ಶಕ್ತಿ ಯೋಜನೆ ಬಗ್ಗೆ ಮಹಿಳೆಯರಿಗೆ ಭಯ ಬೇಡ : ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದೇನು ನೋಡಿ..!
ಬೆಂಗಳೂರು: ಕಳೆದ ಕೆಲವು ದಿನಗಳಿಂದಾನೂ ಶಕ್ತಿ ಯೋಜನೆಯನ್ನು ನಿಲ್ಲಿಸಲಾಗುತ್ತದೆ ಎಂಬ ಊಹಾಪೋಹಗಳು ಬರುತ್ತಿವೆ. ಇದರಿಂದ ಮಹಿಳೆಯರಿಗೆ ಸಹಜವಾಗಿಯೇ ಬೇಸರ ಮೂಡಿದೆ. ಯಾಕಂದ್ರೆ ಈ ಶಕ್ತಿ ಯೋಜನೆಯಿಂದ ಅದೆಷ್ಟೋ ಹೆಣ್ಣು ಮಕ್ಕಳು ಇಂದು ಜೀವನ ನಡೆಸಲು ಅನುಕೂಲವಾಗಿದೆ. ಟಿಕೆಟ್ ಗೆ ನೀಡುವ, ಪಾಸ್ ತೆಗೆದುಕೊಳ್ಳಲು ವ್ಯಯಿಸುವ ಹಣ ಅವರ ಬಳಿಯೇ ಸೇವಿಂಗ್ಸ್ ಆಗುವ ಮೂಲಕ ಮನೆಯ ಜವಾಬ್ದಾರಿಯನ್ನು ನಿಭಾಯಿಸುವಂತೆ ಆಗಿದೆ. ಆದರೆ ಈ ಬಗ್ಗೆ ತಪ್ಪು ಮಾಹಿತಿಗಳು ಹರಿದಾಡುತ್ತಿವೆ. ಶಕ್ತಿ ಯೋಜನೆಯನ್ನು ನಿಲ್ಲಿಸುತ್ತೀರಾ ಸರ್ ಎಂದು ಸಿದ್ದರಾಮಯ್ಯ ಅವರನ್ನು ಕೇಳಿದಾಗ ಅವರು ಕೊಟ್ಟ ಉತ್ತರ ಹೀಗಿತ್ತು ನೋಡಿ.
'ಸರ್ಕಾರದ ಮುಂದೆ ಇಲ್ಲ. ಕೆಲವರು ಮಹಿಳೆಯರು ಹೇಳುತ್ತಾ ಇದ್ದಾರೆ ಎನ್ನಲಾಗಿತ್ತು. ಸರ್ಕಾರದ ಹಂತದಲ್ಲಿ ಪರಿಷ್ಕರಣೆ ಮಾಡುತ್ತಿರುವಂತ ಪರಿಸ್ಥಿತಿ ಇಲ್ಲ. ಆ ಥರ ಉದ್ದೇಶವೂ ಇಲ್ಲ. ಪ್ರಸ್ತಾಪವೂ ಇಲ್ಲ. ಮಹಿಳೆಯರು ಆರಾಮವಾವಿ ಓಡಾಡಬಹುದು' ಎಂದಿದ್ದಾರೆ. ಈ ಮೂಲಕ ಮಹಿಳೆಯರಿಗೆ ಸಿಎಂ ಸಿದ್ದರಾಮಯ್ಯ ಅವರ ಮೂಲಕವೇ ಸ್ಪಷ್ಟ ಉತ್ತರ ಸಿಕ್ಕಂತೆ ಆಗಿದೆ.
ಸಿದ್ದರಾಮಯ್ಯ ಅವರು ಇದು ಎರಡನೇ ಸಲ ಮುಖ್ಯಮಂತ್ರಿ ಸ್ಥಾನದಲ್ಲಿ ಕೂತಿರುವುದು. ಯಾವುದೇ ಯೋಜನೆ ತಂದರು, ಭರವಸೆಯನ್ನು ನೀಡಿದರು ಸಹ ಮೊದಲು ಬಡವರಿಗೆ, ಮಹಿಲಕೆಯರಿಗೆ ಅದರಿಂದ ಆಗುವ ಅನುಕೂಲಗಳ ಬಗ್ಗೆ ಗಮನ ಹರಿಸುತ್ತಾರೆ. ಈ ಬಾರಿ ಅಧಿಕಾರಕ್ಕೆ ಬರುವ ಮುನ್ನವೂ ಅದೇ ರೀತಿಯ ಪ್ರಣಾಳಿಕೆಯನ್ನು ಮುಂದಿಟ್ಟಿದ್ದರು. ಅದರಲ್ಲಿ ಶಕ್ತಿ ಯೋಜನೆಯೂ ಒಂದು. ಮಹಿಳೆಯರ ಅನುಕೂಲಕ್ಕಾಗಿ ಈ ಯೋಜನೆ ಜಾರಿಗೆ ತಂದಿದ್ದು, ಯಶಸ್ವಿಯಾಗಿ ಸಾಗುತ್ತಿದೆ.