Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಹೋಗ್ತಾರಾ..? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

01:53 PM Jan 25, 2024 IST | suddionenews
Advertisement

 

Advertisement

ಬೆಂಗಳೂರು: ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ನಾಯಕರು ಬಿಟ್ಟು ಹೋದವರನ್ನು ಕರೆತರುವ ಪ್ಲ್ಯಾನ್ ಮಾಡುತ್ತಿದ್ದಾರೆ. ಅದರಲ್ಲಿ ಜಗದೀಶ್ ಶೆಟ್ಟರ್ ಮೊದಲಿಗರು. ವರಿಷ್ಠರ ಹೆಗಲಿಗೆ ಶೆಟ್ಟರ್ ಜೊತೆಗಿನ ಮಾತುಕತೆ ನಡೆಸುವ ಜವಬ್ದಾರಿ ಬಿದ್ದಿದೆ. ಅಮಿತ್ ಶಾ ಕೂಡ ಶೆಟ್ಟರ್ ಜೊತೆಗೆ ಮಾತುಕತೆ ನಡೆಸಲು ತಯಾರಿ ನಡೆಸಿದ್ದಾರೆ. ಶೆಟ್ಟರ್ ಜೊತೆಗೆ ಲಕ್ಷ್ಮಣ್ ಸವದಿ ಕೂಡ ವಾಪಾಸ್ ಆಗುವ ಸಾಧ್ಯತೆ ಇದೆ‌. ಬಿಜೆಪಿ ನಾಯಕರು ಈ ಸಂಬಂಧ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದಾರೆ. ಲೋಕಸಭಾ ಚುನಾವಣೆ ಹಿತದೃಷ್ಟಿಯಿಂದ ವರಿಷ್ಠರಿಗೆ ಜವಬ್ದಾರಿ ಇದೆ.

 

Advertisement

ಜಗದೀಶ್ ಶೆಟ್ಟರ್ ಕೂಡ ಹೈಕಮಾಂಡ್ ಮಾತನಾಡಲಿ ಆಮೇಲೆ ಈ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದಿದ್ದರು. ಶೆಟ್ಟರ್ ಅವರು ಈ ಹಿಂದೆ ಕೂಡ ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ವಾಪಾಸ್ ಹೋಗಲ್ಲ ಎಂಬ ಮಾತನ್ನು ಹೇಳಿದ್ದರು. ಆದರೆ ಲೋಕಸಭಾ ಚುನಾವಣೆಯ ಬೆನ್ನಲ್ಲೇ ಹಲವು ಬೆಳವಣಿಗೆಗಳು ನಡೆಯುತ್ತಿದ್ದು, ಹೈಕಮಾಂಡ್ ನಾಯಕರೇ ಶೆಟ್ಟರ್ ಅವರನ್ನು ಸಂಪರ್ಕ ಮಾಡುತ್ತಿದ್ದಾರೆ.

 

ಸಿಎಂ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿಯಲ್ಲಿ ನನಗೆ ಬಹಳ ಅವಮಾನವಾಗಿದೆ. ಟಿಕೆಟ್ ಕೊಡದೆ ಅವಮಾನ ಮಾಡಿದ್ದಾರೆ. ಯಾರೂ ಎಷ್ಟೇ ಪ್ರಯತ್ನ ಪಟ್ಟರು ನಾನು ಬಿಜೆಪಿಗೆ ಹೋಗಲ್ಲ ಎಂದಿದ್ದರು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

Advertisement
Tags :
bengaluruBjpCM SiddaramaiahJagdish Shettarsuddionesuddione newsಜಗದೀಶ್ ಶೆಟ್ಟರ್ಬಿಜೆಪಿಬೆಂಗಳೂರುಸಿಎಂ ಸಿದ್ದರಾಮಯ್ಯಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article