ತುಂಗಾ ಭದ್ರಾ ಡ್ಯಾಂ ನೀರು ಉಳಿಸಲು ಕಾರ್ಮಿಕರು ಪ್ರಾಣವನ್ನೆ ಪಣಕ್ಕಿಟ್ಟಿದ್ದರು : ವಿಡಿಯೋ ನೋಡಿ
ವಿಜಯಪುರ: ತುಂಗಾ ಭದ್ರಾ ಜಲಾಶಯದ 19ನೇ ಗೇಟ್ ಲಿಂಕ್ ಕಟ್ ಆಗಿ ನೀರು ಪೋಲಾಗುತ್ತಿತ್ತು. ಆದ್ರೆ ಡ್ಯಾಂ ಸ್ಪೆಷಲಿಸ್ಟ್ ಡಾ.ಕನ್ನಯ್ಯ ತಂಡ ನೀರು ಪೋಲಾಗುವುದನ್ನು ತಪ್ಪಿಸಿದ್ದಾರೆ. ಸತತ 36 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಎ್ಯಾಂ ತಾತ್ಕಾಲಿಕ ಸ್ಟಾಪ್ ಲಾಗ್ ಅಳವಡಿಸಿದ್ದಾರೆ. ಹರಿಯುವ ನೀರಿನಲ್ಲಿಯೇ ರಿಪೇರಿ ಕಾರ್ಯ ಮಾಡಿ ಯಶಸ್ವಿಯಾಗಿದ್ದಾರೆ. ಇತಿಹಾಸದಲ್ಲಿಯೇ ಇದು ಎಲ್ಲರೂ ತಿರುಗಿ ನೋಡುವಂತೆ ಮಾಡಿದ್ದಾರೆ. 30 ಟಿಂಎಂಸಿ ನೀರನ್ನು ಉಳಿಸಿದ್ದಾರೆ. ಹೀಗೆ ಸತತ ಹೋರಾಟದ ಫಲವಾಗಿ ಯಶಸ್ವಿ ಕಾರ್ಯಾಚರಣೆ ನಡೆದಿದೆ.
https://x.com/Bhima895143/status/1825084671350239245
ಆದರೆ ಅದರ ಹಿಂದೆ ಇದ್ದ ಕಷ್ಟ ಅಷ್ಟಿಷ್ಟಲ್ಲ. ತುಂಗಾ ಭದ್ರಾ ನದಿ ಗೇಟ್ ಅಳವಡಿಕೆಗೆ ಕೆಲಸ ಮಾಡಿದ ಕಾರ್ಮಿಕರು ತಮ್ಮ ಜೀವವನ್ನೇ ಪಣಕ್ಕೆ ಇಟ್ಟು ಕೆಲಸ ಮಾಡಿದ್ದಾರೆ. ಡ್ಯಾಂನಿಂದ ಹರಿಯುವ ನೀರು ನಿಲ್ಲಿಸುವುದು ಸುಲಭದ ಕೆಲಸವಾಗಿರಲಿಲ್ಲ. ಅದರ ರಭಸಕ್ಕೆ ಎಂಥ ದೊಡ್ಡ ಗಾತ್ರದ ವಸ್ತುವೇ ಆದರೂ ಕೊಚ್ಚಿಕೊಂಡು ಹೋಗಿ ಬಿಡುತ್ತೆ. ಅಂಥದ್ರಲ್ಲಿ ಮನುಷ್ಯ ಲೆಕ್ಕಕ್ಕೆ ಸಿಲುಕುತ್ತಾನಾ..?
ಜೀವದ ಹಂಗು ತೊರೆದು ತಜ್ಞರ ಸಲಹೆ ಮೇರೆಗೆ ಗೇಟ್ ಅಳವಡಿಸಿದ್ದಾರೆ. ಈ ವಿಡಿಯೋ ನೋಡುತ್ತಿದ್ದರೆ ಎಂಥವರ ಮೈ ಝುಮ್ಮೆನ್ನುತ್ತದೆ. ಕಾರ್ಮಿಕರು ತಮ್ಮ ದೇಹಕ್ಕೆ ಹಗ್ಗ ಕಟ್ಟಿಕೊಂಡು, ರಭಸವಾಗಿ ಹರಿಯುವ ನೀರಿಗೆ ಇಳಿದಿದ್ದಾರೆ. ನೀರಿಗೆ ಗೇಟ್ ಅಳವಡಿಸಿ, ವ್ಯರ್ಥವಾಗುತ್ತಿದ್ದ ನೀರನ್ನು ತಡೆದಿದ್ದಾರೆ. ಆ ಭಾಗದ ರೈತರ ಜೀವನಾಡಿಯಾಗಿದ್ದ ತುಂಗೆಯನ್ನು ರೈತರಿಗೆ ಸಿಗುವಂತೆ ಮಾಡಿದ್ದಾರೆ. ಕಾರ್ಮಿಕರ ಈ ಕಾರ್ಯಕ್ಕೆ ದೇಶದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೆಲಸ ಮಾಡಿದ ಕಾರ್ಮಿಕರಿಗೊಂದು ಎಲ್ಲರೂ ಸಲಾಂ ಹೊಡೆದಿದ್ದಾರೆ.