Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬಿಕೆ ಹರಿಪ್ರಸಾದ್ ಗೋದ್ರಾ ಹೇಳಿಕೆಗೆ ಸತೀಶ್ ಜಾರಕಿಹೊಳಿ ಏನಂದ್ರು..?

02:17 PM Jan 04, 2024 IST | suddionenews
Advertisement

 

Advertisement

ಬೆಳಗಾವಿ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಸಮಯ ನಿಗದಿಯಾಗಿದೆ. ಈ ಸಂದರ್ಭದಲ್ಲಿ ಬಿಕೆ ಹರಿಪ್ರಸಾದ್ ಗೋಧ್ರಾ ಘಟನೆಯನ್ನು ನೆನೆದಿದ್ದಾರೆ. ಈ ವಿಚಾರ ಬಿಜೆಪಿ ನಾಯಕರಲ್ಲಿ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದ್ದಾರೆ.

ಮತ್ತೊಂದು ಗೋಧ್ರಾ ಘಟನೆ ನಡೆಯುತ್ತದೆ ಎಂಬ ಬಿಕೆ ಹರಿಪ್ರಸಾದ್ ಮಾತಿಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. 'ಅವರು ಹೇಳಿರುವುದು ಆ ರೀತಿ ಆಗಬಾರದು ಎಂದು. ಎಲ್ಲಾ ರಾಜ್ಯದಲ್ಲೂ ಆದ ರೀತಿಯಲ್ಲಿ ಆಗಬಾರದು ಎಂದು. ಎಲ್ಲಾ ಜಾಗೃತಿ ವಹಿಸಬೇಕೆಂದು ಆ ರೀತಿ ಮಾತನಾಡಿದ್ದಾರೆ. ಆಯಾ ಸರ್ಕಾರಗಳು ಮುನ್ನೆಚ್ಚರಿಕೆ ವಹಿಸಿ ಎಂದು ಹೇಳಿರುವುದರಲ್ಲಿ ತಪ್ಪೇನು ಇಲ್ಲ ಎಂದಿದ್ದಾರೆ‌.

Advertisement

ಕೆಲವೊಂದು ಕಡೆ ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ನೋಡಿಕೊಳ್ಳುವುದು ಸಹ ಪೊಲೀಸರಿಗೆ ಬಿಟ್ಟಿದ್ದು. ಆ ರೀತಿಯಲ್ಲಿ ಹೇಳಿರಬಹುದು ಎಂಬುದು ನನ್ನ ಅಭಿಪ್ರಾಯ. ಒಡಿಶಾದಲ್ಲಿ ಆದಾಗ ನಾವೇನು ಮಾಡುವುದಕ್ಕೆ ಆಗುವುದಿಲ್ಲ. ಅದನ್ನ ಒಡಿಶಾ ಸರ್ಕಾರದವರು ಆಕ್ಷನ್ ತೆಗೆದುಕೊಳ್ಳಬೇಕು‌. ಬೇರೆ ಬೇರೆ ರಾಜ್ಯದಲ್ಲಿ ಆದಾಗ ಆಯ ರಾಜ್ಯ ಸರ್ಕಾರ ಆಕ್ಚನ್ ತೆಗೆದುಕೊಳ್ಳಬೇಕು. ಜನವರಿ 22 ಆಗುವ ತನಕ ಬಹಳ ಎಚ್ಚರಿಕೆವಹಿಸಬೇಕು. ಎಲ್ಲಾ ಕಡೆಯಿಂದಾನು ಬಹಳಷ್ಟು‌ ಜನ ಅಲ್ಲಿಗೆ ಹೋಗುತ್ತಾರೆ. ನಿಗಾ ವಜಿಸಬೇಕಾದ ಜವಬ್ದಾರಿ ಸರ್ಕಾರಗಳದ್ದೇ ಎಂದಿದ್ದಾರೆ.

ಯಾರ ಮೇಲೆ ಕೇಸು ಇರುತ್ತದೋ ಅವರನ್ನಷ್ಟೇ ಅರೆಸ್ಟ್ ಮಾಡುವುದಕ್ಕೆ ಸಾಧ್ಯ. ಬೇರೆಯವರ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೆ ಸಾಧ್ಯವಾ..? ಅನಾವಶ್ಯಕವಾಗಿ ಯಾರಿಗೆ ಮಾಡುವುದಕ್ಕೆ ಸಾಧ್ಯ. ಅದನ್ನು ರಾಜಕೀಕರಣಗೊಳಿಸುವ ಅಗತ್ಯವಿಲ್ಲ. ಪೊಲೀಸರು ಕೇಸ್ ಹಾಕಿದ್ದಾರೆ. ನ್ಯಾಯಾಲಯದಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂದಿದ್ದಾರೆ.

Advertisement
Tags :
belagavisuddioneಗೋದ್ರಾಬಿಕೆ ಹರಿಪ್ರಸಾದ್ಬೆಳಗಾವಿಸತೀಶ್ ಜಾರಕಿಹೊಳಿಸುದ್ದಿಒನ್
Advertisement
Next Article