬರು ನಿರ್ದೇಶನ ಮಾಡುತ್ತಿದ್ದಾರೆ. ಮಲಯಾಳಂ ಮೂಲದ ನಿರ್ದೇಶಕಿ ಗೀತೂ ಮೋಹನ್ ದಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಗೀತೂ ಮೋಹನ್ ದಾಸ್ ಒಂದು ಕಿರುಚಿತ್ರ ಹಾಗೂ ಎರಡು ಫೀಚರ್ ಫಿಲಂಸ್ ಮಾಡಿದ್ದಾರೆ. ಲಾಯರ್ಸ್ ಡೈಸ್ ಎಂಬ ಸಿನಿಮಾಗೆ ಎರಡು ರಾಷ್ಟ್ರ ಪ್ರಶಸ್ತಿ ಲಭಿಸಿವೆ. ಇವರ ನಿರ್ದೇಶನದ ಮೂತನ್ ಸಿನಿಮಾ ಕೂಡ ಹಲವು ಫಿಲ್ಮ ಫೆಸ್ಟಿವಲ್ ಗಳಲ್ಲಿ ಪ್ರಸಾರ ಕಂಡಿದೆ. ಹೀಗಾಗಿ ಇವರು ಯಶ್ 19 ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರುವುದರಿಂದ ಕುತೂಹಲ ಹೆಚ್ಚಾಗಿದೆ.

Advertisement
Tags :
Advertisement