For the best experience, open
https://m.suddione.com
on your mobile browser.
Advertisement

ನ್ಯಾಯ ಎಲ್ಲಿದೆ ? ಕೇಂದ್ರದ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳ ಸಮರ...!

09:53 PM Feb 07, 2024 IST | suddionenews
ನ್ಯಾಯ ಎಲ್ಲಿದೆ   ಕೇಂದ್ರದ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳ ಸಮರ
Advertisement

Advertisement
Advertisement

ಸುದ್ದಿಒನ್, ನವದೆಹಲಿ, ಫೆಬ್ರವರಿ.07 : ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಸಿಎಂ ಸಿದ್ದರಾಮಯ್ಯ ದೆಹಲಿಯ ಜಂತರ್ ಮಂತರ್ ಬಳಿ ಇಂದು ಪ್ರತಿಭಟನೆ ನಡೆಸಿದ್ದಾರೆ. 

Advertisement

15 ನೇ ಹಣಕಾಸು ಆಯೋಗದಿಂದ ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜ್ಯ ಸಚಿವರು ಪ್ರತಿಭಟನೆ ನಡೆಸಿದರು.

Advertisement
Advertisement

ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದರು‌. ತೆರಿಗೆ ಪಾವತಿಯಲ್ಲಿ ಕೇಂದ್ರವು ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ ಎಂದರು. ಕಷ್ಟಕಾಲದಲ್ಲಿ ಕನ್ನಡಿಗರು ಕಟ್ಟುವ ತೆರಿಗೆ ಆ ಜನರಿಗೆ ಉಪಯೋಗವಾಗುತ್ತಿಲ್ಲ ಎಂದರು.
ಬದಲಾಗಿ ಉತ್ತರದ ರಾಜ್ಯಗಳ ಪಾಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕರ್ನಾಟಕ ರಾಜ್ಯದ ಹಿತದೃಷ್ಟಿಯಿಂದ ತಮಗೆ ಬರಬೇಕಾದ ಹಣವನ್ನು ನ್ಯಾಯಯುತವಾಗಿ ನೀಡಬೇಕು ಎಂದು ಆಗ್ರಹಿಸಿದರು.  ದಕ್ಷಿಣದ ರಾಜ್ಯಗಳ ಹಣ ಉತ್ತರದ ರಾಜ್ಯಗಳಿಗೆ ಬಳಕೆಯಾಗುತ್ತಿದ್ದು, ಉತ್ತರದ ರಾಜ್ಯಗಳು ನಮ್ಮ ರಾಜ್ಯದ ಜನರಿಗೆ ಋಣಿಯಾಗಿರಬೇಕು ಎಂದರು.

ಮೋದಿ ಅವರು ಪ್ರಧಾನಿ ಆದ ಬಳಿಕ ರಚಿಸಲಾದ 15 ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ತೀವ್ರ ಅನ್ಯಾಯ ಆಗಿದೆ. ದಕ್ಷಿಣ ಭಾರತದ ರಾಜ್ಯಗಳು ಉತ್ತರ ಭಾರತದ ರಾಜ್ಯಗಳಿಗಿಂತ ಪರಿಣಾಮಕಾರಿ ಜನಸಂಖ್ಯೆ ನಿಯಂತ್ರಣ ಮಾಡಿದೆವು.

ಚಿನ್ನದ ಮೊಟ್ಟೆ ಇಡುವ ಕೋಳಿಯನ್ನೇ ಕೊಂದು ಹಾಕಬೇಡಿ, ಹಾಲು ಕೊಡುವ ಕೆಚ್ಚಲು ಕತ್ತರಿಸಬೇಡಿ ಎಂದು ಒತ್ತಾಯಿಸಲು ನಮ್ಮ ಪ್ರತಿಭಟನೆ.

ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿಗೆ ಅನುದಾನ ಕೊಡುವ ಬಗ್ಗೆ ನಮಗೆ ತಕರಾರುಗಳಿಲ್ಲ. ಆದರೆ ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಬೇಡಿ ಎನ್ನುವುದು ನಮ್ಮ ಆಗ್ರಹ.

ಕೇಂದ್ರ ಸರ್ಕಾರದ ಅಂಕಿ ಅಂಶಗಳೇ ನಮ್ಮ‌ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಹೇಳುತ್ಯಿವೆ. ಎರಡನೇ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ಕರ್ನಾಟಕ. ನಮಗೇ ಏಕೆ ಈ ಮಟ್ಟದ ಅನ್ಯಾಯ ಎಂದು ಸಿಎಂ ಪ್ರಶ್ನಿಸಿದರು.

ಸದ್ಯಕ್ಕೆ ನಾವು ಕರ್ನಾಟಕದ ಜೊತೆ ಹೋಗುತ್ತಿಲ್ಲವಾದರೂ, ಕೇಂದ್ರದ ತಾರತಮ್ಯದ ವಿರುದ್ಧ ನಾವೂ ಹೋರಾಟ ನಡೆಸುತ್ತಿದ್ದೇವೆ ಎಂದು ಕೇರಳದ ಕಮ್ಯುನಿಸ್ಟ್ ಸರ್ಕಾರ ಹೇಳುತ್ತಿದೆ. ಸಿಎಂ ಪಿಣರಾಯಿ ವಿಜಯನ್ ದೆಹಲಿಯಲ್ಲಿ ಧರಣಿಗೆ ಕರೆ ನೀಡಿದ್ದಾರೆ.

ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆ ಕೂಡ ಇದಕ್ಕೆ ಹೊರತಲ್ಲ. ಎಂಟು ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆಗೆ ಇಡೀ ರಾಜ್ಯವೇ ಮುಳುಗಡೆಯಾಗಿದೆ ಎಂದರು. 37 ಸಾವಿರ ಕೋಟಿ ಪರಿಹಾರ ನೀಡಬೇಕೆಂಬ ಬೇಡಿಕೆಗೆ ಮೋದಿ ಸರಕಾರ ಚಕಾರವೆತ್ತುತ್ತಿಲ್ಲ ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.

ಬಜೆಟ್‌ನಲ್ಲಿ ತಮಿಳುನಾಡಿಗೆ ಅನುದಾನ ಮೀಸಲಿಟ್ಟಿಲ್ಲ ಎಂದು ಪ್ರತಿಭಟಿಸಿ ಸ್ಟಾಲಿನ್ ಸಂಸತ್ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸುವಂತೆ ಕರೆ ನೀಡಿದ್ದಾರೆ. ಡಿಎಂಕೆ ಸಂಸದರು ಗುರುವಾರ ಕಪ್ಪು ಅಂಗಿ ಧರಿಸಿ  ಪ್ರತಿಭಟಿಸಲಿದ್ದಾರೆ.

ಇತ್ತ ತೆಲಂಗಾಣ ಮತ್ತು ಆಂಧ್ರಪ್ರದೇಶಗಳು ಕೂಡ ನಿಧಿಯ ಪಾಲಿನ ವಿಷಯದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಪದೇ ಪದೇ ಹೇಳುತ್ತಿವೆ. ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ನಮಗೆ ಸಿಕ್ಕಿರುವುದು ತುಂಬಾ ಕಡಿಮೆ ಎಂದು ವಿಧಾನಸಭೆಯಲ್ಲಿ  ಎಪಿ ಸಿಎಂ ಜಗನ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಚಾರದಲ್ಲಿ ಆಂಧ್ರಪ್ರದೇಶ ಗಟ್ಟಿ ಧ್ವನಿ ಎತ್ತದಿದ್ದರೂ ಕೇಂದ್ರ ಸರಕಾರಕ್ಕೆ ಮನವಿ ಪತ್ರಗಳನ್ನು ನೀಡಿ ಹಣಕಾಸು ನೆರವು ಕೋರುತ್ತಿದೆ. ಕೇಂದ್ರದ ಹಣದ ವಿಚಾರದಲ್ಲಿ ಕೆಸಿಆರ್ ಅವರು ತೆಲಂಗಾಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಕಡಿಮೆ ಹಣ ನೀಡುತ್ತಿರುವ ಕೇಂದ್ರವನ್ನು ಹಲವು ಬಾರಿ ಟೀಕಿಸಿದ್ದರು.

ಈ ತಾರತಮ್ಯ ಇಂದು ನಿನ್ನೆಯದಲ್ಲ. ದಶಕಗಳಿಂದ ಅಸಮತೋಲನ ಮುಂದುವರಿದಿದ್ದರೂ ಏನೂ ಮಾಡಲಾಗದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಉತ್ತರ ಮತ್ತು ದಕ್ಷಿಣ ಭಾರತದ ಹೆಸರಿನಲ್ಲಿ ದೇಶವನ್ನು ವಿಭಜಿಸಲು ಕಾಂಗ್ರೆಸ್ ಷಡ್ಯಂತ್ರ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಆರೋಪಿಸಿದ್ದಾರೆ.  ರಾಜ್ಯ ಸರ್ಕಾರವೊಂದು ನಿಧಿಗಾಗಿ ದೆಹಲಿಯಲ್ಲಿ ಧರಣಿ ನಡೆಸುತ್ತಿರುವುದು ಇದೇ ಮೊದಲು ಎಂದರು. ನನಗೆ ಎಲ್ಲಾ ರಾಜ್ಯಗಳು ಸಮಾನ ಎಂದು ಮೋದಿ ಹೇಳಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ದೆಹಲಿಯ ಬೀದಿಗಳಲ್ಲಿ ದಂಗೆ ಎಬ್ಬಿಸಲು ದಕ್ಷಿಣದ ರಾಜ್ಯಗಳು ಸಜ್ಜಾಗಿವೆ ಎನ್ನಲಾಗಿದೆ.

Advertisement
Tags :
Advertisement