For the best experience, open
https://m.suddione.com
on your mobile browser.
Advertisement

ಪ್ರಿಯಾಂಕ ಗಾಂಧಿ ಕರ್ನಾಟಕದಲ್ಲಿ ನಿಲ್ಲುತ್ತಾರಾ..? ಮುದ್ದಹನುಮೇಗೌಡರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ

11:57 AM Jan 13, 2024 IST | suddionenews
ಪ್ರಿಯಾಂಕ ಗಾಂಧಿ ಕರ್ನಾಟಕದಲ್ಲಿ ನಿಲ್ಲುತ್ತಾರಾ    ಮುದ್ದಹನುಮೇಗೌಡರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ
Advertisement

ಬೆಂಗಳೂರು: ಲೋಕಸಭಾ ಚುನಾವಣೆಗಾಗಿ ತಯಾರಿ ನಡೆಯುತ್ತಿದ್ದು, ಪ್ರಿಯಾಂಕ ಗಾಂಧಿ ಕರ್ನಾಟಕದಿಂದಾನೇ ಸ್ಪರ್ಧೆ ಮಾಡುತ್ತಾರೆ ಎಂಬ ಮಾತಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಪರಮೇಶ್ವರ್, ಪ್ರಿಯಾಂಕ ಗಾಂಧಿ ಕರ್ನಾಟಕಕ್ಕೆ ಬರುವ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಅಧ್ಯಕ್ಷರಿಗೆ ಗೊತ್ತಿರುತ್ತೆ ಅದೆಲ್ಲ. ಶಿವಕುಮಾರ್ ಅವರು ನಮ್ಮ ಪಕ್ಷದ ಅಧ್ಯಕ್ಷರಿದ್ದಾರೆ. ಅಂಥಹದ್ದೇನಾದರೂ ಬೆಳವಣಿಗೆ ಇದ್ದರೆ ಅವರಿಗೆ ಗೊತ್ತಾಗಬೇಕೆ ವಿನಃ ನಮಗೇನು ಗೊತ್ತಾಗುವುದಿಲ್ಲ. ಬಂದರೆ ಖಂಡಿತ ಸ್ವಾಗತ ಮಾಡುತ್ತೇವೆ ಎಂದಿದ್ದಾರೆ.

Advertisement
Advertisement

ಮುದ್ದಹನುಮೇಗೌಡರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತನಾಡಿದ ಜಿ ಪರಮೇಶ್ವರ್, ಯಾವಾಗ ಸೇರ್ಪಡೆ ಬಗ್ಗೆ ನನಗೇನು ಗೊತ್ತಿಲ್ಲ. ಅವರು ಬರುವುದಕ್ಕೆ ತಯಾರಿದ್ದಾರೆ. ನಾವೂ ಕೂಡ ಎಲ್ಲರೂ ಸಹಮತಿ ಕೊಟ್ಟಿದ್ದೇವೆ. ಅವರನ್ನು ಸೇರಿಸಿಕೊಳ್ಳುವ ತೀರ್ಮಾನವನ್ನು ನಮ್ಮ ಅಧ್ಯಕ್ಷರು ಮಾಡಿದರೆ ಸ್ಚಾಗತ ಮಾಡುತ್ತೇವೆ ಎಂದಿದ್ದಾರೆ. ಇದೇ ವೇಳೆ ಟಿ ಬಿ ಜಯಚಂದ್ರ ಅವರು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾತಿಗೆ, ಇರಬಹುದು. ಆದರೆ ಅಂತಿಮವಾಗಿ ತೀರ್ಮಾನ ಮಾಡುವುದು ನಮ್ಮ ಸೆಂಟ್ರಲ್ ಎಲೆಕ್ಷನ್ ಕಮಿಟಿ ಹಾಗೂ ನಮ್ಮ ಹೈಕಮಾಂಡ್. ಅಲ್ಲಿಂದ ರೆಕಮಂಡೆ಼ನ್ ಬರಬೇಕು. ಟಿಬಿ ಜಯಚಂದ್ರ ಅವರ ಮಗನದ್ದು ಬರಬಹುದು, ಇವರದ್ದು ಬರಬಹುದು. ಆದರೆ ತೀರ್ಮಾನ ಮಾಡುವುದು ನಮ್ಮ ಹೈಕಮಾಂಡ್. ಅಲ್ಲಿ ನಿಯಮಗಳಿವೆ ಎಂದಿದ್ದಾರೆ.

Advertisement

Advertisement

ಇದೆ ವೇಳೆ ಬಿಜೆಪಿ ಹೇಳಿದ್ದ ಹೆಣ್ಣು ಮಕ್ಕಳಿಗೆ ಸುರಕ್ಷಿತವಲಗಲ ಎಂಬ ಹೇಳಿಕೆ ಬಗ್ಗೆ ಮಾತನಾಡಿ, ಅವರು ಸರ್ಕಾರ ನಡೆಸುವಾಗ ಯಾವ ಘಟನೆ ಆಗಿಲ್ವಾ. ಆಗ ಸೇಫ್ ಇತ್ತು ಅಂತ ಹೇಳಬಹುದಾ..? ಕಾನೂನಿನ ಅಡಿಯಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕು ಅದನ್ನು ತೆಗದುಕೊಳ್ಳುತ್ತೀವಿ. ಮಹಿಳೆಯರ ರಕ್ಷಣೆಗಾಗಿ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಂಡಿದ್ದೀವಿ. ಇಂತಹ ಘಟನೆ ನಡೆದಂತ ಸಂದರ್ಭದಲ್ಲಿ ರಾಜ್ಯವೇ ಸುರಕ್ಷಿತವಲ್ಲ ಎಂದರೆ ಎಂದು ಪ್ರಶ್ನಿಸಿದ್ದಾರೆ.

Advertisement
Tags :
Advertisement