ಪ್ರಶಾಂತ್ ನೀಲ್ ಗೆ ಇರುವ ವಿಚಿತ್ರ ಸಮಸ್ಯೆ ಬಗ್ಗೆ ಅವರೆ ಕೊಟ್ಟ ಸ್ಪಷ್ಟನೆ ಏನು..?
ದೇಶದಾದ್ಯಂತ ʻಸಲಾರ್ʼ ಫೀವರ್ ಶುರುವಾಗಿದೆ. ಈಗಾಗಲೇ ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ ಸಹ ಓಪನ್ ಆಗಿದೆ. ಇದರ ನಡುವೆ ಸಿನಿಮಾದ ಪ್ರಚಾರದಲ್ಲಿ ತೊಡಗಿಕೊಂಡಿರುವ ಪ್ರಶಾಂತ್ ನೀಲ್ ಹಾಗೂ ತಂಡ ಒಂದಷ್ಟು ವಿಚಾರಗಳನ್ನು ಹೊರ ಹಾಕುತ್ತಿದ್ದಾರೆ. ಅದರಲ್ಲೂ ಪ್ರಶಾಂತ್ ನೀಲ್ ತಮಗಿರುವ ಒಂದು ಸಮಸ್ಯೆಯ ಬಗ್ಗೆಯೂ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಪ್ರಶಾಂತ್ ನೀಲ್ ಕೆಜಿಎಫ್ ನಂತ ಸರಣಿ ಸಿನಿಮಾ ಮಾಡುವ ಮೂಲಕ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದರು. ಉಗ್ರಂ ಸಿನಿಮಾ ಮಾಡಿ ಶ್ರೀಮುರುಳಿಗೆ ಬ್ರೇಕ್ ನೀಡಿದ್ದರು. ಅದಾದ ಮೇಲೆ ಬಂದಂತ ಸಿನಿಮಾಗಳಲ್ಲಿ ಒಂದೇ ರೀತಿಯ ಶೇಡ್ ಇರುತ್ತದೆ ಎಂಬುದು ಅವರ ಮೇಲಿರುವ ಆರೋಪ. ಕತ್ತಲೆ.. ಧೂಳು ಇದೇ ಥರ ನೋಟ ಪ್ರಶಾಂತ್ ನೀಲ್ ಸಿನಿಮಾದಲ್ಲಿ ಇರುತ್ತದೆ ಎನ್ನಲಾಗಿತ್ತು. ಇದೀಗ ಅದಕ್ಕೆ ಪ್ರಶಾಂತ್ ನೀಲ್ ಉತ್ತರ ನೀಡಿದ್ದಾರೆ.
KGF ಮತ್ತು ಸಲಾರ್ ಒಂದೇ ರೀತಿ ಕಾಣಲು ಕಾರಣ ನನಗಿರುವ ಒಸಿಡಿ. ನಾನು ಹೆಚ್ಚು ಬಣ್ಣವಿರುವ ಬಟ್ಟೆಗಳನ್ನು ಧರಿಸಲು ಇಷ್ಟಪಡುವುದಿಲ್ಲ. ಈ ನನ್ನ ವ್ಯಕ್ತಿತ್ವದ ಪ್ರತಿಬಿಂಬವೇ ಪರದೆಯ ಮೇಲೆ ಕಾಣುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ಒಳ್ಳೆಯದು ಇರಬಹುದು, ಕೆಟ್ಟದು ಇರಬಹುದು. ಒಸಿಡಿ ಎಂದರೆ ವೈದ್ಯಕೀಯ ಪರಿಭಾಷೆಯಲ್ಲಿ ಒಬೆಸಿವ್ ಕಂಪಲ್ಸಿವ್ ಡಿಸಾರ್ಡರ್ ಎನ್ನುವ ಅರ್ಥ ಇದೆ. ಈ ಸಮಸ್ಯೆಯಿಂದ ಬಳಲುವ ವ್ಯಕ್ತಿಗಳಿಗೆ ಕೆಲವು ಗೀಳು ಇರುತ್ತದೆ. ಆ ಕಾರಣಕ್ಕೆ ತಾವು ಮಾಡುವ ಕೆಲಸಗಳಲ್ಲಿ ತಮಗೆ ಇಷ್ಟವಾದುದ್ದನ್ನು ಪುನರಾವರ್ತನೆ ಮಾಡುತ್ತಿರುತ್ತಾರೆ. ಪ್ರಶಾಂತ್ ನೀಲ್ ತಮ್ಮ ಸಿನಿಮಾಗಳ ಥೀಮ್ ಕಪ್ಪು ಬಣ್ಣದಲ್ಲಿರಲು ಇದೇ ಕಾರಣ ಎಂದು ತಿಳಿಸಿದ್ದಾರೆ.