Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪ್ರಧಾನಿ ಮೋದಿ ಪ್ರಮಾಣ ವಚನಕ್ಕೆ ದೇವೇಗೌಡ್ರು ಯಾಕೆ ಹೋಗಿಲ್ಲ : ಪತ್ರದಲ್ಲಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಮಾಜಿ ಪ್ರಧಾನಿ

12:43 PM Jun 10, 2024 IST | suddionenews
Advertisement

ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ನಿನ್ನೆ ಸಂಜೆ ರಾಷ್ಟ್ರಪತಿ ಭವನದಲ್ಲಿ ಪ್ತಮಾಣವಚನ ಕಾರ್ಯಕ್ರಮ ನಡೆದಿದೆ. ಮಿತ್ರ ಪಕ್ಷದವರು ಈ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಹಾಜರಿದ್ದರು. ಈಶ್ವರನ ಹೆಸರಿನಲ್ಲಿ ಮೋದಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಆದರೆ ಮಾಜಿ ಪ್ರಧಾನಿ ದೇವೇಗೌಡ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದರು. ಅದಕ್ಕೆ ಕಾರಣವೇನು ಎಂಬುದನ್ನು ಪತ್ರದ ಮೂಲಕ ತಿಳಿಸಿದ್ದಾರೆ.

Advertisement

'ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ ಸರ್ಕಾರಕ್ಕೆ ನಮ್ಮ ಪಕ್ಷದಿಂದ ಸಂಪೂರ್ಣ ಬೆಂಬಲವಿದೆ. ಈ ಲೋಕಸಭಾ ಚುನಾವಣೆಯೂ ಕುತೂಹಲಕಾರಿ ಫಲಿತಾಂಶ ನೀಡಿದ್ದು, ದೇಶದ ಪ್ರಜಾಪ್ರಭುತ್ವದ ಕಂಪನ್ನು ಸಾಬೀತು ಪಡಿಸಿದೆ. ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಅಪಖ್ಯಾತಿಗೊಳಿಸಲು ಕಾಂಗ್ರೆಸ್ ನ ಕೊಳಕು ಪ್ರಚಾರವನ್ನು ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ ಬಹಿರಂಗಪಡಿಸಿದೆ. ಅವರ ದುರಹಂಕಾರಕ್ಕೆ ದೇಶದ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಇಂದಿನ ಪ್ರಮಾಣವಚನ ಸ್ವೀಕಾರ ಸಮಾರಂಭದ ಭಾಗವಾಗಲು ನಾನು ಇಷ್ಟಪಡುತ್ತಿದ್ದೇನೆ. ಆದರೆ, ನನ್ನ ಆರೋಗ್ಯವು ದೆಹಲಿ ಪ್ರಯಾಣಿಸಲು ನನಗೆ ಅವಕಾಶ ನೀಡುತ್ತಿಲ್ಲ. ಆದರೂ, ನಿಮ್ಮ ಆತ್ಮೀಯ ಆಹ್ವಾನಕ್ಕಾಗಿ ತುಂಬಾ ಧನ್ಯವಾದಗಳು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ ಸರಕಾರಕ್ಕೆ ನನ್ನ ಪಕ್ಷವಾದ ಜೆಡಿಎಸ್ ಸಂಪೂರ್ಣ ಬೆಂಬಲ ನೀಡಲಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಯಂತೆ ನಿಮ್ಮ ಕಾರ್ಯಸೂಚಿಯನ್ನು ಜನತೆಗೆ ತಲುಪಿಸಲು ಸಹಾಯ ಮಾಡುತ್ತೇವೆ. ಸತತ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಮೋದಿ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

Advertisement

Advertisement
Tags :
Former Prime MinisterHD DevegowdaNarendra modioath taking ceremonyprime minister modiದೇವೇಗೌಡ್ರು ಕಾಂಗ್ರೆಸ್ಪ್ರಧಾನಿ ಮೋದಿಪ್ರಮಾಣ ವಚನಮಾಜಿ ಪ್ರಧಾನಿ
Advertisement
Next Article