ಯದುವೀರ್ ಅವರ ಚುನಾವಣಾ ಸ್ಪರ್ಧೆಗೆ ರಾಜಮಾತೆ ಪ್ರಮೋದಾ ದೇವಿ ಏನಂದ್ರು..?
ಮೈಸೂರು: ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ಮೈಸೂರು ಕ್ಷೇತ್ರ ಮುನ್ನೆಲೆಗೆ ಬಂದಿದೆ. ಬಿಜೆಪಿಯಿಂದ ಸ್ಪರ್ಧಿಗಳ ವಿಚಾರವೇ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಹಾಲಿ ಸಂಸದ ಪ್ರತಾಪ್ ಸಿಂಹ, ಮೈಸೂರು ಹಾಗೂ ಕೊಡಗು ಭಾಗದಲ್ಲಿ ಗುರುತಿಸಿಕೊಂಡವರು. ತಮ್ಮದೇ ಚಾರ್ಮ್ ಹೊಂದಿರುವವರು. ಆದರೆ ಈ ಬಾರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯ ಆಯ್ಕೆ ಬದಲಾವಣೆಯಾಗುತ್ತಿದೆ. ಬಿಜೆಪಿಯಿಂದ ಪ್ರತಾಪ್ ಸಿಂಹ ಬದಲಿಗೆ, ಯದುವೀರ್ ಅವರಿಗೆ ಟಿಕೆಟ್ ಕೊಡಲು ಪಕ್ಷ ನಿರ್ಧಾರ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸಂಬಂಧ ರಾಜಮಾತೆ ಪ್ರಮೋದಾ ದೇವಿ ಕಡೆಯಿಂದಾನೂ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಲೋಕಸಭಾ ಚುನಾವಣೆಯ ಸಂಬಂಧ ಯದುವೀರ್ ಅವರಿಗೆ ಡಬ್ಬಲ್ ಗ್ರೀನ್ ಸಿಗ್ನಲ್ ಸಿಕ್ಕಿದೆ. ರಾಜಮಾತೆ ಪ್ರಮೋದಾ ದೇವಿಯವರು ಕೂಡ ಚುನಾವಣೆಗೆ ನಿಲ್ಲುವುದಕ್ಕೆ ಅಸ್ತು ಎಂದಿದ್ದಾರೆ. ಬಿಜೆಪಿ ಕೂಡ ಯದುವೀರ್ ಅವರಿಗೆ ಟಿಕೆಟ್ ನೀಡುವುದಕ್ಕೆ ಉತ್ಸುಕರಾಗಿದೆ.
ಪ್ರಸಕ್ತ ರಾಜಕೀಯ ಬೆಳವಣಿಗೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಸಭೆ ಬಳಿಕ ಮಗನಿಗೆ ಚುನಾವಣೆಯ ಬಗ್ಗೆ ಸ್ಪರ್ಧಿಸುವಂತೆ ತಿಳಿಸಿದ್ದಾರೆ. ಈ ಬಗ್ಗೆ ಕಾಶಿಯಿಂದ ಬಂದ ರಾಜಮಾತೆ ಮಾತನಾಡಿದ್ದು, ಮೈಸೂರು ಲೋಕಸಭಾ ಚುನಾವಣೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪರ್ಧಿಸುವ ಸುದ್ದಿ ಸಾಕಷ್ಟು ಚರ್ಚೆಯಾಗುತ್ತಿದೆ. ಮೈಸೂರು ಮಹಾರಾಜರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾ ಇರೋದು ಇದೇ ಮೊದಲಲ್ಲ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಆರು ಬಾರಿ ಚುನಾವಣೆಗೆ ನಿಂತಿದ್ದರು. 1984, 1989, 1996, 1999 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಲೋಕಸಭೆಗೆ ಆಯ್ಕೆಯಾಗಿದ್ದರು ಎಂದು ತಿಳಿಸಿದ್ದಾರೆ. ಈ ಮೂಲಕ ಯದುವೀರ್ ಅವರ ಸ್ಪರ್ಧೆಗೆ ಅಸ್ತು ಎಂದಿದ್ದಾರೆ.