ದರ್ಶನ್ ಜಾಮೀನಿಗಾಗಿ ವಕೀಲರು ಮಂಡಿಸಿದ ವಾದವೇನು..? ಇಲ್ಲಿದೆ ಪಾಯಿಂಟ್ ಪಾಯಿಂಟ್ ಹೈಲೇಟ್..!
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ನಟ ದರ್ಶನ್ ಈಗಾಗಲೇ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿ ಬಹಳ ದಿನಗಳೇ ಕಳೆದಿವೆ. ಆದರೆ ಚಾರ್ಜ್ ಶೀಟ್ ಸಂಪೂರ್ಣವಾಗಿ ಸ್ಟಡಿ ಮಾಡುವ ಕಾರಣಕ್ಕೆ ಆಗಾಗ ದರ್ಶನ್ ಪರ ವಕೀಲರು ಕಾಲವಾಕಾಶ ಪಡೆದುಕೊಳ್ಳುತ್ತಿದ್ದರು. ಇಂದು ಕೂಡ ಹಿರಿಯ ವಕೀಲರು ಕೋರ್ಟ್ ಗೆ ಬಂದಿರಲಿಲ್ಲ. ಆದರೂ ನಾಗೇಶ್ ಅವರೇ ವಾದ ಮಂಡಿಸಿದ್ದಾರೆ. ಅದರ ಹೈಲೇಟ್ ಪಾಯಿಂಟ್ಸ್ ಇಲ್ಲಿದೆ ನೋಡಿ.
* ಕೃತ್ಯದ ದಿನ ದರ್ಶನ್ ಧರಿಸಿದ್ದು ಚಪ್ಪಲಿನಾ..? ಶೂನಾ..? ಪೊಲೀಸರ ಚಾರ್ಜ್ ಶೀಟ್ ನಲ್ಲೇ ಗೊಂದಲವಿದೆ.
* ದರ್ಶನ್ ರಾತ್ರಿವರೆಗೂ ಚಪ್ಪಲಿ ಧರಿಸಿದ್ದರು. ಆಮೇಲೆ ರಿಕವರಿ ಆಗಿದ್ದು ಶೂ..!
* ರಕ್ತದ ಕಲೆ ಇದೆ ಎಂದು ದರ್ಶನ್ ಅವರ ಬಟ್ಟೆ ರಿಕವರಿ ಮಾಡಲಾಗಿದೆ. ಕುಕ್ಕಿ ಕುಕ್ಕಿ ಒಗೆದರೂ ರಕ್ತದ ಕಲೆ ಸಿಕ್ಕಿದ್ದು ಹೇಗೆ..?
* ದರ್ಶನ್ ಅವರ ಸ್ವ ಇಚ್ಛಾ ಹೇಳಿಕೆಯನ್ನೇ ಬದಲಾಯಿಸಲಾಗಿದೆ. ನಾನು ಧರಿಸಿದ ವಸ್ತುಗಳನ್ನು ಐಡಿಯಲ್ ಹೋಮ್ಸ್ ಮನೆಯಲ್ಲಿ ಇಟ್ಟಿದ್ದೇನೆ. ಕರೆದುಕೊಂಡು ಹೋದರೆ ತೋರಿಸುತ್ತೇನೆ ಎಂದು ಹೇಳಿದ್ದರು. ಆದರೆ ಅಧಿಕಾರಿಗಳು ದರ್ಶನ್ ಸ್ವ ಇಚ್ಛಾ ಹೇಳಿಕೆಯನ್ನೇ ಬದಲಾಯಿಸಿದ್ದಾರೆ.
* ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಿರುವ ಮಾಹಿತಿ ಒಂಥರ ಅರೇಬಿಯನ್ ನೈಟ್ ಕಥೆ ಇದ್ದಂತೆ ಇದೆ ಎಂದಿದ್ದಾರೆ.
* ದರ್ಶನ್ ಅವರು ತಮ್ಮ ಸ್ವ ಇಚ್ಛಾ ಹೇಳಿಕೆಯಲ್ಲಿ ಎಲ್ಲೂ ಸಹ ತಾನು ಅಂದು ಧರಿಸಿದ್ದ ಡ್ರೆಸ್ ಕಲರ್ ಬಗ್ಗೆ ಹೇಳಿಲ್ಲ. ಆದರೂ ಪೊಲೀಸರು ಬ್ಲಾಕ್ ಕಲರ್ ಶರ್ಟ್, ಬ್ಲೂ ಕಲರ್ ಪ್ಯಾಂಟ್ ಎಂದು ನಮೂದಿಸಿದ್ದಾರೆ.
* ಹಾಗೇ ಪೊಲೀಸರು ಮನೆಗೆ ಹೋದಾಗ ವಿಜಯಲಕ್ಷ್ಮೀ ಅವರು ಬಂದು ಶೂಗಳನ್ನು ತೋರಿಸಿದಾಗ ಇವರೇ ಒಂದು ಶೂ ಸೆಲೆಕ್ಟ್ ಮಾಡಿಕೊಂಡಿದ್ದಾರೆ ಎಂದು ಪಂಚನಾಮೆಯ ದಿನ ನಮೂದಿಸಿದ ವಿಚಾರವನ್ನು ನಾಗೇಶ್ ಓದಿ ಹೇಳಿದ್ದಾರೆ.