Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಯಶಸ್ವಿಯಾಗಲು ಏನು ಮಾಡಬೇಕು ? ಥಾಮಸ್ ಅಲ್ವಾ ಎಡಿಸನ್ ನೂರಾರು ವರ್ಷಗಳ ಹಿಂದೆ ಹೇಳಿದ್ದೇನು ?

07:23 AM Aug 22, 2024 IST | suddionenews
Advertisement

ಸುದ್ದಿಒನ್ ಪ್ರೇರಣೆ : ಜೀವನದಲ್ಲಿ ಯಶಸ್ಸು ವ್ಯಕ್ತಿಗೆ ತೃಪ್ತಿಯನ್ನು ತರುತ್ತದೆ. ಆದರೆ ಯಶಸ್ಸನ್ನು ಸಾಧಿಸುವುದು ಅಷ್ಟು ಸುಲಭವಲ್ಲ, ಥಾಮಸ್ ಅಲ್ವಾ ಎಡಿಸನ್ ಹೇಳಿದಂತೆ, ಯಶಸ್ಸಿಗೆ ಶೇ. 10 ರಷ್ಟು ಪ್ರೇರಣೆ ಇದ್ದರೆ ಇನ್ನುಳಿದ ಶೇ. 90 ರಷ್ಟು ಕಠಿಣ ಪರಿಶ್ರಮ ಬೇಕು. ವಾಸ್ತವವಾಗಿ ಈಗ ಕಷ್ಟಪಡುತ್ತಿರುವವರ ಸಂಖ್ಯೆ ಶೇ.90ಕ್ಕಿಂತ ಕಡಿಮೆ. ಹೆಚ್ಚಿನ ಜನರು ಯಶಸ್ಸಿಗೆ ಶಾರ್ಟ್‌ಕಟ್‌ಗಳನ್ನು ಹುಡುಕುತ್ತಿದ್ದಾರೆ. ಅಂತಹ ಶಾರ್ಟ್-ಕಟ್ ನಲ್ಲಿ ದೊರೆತ ಯಶಸ್ಸು ದೀರ್ಘಾವಧಿಯಲ್ಲಿ ಉಳಿಸಿಕೊಳ್ಳುವುದು ಕಷ್ಟ.

Advertisement

ಬಲ್ಬ್ ಅನ್ನು ಆವಿಷ್ಕರಿಸಲು ಎಡಿಸನ್ ಅವರು ಹಲವು ಬಾರಿ ಪ್ರಯತ್ನಿಸಿದ್ದರು. ಕನಿಷ್ಠ 3000 ಬಾರಿ ವಿಫಲ ಪ್ರಯತ್ನ ಮಾಡಿರುವುದಾಗಿ ಅವರದೇ ಮಾತುಗಳಲ್ಲಿ ಹೇಳಿದ್ದಾರೆ. ಆದರೆ ಪ್ರತಿ ಬಾರಿ ಫೇಲ್ ಆದಾಗಲೂ ಒಂದೊಂದು ಅನುಭವ ಪಡೆದು ಆ ಅನುಭವದಿಂದ ಹೊಸತನ್ನು ಕಲಿತೆ ಎಂದಿದ್ದಾರೆ. 1890 ರಲ್ಲಿ ಹಾರ್ಪರ್ಸ್ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ ಎಡಿಸನ್ ಪ್ರತಿ ವೈಫಲ್ಯವು ತನ್ನಲ್ಲಿ ಹೆಚ್ಚಿನ ಸ್ಫೂರ್ತಿ ಮತ್ತು ಪ್ರೇರಣೆಯನ್ನು ತುಂಬಿತು. ಯಶಸ್ವಿಯಾಗುವ ಕಿಚ್ಚು ಮತ್ತಷ್ಟು ಹೆಚ್ಚಿಸಿತು ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

ಥಾಮಸ್ ಅಲ್ವಾ ಎಡಿಸನ್ ಅವರ ಪ್ರಕಾರ, ಅವರು ಯಶಸ್ವಿಯಾಗಲು ದೃಢಸಂಕಲ್ಪವನ್ನು ಹೊಂದಿದ್ದರು. ಆದರೆ ಕಠಿಣ ಪರಿಶ್ರಮದ ನೀತಿಯನ್ನು ಸಹ ಹೊಂದಿದ್ದರು. ಅದಕ್ಕಾಗಿಯೇ ಅವರು ಅಂತಿಮವಾಗಿ ಯಶಸ್ವಿಯಾದರು ಮತ್ತು ಬೆಳಕಿನ ಬಲ್ಬ್ ಅನ್ನು ಕಂಡುಹಿಡಿದರು. ಇಂದಿನ ದಿನಗಳಲ್ಲಿ ನಮ್ಮ ಮನೆಯಲ್ಲಿ ಕತ್ತಲೆಯನ್ನು ನೀಗಿಸುವ ದೀಪಗಳು ಬೆಳಗುತ್ತಿರುವುದಕ್ಕೆ ಥಾಮಸ್ ಅಲ್ವಾ ಎಡಿಸನ್ ಕಾರಣ.

Advertisement

ಸೋಲು ಗೆಲುವಿನ ಸೋಪಾನ

ಎಡಿಸನ್ ಪ್ರತಿ ಬಾರಿ ತನ್ನ ಪ್ರಯೋಗ ವಿಫಲವಾದಾಗ, ಅವರು ಹೊಸದನ್ನು ಕಲಿತರು ಮತ್ತು ಹೊಸ ಸಿದ್ಧಾಂತವನ್ನು ಪ್ರಸ್ತಾಪಿಸಲು ಪ್ರಾರಂಭಿಸಿದರು ಎಂದು ಹೇಳಿದರು. ಎಡಿಸನ್ ತನ್ನ ಯಶಸ್ಸಿಗಿಂತ ತನ್ನ ವೈಫಲ್ಯಗಳ ಬಗ್ಗೆ ಹೆಚ್ಚು ಮಾತನಾಡಿದರು. ಏಕೆಂದರೆ ಸೋಲು ಜೀವನದ ಪಾಠಗಳನ್ನು ಕಲಿಸುತ್ತದೆ. ವೈಫಲ್ಯಗಳು ಸಹ ದೊಡ್ಡ ಸಾಧನೆಗಳಿಗೆ ದಾರಿ ಮಾಡಿಕೊಡುತ್ತವೆ. ಒಬ್ಬ ವಿಫಲ ವ್ಯಕ್ತಿಯ ಯಶಸ್ಸು ಎಷ್ಟು ದೊಡ್ಡದೋ ಮತ್ತು ಅದನ್ನು ಸಾಧಿಸುವುದಕ್ಕೆ ಎಷ್ಟು ಕಷ್ಟ ಪಡಬೇಕೋ ಎಂಬುದು ಅರ್ಥವಾಗುತ್ತದೆ.

ಯಶಸ್ಸಿಯಾಗಲೇಬೇಕೆಂಬ ಛಲ ಇರಬೇಕು. ಅಲ್ಲದೆ, ಯಶಸ್ಸಿಗೆ ಅಗತ್ಯವಾದ ಕಷ್ಟಗಳನ್ನು ತೆಗೆದುಕೊಳ್ಳಲು ಸಿದ್ಧರಾಗಿರಬೇಕು. ಆಗ ಮಾತ್ರ ನಿಮ್ಮ ಪಯಣ ಯಶಸ್ಸಿಗೆ ಹತ್ತಿರವಾಗುತ್ತದೆ.

ದೃಢಸಂಕಲ್ಪ ಮುಖ್ಯ

ಒಬ್ಬ ವ್ಯಕ್ತಿಯು ಯಶಸ್ವಿಯಾಗಲು ಬಯಸಿದರೆ ದೃಢವಾದ ಸಂಕಲ್ಪ ಹೊಂದಿರಬೇಕು. ಸತತವಾಗಿ ಹೋರಾಟ ಮತ್ತು ಪ್ರಯತ್ನ ಇರಬೇಕು. ಕೆಲವೊಮ್ಮೆ ಯಶಸ್ಸನ್ನು ಸಾಧಿಸಲು ವ್ಯೂಹಾತ್ಮಕ ಕಾರ್ಯತಂತ್ರದ ಚಿಂತನೆಯೂ ಅಗತ್ಯ. ಕಾಲಕಾಲಕ್ಕೆ ನಿಮ್ಮ ಕೆಲಸ ಹೇಗೆ ಮತ್ತು ನೀವು ಹೇಗೆ ಮಾಡುತ್ತಿದ್ದೀರಿ ಎಂಬುದನ್ನು ನೀವು ವಿಶ್ಲೇಷಿಸಬೇಕು. ಹೇಗೆ ಕೆಲಸ ಮಾಡುವುದು ಮತ್ತು ತ್ವರಿತವಾಗಿ ಯಶಸ್ಸನ್ನು ತಲುಪುವುದು ಹೇಗೆ ಎಂಬುದರ ಕುರಿತು ನೀವು ಯೋಚಿಸಬೇಕು. ಆಗ ಮಾತ್ರ ನೀವು ಥಾಮಸ್ ಅಲ್ವಾ ಎಡಿಸನ್ ಅವರಂತೆ ಉತ್ತಮ ಯಶಸ್ಸನ್ನು ಅನುಭವಿಸುವಿರಿ.

Advertisement
Tags :
bengaluruchitradurgaMotivationSuccessfulsuddionesuddione newsThomas Alva Edisonto be successfulಚಿತ್ರದುರ್ಗಥಾಮಸ್ ಅಲ್ವಾ ಎಡಿಸನ್ಪ್ರೇರಣೆಬೆಂಗಳೂರುಯಶಸ್ವಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article