Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಜಾತಿಗಣತಿಗೆ ಒಕ್ಕಲಿಗರು ವಿರೋಧ ಮಾಡ್ತಾ ಇರೋದೇಕೆ..? ಶಾಸಕ ಶ್ರೀನಿವಾಸ್ ಹೇಳಿದ್ದು ಹೀಗೆ..!

01:07 PM Oct 09, 2024 IST | suddionenews
Advertisement

ತುಮಕೂರು: ಜಾತಿಗಣತಿ ವರದಿ ವಿಚಾರ ಈಗ ಮತ್ತೆ ಸದ್ದು ಚರ್ಚೆಗೆ ಬಂದಿದೆ. ಸಚಿವ ಸಂಪುಟದಲ್ಲಿ ಚರ್ಚಿಸಿ ಈ ಸಂಬಂಧ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಈಗಾಗಲೇ ಸಿದ್ದರಾಮಯ್ಯ ಅವರು ಕೂ ಹೇಳಿದ್ದಾರೆ‌. ಆದರೆ ಜಾತಿಗಣತಿ ವರದಿ ಜಾರಿಗೆ ಒಕ್ಕಲಿಗ ಸಮುದಾಯ ವಿರೋಧ ಮಾಡುತ್ತಿದ್ದು, ಆ ಬಗ್ಗೆ ಶಾಸಕ ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದ್ದಾರೆ‌.

Advertisement

ಈ ಹಿಂದೆ ಕೂಡ ಈ ಬಗ್ಗೆ ಒಂದು ಸಲ ಹೇಳಿದ್ದೆ. ಈಗ ಒಕ್ಕಲಿಗ ಸಮುದಾಯ ಅಂತಾನೇ ಅಂದುಕೊಳ್ಳಿ ಅದರಲ್ಲೂ ಒಳ ಪಂಗಡಗಳಿವೆ. ಲಿಂಗಾಯತರಲ್ಲೂ ಒಳಪಂಗಡಗಳಿವೆ. ವರದಿ ತಯಾರು ಮಾಡಿದಂತ ಸಂದರ್ಭದಲ್ಲಿ ಕುಂಚಿಟಿಗ ಅಂತ ಹೇಳಿದ್ರೆ ಕುಂಚಿಟಿಗ ಅಂತಾನೇ ಬರೆದುಕೊಂಡು ಹೋಗಿರುತ್ತಾರೆ. ದಾಸ ಭಾಗದವರು ಅಂತ ಹೇಳಿದ್ರೆ ಹಾಗೆಯೇ ಬರೆದುಕೊಂಡು ಹೋಗಿರುತ್ತಾರೆ. ನಮ್ಮಲ್ಲಿ ವಿರೋಧ ಯಾಕೆ ಅಂದ್ರೆ ಈ ರೀತಿ ಪಂಗಡ ಮಾಡುವ ಬದಲು ಟೋಟಲಿ ಒಕ್ಕಲಿಗ ಅಂತಾನೇ ಮಾಡಬೇಕು ಎಂಬುದು ನಮ್ಮ ಬೇಡಿಕೆ.

ವೀರಶೈವ ಸಮುದಾಯದಲ್ಲೂ ಅದೇ ಆಗಿರಬಹುದು. ಅವರಲ್ಲೂ ಕೂಡ ಅನೇಕ ಒಳಪಂಗಡಗಳಿದಾವೆ. ಅದರಿಂದ ವರದಿಯನ್ನು ಸರಿಯಾದ ರೀತಿಯಲ್ಲಿ ಮಾಡಿದ್ದಾರೋ ಇಲ್ಲವೋ ಎಂಬ ಅನುಮಾನ ಬಿಟ್ಟರೆ ಬೇರೆನು ಅಲ್ಲ. ಸರಿಯಾಗಿ ಮಾಡದೆ ಇದ್ದರೆ ನಮ್ಮ ಜನಾಂಗಕ್ಕೂ ಅನ್ಯಾಯವಾಗುತ್ತದೆ ಎಂಬುದು ಎಲ್ಲರ ಕಾಳಜಿ ಅಷ್ಟೇ. ನ್ಯಾಯ ಸಿಗಲ್ಲ ಎಂಬ ಕಾರಣಕ್ಕೆ ಈ ವರದಿಗೆ ಒಕ್ಕಲಿಗ ಸಮುದಾಯದವರು ವಿರೋಧ ವ್ಯಕ್ಯಪಡಿಸುತ್ತಾ ಇರಬಹುದು. ವರದಿ ಯಾವ ರೀತಿ ತಯಾರು ಮಾಡಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಅದರ ಬಗ್ಗೆ ಗೊತ್ತಾದ್ರೆ ಯೋಚನೆ ಮಾಡುತ್ತಾರೆ ಎಂದು ಹೇಳಿದ್ದಾರೆ.

Advertisement

Advertisement
Tags :
bengaluruchitradurgaMLA Srinivassuddionesuddione newstumkurಒಕ್ಕಲಿಗಚಿತ್ರದುರ್ಗಜಾತಿಗಣತಿತುಮಕೂರುಬೆಂಗಳೂರುಶಾಸಕ ಶ್ರೀನಿವಾಸ್ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article