For the best experience, open
https://m.suddione.com
on your mobile browser.
Advertisement

ಬ್ರಾಹ್ಮಿ ಮುಹೂರ್ತ ಎಂದರೇನು? ಆ ಸಮಯದಲ್ಲಿ ಏಳುವುದರಿಂದ ಏನು ಪ್ರಯೋಜನ ?

06:32 AM Aug 23, 2024 IST | suddionenews
ಬ್ರಾಹ್ಮಿ ಮುಹೂರ್ತ ಎಂದರೇನು  ಆ ಸಮಯದಲ್ಲಿ ಏಳುವುದರಿಂದ ಏನು ಪ್ರಯೋಜನ
Advertisement

ಆ್ಯಪಲ್ ಸಿಇಒ ಟಿಮ್ ಕುಕ್‌ನಿಂದ ಇಂದಿರಾ ನೂಯಿ ವರೆಗೆ ವಿಶ್ವದ ಅನೇಕ ಯಶಸ್ವಿ ಜನರು ಬ್ರಾಹ್ಮಿ ಮುಹೂರ್ತದಲ್ಲಿ ಏಳುತ್ತಾರೆ. ನಮ್ಮ ಪೂರ್ವಜರು ಕೂಡ ಬ್ರಹ್ಮ ಮುಹೂರ್ತದಲ್ಲಿ ಏಳುವುದಕ್ಕೆ ಪ್ರಾಮುಖ್ಯತೆ ನೀಡಿರುವುದು ಗೊತ್ತೇ ಇದೆ. ಈ ಸಮಯದಲ್ಲಿ ಎದ್ದೇಳುವುದರಿಂದ ಏನು ಪ್ರಯೋಜನ ? ಎಂಬುದನ್ನು ತಿಳಿದುಕೊಳ್ಳೋಣ....

Advertisement
Advertisement

ಸುದ್ದಿಒನ್ : ಇತ್ತೀಚಿನ ದಿನಗಳಲ್ಲಿ ತಡವಾಗಿ ಮಲಗುವುದು ಮತ್ತು ತಡವಾಗಿ ಏಳುವುದು ಅನೇಕ ಜನರಿಗೆ ಅಭ್ಯಾಸವಾಗಿದೆ. ಆದರೆ ಬ್ರಹ್ಮ ಮುಹೂರ್ತದಲ್ಲಿ ಬೆಳಗ್ಗೆ ಬೇಗ ಏಳುವುದರಿಂದ ಅನೇಕ ಪ್ರಯೋಜನಗಳಿವೆ. ವಿಶ್ವದ ಅತ್ಯಂತ ಯಶಸ್ವಿ ಜನರು ಬೆಳಿಗ್ಗೆ ಬೇಗನೆ ಏಳುತ್ತಾರೆ. ಬ್ರಹ್ಮ ಮುಹೂರ್ತ ಎಂದರೇನು? ಆ ಸಮಯದಲ್ಲಿ ಏಳುವುದರಿಂದ ಏನು ಪ್ರಯೋಜನ?

ಬ್ರಾಹ್ಮೀ ಮುಹೂರ್ತ ಎನ್ನುವುದು ಅತ್ಯಂತ ಶುಭವಾದ ಮುಹೂರ್ತ ಎಂದು ಹೇಳಲಾಗುತ್ತದೆ. ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದು ಆರೋಗ್ಯದ ದೃಷ್ಟಿಯಿಂದ ಹಾಗೂ ಧಾರ್ಮಿಕ ದೃಷ್ಟಿಯಿಂದ ಕೂಡ ಒಳ್ಳೆಯದು. ಬ್ರಾಹ್ಮಿ ಮುಹೂರ್ತವು ಸೂರ್ಯೋದಯದ ಸಮಯವನ್ನು ಅವಲಂಬಿಸಿರುತ್ತದೆ. ಸೂರ್ಯೋದಯಕ್ಕೆ ಒಂದೂವರೆ ಗಂಟೆಗೂ ಮೊದಲಿನ ಸಮಯವನ್ನು ಬ್ರಾಹ್ಮೀ ಮುಹೂರ್ತ ಎಂದು ಭಾವಿಸಲಾಗುತ್ತದೆ. ಈ ಸಮಯವನ್ನು ಬೆಳಿಗ್ಗೆ 3:30 ರಿಂದ 5:00 ರವರೆಗೆ ಎಂದು ಪರಿಗಣಿಸಲಾಗುತ್ತದೆ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಸಮಯದಲ್ಲಿ ಧನಾತ್ಮಕ ಶಕ್ತಿಯು ಅಧಿಕವಾಗಿರುತ್ತದೆ. ಈ ಕ್ಷಣದಲ್ಲಿ ಮಾಡಿದ ಕ್ರಿಯೆಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತವೆ ಎಂಬ ನಂಬಿಕೆ ಜನರಲ್ಲಿದೆ.

Advertisement

ಬೆಳಗಿನ ಸಮಯದಲ್ಲಿ ಮಾಲಿನ್ಯ ಮತ್ತು ಓಝೋನ್ ಸಾಂದ್ರತೆಯು ಕಡಿಮೆಯಾಗಿರುತ್ತದೆ ಎಂದು ಹೇಳಲಾಗುತ್ತದೆ. ಸೂರ್ಯೋದಯಕ್ಕೆ ಮುನ್ನ ಆಮ್ಲಜನಕದ ಪ್ರಮಾಣ ಹೆಚ್ಚಿರುತ್ತದೆ. ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮ ಮಾಡಲು ಈ ಸಮಯ ಉತ್ತಮವಾದದ್ದು ಎಂದು ಹೇಳಲಾಗುತ್ತದೆ.

Advertisement

ರಾತ್ರಿ 10 ರಿಂದ ಬೆಳಗಿನ ಜಾವ 4 ಗಂಟೆಯ ವರೆಗೆ ಮಲಗಲು ಉತ್ತಮ ಸಮಯ. ಈ ಸಮಯದಲ್ಲಿ, ದೇಹವನ್ನು ನಿಯಂತ್ರಿಸುವ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ನಾವು ಬೇಗನೆ ಎದ್ದರೆ ನಮಗೆ ಇತರರಿಗಿಂತ ಹೆಚ್ಚು ಸಮಯ ಸಿಗುತ್ತದೆ.

ಹಿಂದೆಲ್ಲ ಕರೆಂಟಿನಂತಹ ಬೆಳಕಿಲ್ಲದ ಕಾಲದಲ್ಲಿ ಸೂರ್ಯಾಸ್ತದ ಮೊದಲು ಊಟ ಮಾಡುತ್ತಿದ್ದರು. ಊಟದ ನಂತರ ಎರಡು ಮೂರು ಗಂಟೆಗಳ ತರುವಾಯ ಮಲಗುತ್ತಿದ್ದರು. ಈ ಕಾರಣದಿಂದಾಗಿ, ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿತ್ತು. ನಂತರ ಸ್ಥೂಲಕಾಯತೆ ಸೇರಿದಂತೆ ಅನೇಕ ಜೀವನಶೈಲಿ ಸಂಬಂಧಿತ ಆರೋಗ್ಯ ಸಮಸ್ಯೆಗಳು ಬಾಧಿಸುತ್ತಿರಲಿಲ್ಲ. ನಮ್ಮ ಪೂರ್ವಜರಂತೆ ಆರಾಮದಾಯಕವಾಗಿರಲು, ನೀವು ಮೊದಲು ನಿಮ್ಮ ದಿನಚರಿಯನ್ನು ಬದಲಾಯಿಸಬೇಕು.

ವಿಶ್ವದ ಅತ್ಯಂತ ಯಶಸ್ವಿ ಜನರು ಬೆಳಿಗ್ಗೆ 5 ಗಂಟೆಗೆ ಅಥವಾ ಅದಕ್ಕಿಂತ ಮುಂಚೆಯೇ ಎಚ್ಚರಗೊಳ್ಳುತ್ತಾರೆ. ಆಪಲ್ ಸಿಇಒ ಟಿಮ್ ಕುಕ್ ಮತ್ತು ಡಿಸ್ನಿ ಸಿಇಒ ರಾಬರ್ಟ್ ಇಗರ್ ಸೇರಿದಂತೆ ಪ್ರಪಂಚದಾದ್ಯಂತದ ಅನೇಕ ಸೆಲೆಬ್ರಿಟಿಗಳು ಬೆಳಿಗ್ಗೆ ಬೇಗನೆ ಏಳುತ್ತಾರೆ.  ಬೆಳಗ್ಗೆ ಬೇಗ ಏಳುವುದನ್ನು ರೂಢಿ ಮಾಡಿಕೊಳ್ಳಿ. ರಾತ್ರಿ ಮಲಗುವ ಮುನ್ನ ಮೊಬೈಲ್, ಕಂಪ್ಯೂಟರ್ ಮುಂತಾದ ಸಾಧನಗಳಿಂದ ದೂರವಿರಬೇಕು.

ಪ್ರಮುಖ ಸೂಚನೆ : ಇಲ್ಲಿ ಒದಗಿಸಲಾದ ಎಲ್ಲಾ ಮಾಹಿತಿ ಧಾರ್ಮಿಕ ಪಠ್ಯಗಳ ಆಧಾರದ ಮೇಲೆ ಜನರ ಸಾಮಾನ್ಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಮೇಲಿನ ಅಂಶಗಳನ್ನು ನೀಡಲಾಗಿದೆ. ಸಂಪೂರ್ಣ ವಿವರಗಳನ್ನು ತಿಳಿಯಲು ಸಂಬಂಧಿತ ತಜ್ಞರನ್ನು ಸಂಪರ್ಕಿಸಿ.

Tags :
Advertisement