Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಫೋನ್ ಪೇ ರಾಯಭಾರಿಯಿಂದ ಕಿಚ್ಚ ಸುದೀಪ್ ಕೂಡ ಹೊರ ನಡೆಯುತ್ತಾರಾ..?

03:17 PM Jul 21, 2024 IST | suddionenews
Advertisement

ಬೆಂಗಳೂರು: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಚಾರದಲ್ಲಿ ಫೋನ್ ಪೇ ಸಿಇಓ ಸಮೀರ್ ಅಪಹಾಸ್ಯ ಮಾಡಿದ್ದರು. ರಾಜ್ಯ ಸರ್ಕಾರದ ಅನುಮೋದನೆಯನ್ನು ವ್ಯಂಗ್ಯ ಮಾಡಿದ್ದರು. ರಾಜ್ಯ ಸರ್ಕಾರ ಕೂಡ ಉದ್ಯಮಿಗಳ ವಿರೋಧದ ನಡುವೆ ಸಂಜೆ ವೇಳೆಗೆ ಆದೇಶವನ್ನು ತಡೆಹಿಡಿದಿತ್ತು. ಈ ಬೆಳವಣಿಗೆಯ ಬೆನ್ನಲ್ಲೆ ಸ್ವಾಭಿಮಾನಿ ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ಒಬ್ಬೊಬ್ಬರಾಗಿಯೇ ಫೋನ್ ಅಪ್ಲಿಕೇಷನ್ ಅನ್ನೇ ಡಿಲೀಟ್ ಮಾಡುತ್ತಿದ್ದಾರೆ.

Advertisement

ಕಿಚ್ಚ ಸುದೀಪ್ ಫೋನ್ ಪೇ ರಾಯಬಾರಿಯಾಗಿದ್ದಾರೆ. ಕನ್ನಡಿಗರು ಫೋನ್ ಪೇ ವಿರೋಧ ಮಾಡಿರುವ ಬೆನ್ನಲ್ಲೇ ನಟ ಕಿಚ್ಚ ಸುದೀಪ್ ಅವರು ರಾಯಭಾರತ್ವದಿಂದ ಹೊರ ಬರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆಪ್ತ ಮೂಲಗಳ ಪ್ರಕಾರ ಕಿಚ್ಚ ಸುದೀಪ್ ಅವರು ಹಿರ ಬರುತ್ತಾರೆ ಎಂದೇ ಹೇಳಲಾಗುತ್ತಿದೆ.

ಫೋನ್ ಪೇ ಸಿಇಓ ಕನ್ನಡಿಗರ ಕ್ಷಮೆ ಕೇಳಿ, ರಾಜ್ಯ ಸರ್ಕಾರದ ನಿಲುವುಗೆ ಬದ್ಧವಾಗಿರದೆ ಇದ್ದರೆ ಫೋನ್ ಪೇ ರಾಯಭಾರತ್ವದಿಂದ ಹೊರಬರುವುದಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಕಿಚ್ಚ ಸುದೀಪ್ ಅವರು ಈ ಸಂಬಂಧ‌ ನಿರ್ಧಾರ ಪ್ರಕಟಿಸಿಲಿದ್ದಾರೆ ಎನ್ನಲಾಗಿದೆ.

Advertisement

ಫೋನ್ ಪೇ ಸಿಇಓ ಸಮೀರ್ ನಡೆಗೆ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಶೇಕಡ 75ರಷ್ಟು ಮೀಸಲಾತಿಯನ್ನು ನೀಡಬೇಕೆಂದು ರಾಜ್ಯ ಸರ್ಕಾರ ಕೂಡ ಒಪ್ಪಿಗೆ ನೀಡಿತ್ತು. ಆದರೆ ಕೆಲ ಉದ್ಯಮಿಗಳಿಂದ ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆ ರಾಜ್ಯ ಸರ್ಕಾರ ಕೂಡ ಆದೇಶವನ್ನು ತಡೆ ಹಿಡಿದಿತ್ತು. ಇದರಿಂದ ಕನ್ನಡಿಗರೆಲ್ಲಾ ಫೋನ್ ಪೇ ಅಪ್ಲಿಕೇಷನ್ ಅನ್ನೇ ಡಿಲೀಟ್ ಮಾಡುವ ಮೂಲಕ ಸಮೀರ್ ಅವರಿಗೆ ಬುದ್ದಿ ಕಲಿಸಲು ಹೊರಟಿದ್ದಾರೆ.

Advertisement
Tags :
ambassadorbengaluruchitradurgakiccha sudeepPhone Paysuddionesuddione newsಕಿಚ್ಚ ಸುದೀಪ್ಚಿತ್ರದುರ್ಗಫೋನ್ ಪೇಬೆಂಗಳೂರುರಾಯಭಾರಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article