ಡಿಸಿಎಂ ಡಿಕೆ ಶಿವಕುಮಾರ್ ನೀಡಿದ ಲೋಕಸಭಾ ಆಫರ್ ಗೆ ನಟ ಶಿವರಾಜ್ ಕುಮಾರ್ ಏನಂದ್ರು..?
ಬೆಂಗಳೂರು: ಇಂದು ನಗರದ ಅರಮನೆ ಮೈದಾನದಲ್ಲಿ ಬೃಹತ್ ಮಟ್ಟದ ಈಡಿಗ ಸಮುದಾಯದ ಸಮಾವೇಶ ನಡೆದಿದೆ. ಈ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಧು ಬಂಗಾರಪ್ಪ ಸೇರಿದಂತೆ ರಾಜಕಾರಣಿಗಳು ಭಾಗಿಯಾಗಿದ್ದರು. ನಟ ಶಿವರಾಜ್ಕುಮಾರ್ ಕೂಡ ಸಮಾವೇಶಕ್ಕೆ ಆಗಮಿಸಿದ್ದರು. ಇದೇ ವೇಳೆ ಡಿಸಿಎಂ ಡಿಕೆ ಶಿವಕುಮಾರ್, ಶಿವಣ್ಣನಿಗೆ ಲೋಕಸಭಾ ಚುನಾವಣೆಯ ಆಫರ್ ನೀಡಿದ್ದರು.
ತುಂಬಿದ ವೇದಿಕೆಯಲ್ಲಿ ಡಿಸಿಎಂ ಓಪನ್ ಆಫರ್ ನೀಡಿದಾಗ ಶಿವಣ್ಣ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳು ಮೂಡಿದ್ದವು. ಈಗಾಗಲೇ ಶಿವಣ್ಣ ಪತ್ನಿ ಗೀತಾ, ಭಾಮೈದ ಮಧು ಬಂಗಾರಪ್ಪ ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ. ಶಿವಣ್ಣ ಏನಾದರೂ ರಾಜಕೀಯಕ್ಕೆ ಬರಬಹುದಾ ಎಂಬ ಪ್ರಶ್ನೆ ಉದ್ಭವಿಸಿತ್ತು. ಇದೀಗ ಆ ಆಫರ್ ಗೆ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
'ನಮ್ಮ ತಂದೆ ಕೊಟ್ಟ ಬಳುವಳಿ ಬಣ್ಣ ಹಚ್ಚೋದು ಮಾತ್ರ. ಗೀತಾ ಶಿವರಾಜ್ ಕುಮಾರ್ ನಿಲ್ಲುತ್ತಾರೆ. ಹೆಂಡತಿ ಆಸೆ ಪಟ್ಟಾಗ ಗಂಡ ನೆರವೇರಿಸುವುದು ಕರ್ತವ್ಯ. ಚುನಾವಣೆಗೆ ನಾನು ನಿಲ್ಲಲ್ಲ' ಎಂದು ಡಿಸಿಎಂ ಕೊಟ್ಟ ಆಫರ್ ಅನ್ನು ನಯವಾಗಿ ತಿರಸ್ಕರಿಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಇಂದು ನಡೆದ ಸಮಾವೇಶದ ವೇದಿಕೆಯಲ್ಲಿ ಶಿವಣ್ಣನುಗೆ ಟಿಕೆಟ್ ಆಫರ್ ಮಾಡಿದ್ದರು. ಲೋಕಸಭೆಗೆ ರೆಡಿಯಾಗಪ್ಪ ಎಂದು ಹೇಳಿದ್ದೆನೆ. ಯಾವ ಕ್ಷೇತ್ರ ಕೇಳಿದರೂ ಆ ಕ್ಷೇತ್ರದಿಂದ ಟಿಕೆಟ್ ನೀಡುತ್ತೇನೆ. ಸಿನಿಮಾ ಯಾವಾಗ ಬೇಕಾದರೂ ಮಾಡಬಹುದು.ಆದರೆ ಪಾರ್ಲಿಮೆಂಟ್ ಗೆ ಹೋಗುವ ಅವಕಾಶ ಎಲ್ಲರಿಗೂ ಸಿಗಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕೇಳಿದ್ದರು. ಆದರೆ ಡಿಸಿಎಂ ಆಫರ್ ಅನ್ನು ಶಿವಣ್ಣ ತಿರಸ್ಕರಿಸಿದರು.