ಪಂಚಮಸಾಲಿ ಹೋರಾಟದಲ್ಲಿ ಹರಿಹರ ಪೀಠ ಸೈಲೆಂಟ್ ಯಾಕೆ : ವಚನಾನಂದ ಶ್ರೀಗಳು ಹೇಳಿದ್ದೇನು..?
ದಾವಣಗೆರೆ: ಪಂಚಮಸಾಲಿ ಸಮುದಾಯಕ್ಕೆ 2ಎ ಮೋಸಲಾತಿ ಬೇಕೆಂದು ಒತ್ತಾಯಿಸಿ ಬೃಹತ್ ಮಟ್ಟದ ಪ್ರತಿಭಟನೆಯನ್ನೇ ಸಮುದಾಯದವರು ನಡೆಸುತ್ತಿದ್ದಾರೆ. ಹೀಗಿರುವಾಗ ಹರಿಹರ ಪೀಠ ಮಾತ್ರ ಸೈಲೆಂಟ್ ಆಗಿದೆ. ಹೋರಾಟಕ್ಕೆ ಮುಂದಾಗಿಲ್ಲ. ಈ ಬಗ್ಗೆ ವಚನಾನಂದ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ. ನಾವೂ ಮೊದಲಿನಿಂದಲೂ ವೈಲೆಂಟ್ ಅಲ್ಲ ಸೈಲೆಂಟ್. ಕಾನೂನಾತ್ಮಕವಾಗಿ ಏನನ್ನ ಮಾಡಬೇಕೋ ಅದನ್ನ ಮಾಡ್ತಾ ಇದ್ದೀವಿ ಎಂದಿದ್ದಾರೆ.
ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಿಸಲು ನಾವೂ ಬದ್ಧರಾಗಿದ್ದೇವೆ. ಈಗ ಎಲ್ಲರು ಮಾತಾಡ್ತಾ ಇದಾರೆ. ಕಾನೂನಾತ್ಮಕವಾಗಿ ಹೋರಾಟ ಮಾಡಬೇಕು, ವಕೀಲರು ಬಂದಿದ್ದಾರೆ ಎಂದಿದ್ದಾರೆ. ನಮ್ಮ ಅನೇಕ ವಕೀಲರ ಸರ್ಕಾರಕ್ಕೆ ಹಾಗೂ ಕೇಂದ್ರದ ಹಿಂದುಳಿದ ವರ್ಗಕ್ಕೆ 900 ಪುಟಗಳ ಮಾಹಿತಿಯಲ್ಲಿ ಪಂಚಮಸಾಲಿಗೆ ಯಾಕೆ 2ಎ ಮೀಸಲಾತಿಯನ್ನು ಕೊಡಬೇಕು ಎಂಬುದನ್ನು ಸಾಕ್ಷಿ ಸಮೇತ ಕೊಟ್ಟಿದ್ದಾರೆ. ಬೊಮ್ಮಾಯಿ ಅವರ ಸರ್ಕಾರ 2D ಹಾಗೂ 2Cಯನ್ನು ಘೋಷಣೆ ಮಾಡಿತ್ತಲ್ಲ ಅದನ್ನ ಒಪ್ಪಿಕೊಂಡಿಲ್ಲ. ಅಂದು ವಿಜಯೋತ್ಸವ ಮಾಡಿದ್ಯಾರು, ಸ್ವೀಕಾರ ಮಾಡಿದ್ಯಾರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯವರನ್ನು ಪಕ್ಕದಲ್ಲಿಯೇ ಕೂರೊಸಿಕೊಂಡು ಈ ಮೀಸಲಾತಿಯನ್ನು ಸರ್ಕಾರ ಮಾಡಿದೆಯಲ್ಲ ಇದನ್ನ ಸ್ವೀಕಾರ ಮಾಡಲ್ಲ ಎಂದು ಘಂಟಾಘೋಷವಾಗಿ ಹೇಳಿದ್ದೇವೆ.
ಯಾಕಂದ್ರೆ ಅಂದು ನಮಗೆ ಗೊತ್ತಿತ್ತು. ಸರ್ಕಾರ ಎಸ್ಸಿ/ಎಸ್ಟಿಗಳಿಗೆ 15% ಮೀಸಲಾತಿ ಕೊಟ್ಟರು, ಎಸ್ಟಿಗೆ 3% ಕೊಟ್ಟರು. ನಮಗೆ ಮೀಸಲಾತಿ ಕೊಡುವಾಗ ಅಲ್ಪಸಂಖ್ಯಾತರಿಗೆ ಇದ್ದ 2B ಮೀಸಲಾತಿಯನ್ನು ಕೊಟ್ಟರು. ಅಂದು ಎಸ್ಸಿ/ಎಸ್ಟಿ ಸಮುದಾಯಕ್ಕೆ ಕೊಟ್ಟಂತೆ ಇನ್ ಕ್ರೀಸ್ ಮಾಡಿ ಕೊಡಬೇಕಿತ್ತು. ಈಗ ಅದಕ್ಕೆ ಕೋರ್ಟ್ ಗೆ ಹೋಗಿ ವಕೀಲರ ಮೂಲಕ ಹೋರಾಟ ಮಾಡ್ತಾ ಇರೋದು ನಾವೂ. ಈಗ ಸುಪ್ರೀಂಕೋರ್ಟ್ ಗೂ ಹೋಗಿದೆ. ನಾವೂ ಮುಖ್ಯಮಂತ್ರಿಯನ್ನು ಕೇಳುವುದು ಏನಂದ್ರೆ ನಮಗೆ ಮೀಸಲಾತಿ ಬೇಕೆಬೇಕು. ಮಕ್ಕಳಲ್ಲಿ ಪ್ರತಿಭೆಯಿದ್ದರೂ ಒಳ್ಳೆ ಕೆಲಸಗಳು ಸಿಕ್ತಾ ಇಲ್ಲ. ಮೀಸಲಾತಿ ಪ್ರಮಾಣದಲ್ಲಿ ಇನ್ ಕ್ರೀಸ್ ಮಾಡಿ ಕೊಡಿ ಎಂದಿದ್ದಾರೆ.