ಮಿಡಲ್ ಕ್ಲಾಸ್ ಮಂದಿಗೆ ಚಿನ್ನ ಮರಿಚೀಕೆಯಾಗುತ್ತಾ..? ಇಂದಿನ ದರ ನೋಡಿ ಶಾಕ್..!
ಚಿನ್ನ ತೆಗೆದುಕೊಳ್ಳಬೇಕು ಎಂಬುದು ಪ್ರತಿಯೊಬ್ಬ ಮಹಿಳೆಯರಿಗೂ ಇರುವ ಮನದಾಸೆ. ಆದರೆ ಸದ್ಯದ ಸ್ಥಿತಿ ನೋಡ್ತಾ ಇದ್ರೆ ಚಿನ್ನ ಎಂಬುದು ಕೇವಲ ಶ್ರೀಮಂತರ ಕುಟುಂಬಕ್ಕೆಮೀಸಲಾದಂತೆ ಕಾಣಿಸುತ್ತಿದೆ. ದಿನೇ ದಿನೇ ಬೆಲೆ ಗಗನಕ್ಕೇರುತ್ತಿದ್ದರೆ, ಮಧ್ಯಮ ವರ್ಗದವರು, ಬಡವರು ಚಿನ್ನ ಕೊಳ್ಳಬೇಕೆಂದು ಯೋಚನೆಯನ್ನು ಮಾಡುವಂತೆ ಇಲ್ಲ. ಅಷ್ಟು ದರ ಏರಿಕೆಯಾಗಿದೆ.
ಕೇಂದ್ರ ಬಜೆಟ್ ಮಂಡನೆಯಾದ ಒಂದು ತಿಂಗಳು ಮಾತ್ರ 400 ರೂಪಾಯಿ ತನಕ ದರ ಇಳಿಕೆಯಾಗಿತ್ತು. ಆ ಬಳಿಕೆ ಮತ್ತೆ ಏರಿಕೆ ಕಂಡಿದೆ. ಈಗ 7 ಸಾವಿರ ಮುಟ್ಟಿದೆ. ಒಂದು ಗ್ರಾಂ ಚಿನ್ನಕ್ಕೇನೆ 7 ಸಾವಿರಕ್ಕಿಂತ ಹೆಚ್ಚಾಗಿದೆ. ಭಾರತದಲ್ಲಿ ಸದ್ಯ ಚಿನ್ನದ ಬೆಲೆ 10 ಗ್ರಾಂಗೆ 70 ಸಾವಿರ ರೂಪಾಯಿ ಇದೆ. 100 ಗ್ರಾಂ ಬೆಳ್ಳಿ ಬೆಲೆ 9,290 ರೂಪಾಯಿ ಆಗಿದೆ. ಬೆಳ್ಳಿಯಲ್ಲಿ ಚೂರು ಪ್ರಮಾಣದಲ್ಲಿ ಕಡಿಮೆಯಾಗಿದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ ಈ ಕೆಳಕಂಡಂತೆ ಇದೆ.
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 70,000 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 76,360 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 870 ರೂಪಾಯಿ ಆಗಿದೆ. ಕೇಂದ್ರ ಸರ್ಕಾರ ಸುಂಕವನ್ನು ಕಡಿಮೆ ಮಾಡುತ್ತೇವೆ ಎಂದು ಹೇಳಿತ್ತು. ಆಗ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇತ್ತು. ಈಗ ನೋಡಿದರೆ ಚಿನ್ನದ ಬೆಲೆಯ ಆಕಾಶ ನೋಡುತ್ತಿದೆ. ಚಿನ್ನ ಕೊಳ್ಳುವ ಕನಸ್ಸನ್ನು ಬಿಡುವುದೇ ಉತ್ತಮ ಎನಿಸುತ್ತಿದೆ. ಬಡವರು ಹಾಗೂ ಮಧ್ಯಮ ವರ್ಗದವರಿಗೆ ಹಾಗೇ ಅನ್ನಿಸುತ್ತಿದೆ.