Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಚಿವ ಸ್ಥಾನ ಬೇಕಾಗಿಲ್ಲ ಎನ್ನುತ್ತಿರುವ ವಿಶ್ವನಾಥ್ ಬಿಜೆಪಿಯಿಂದ ಬಯಸಿದ್ದೇನು..?

07:17 PM Dec 13, 2022 IST | suddionenews
Advertisement

 

Advertisement

ಕಳೆದ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಾ ಇತ್ತು. ಆದ್ರೆ ಬಿಜೆಪಿಯ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದವರಲ್ಲಿ ಹಳ್ಳಿ ಹಕ್ಕಿ ವಿಶ್ವನಾಥ್ ಕೂಡ ಒಬ್ಬರು. ಆದರೆ ಈಗ ಬಿಜೆಪಿಯಲ್ಲಿಯೇ ಇದ್ದುಕೊಂಡು, ಬಿಜೆಪಿ ವಿರುದ್ದವೇ ಅಸಮಾಧಾನ ಹೊರಹಾಕುತ್ತಿದ್ದಾರೆ.

ವಿಶ್ವನಾಥ್ ಅವರು ಆಗಾಗ ತಮ್ಮ ಮನಸ್ಸಿನ ಅಸಮಾಧಾನವನ್ನು ಹೊರ ಹಾಕುತ್ತಲೇ ಇದ್ದಾರೆ. ಈಗ ಮತ್ತೆ ಬೇಸರ ಮಾಡಿಕೊಂಡಿದ್ದು, ನನಗೆ ಬಿಜೆಪಿಯಲ್ಲಿ ಸಚಿವ ಸ್ಥಾನ ಕೊಟ್ಟರು ಬೇಡ. ನಾನೂ ಸಚಿವಕಾಂಕ್ಷಿಯೂ ಅಲ್ಲ, ಬಿಜೆಪಿ ಸರ್ಕಾರವನ್ನಿ ನಾವೆಲ್ಲಾ ಸೇರಿ ತಂದದ್ದು, ನಾವೂ ಅಲ್ಲಿಂದ ಹೊರಗೆ ಬಾರದೆ ಇದ್ದರೆ ಈ ಬಿಜೆಪಿ ಸರ್ಕಾರ ಹೇಗೆ ಬರುತ್ತಿತ್ತು. ಬಿಜೆಪಿ ಸರ್ಕಾರ ಬಂದರೆ ಒಳ್ಳೆಯ ಯೋಜನೆ ಮತ್ತು ಕಾರ್ಯಕ್ರಮಗಳನ್ನು ತರುತ್ತೆ ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ ನಮ್ಮ ನಿರೀಕ್ಷೆಯನ್ನು ಸುಳ್ಳು ಮಾಡಿದೆ ಎಂದು ಬೇಸರ ಹೊರ ಹಾಕಿದ್ದಾರೆ.

Advertisement

ಮತ್ತೆ ಕಾಂಗ್ರೆಸ್ ಗೆ ಹೋಗ್ತೀರಾ ಎಂಬ ಮಾತಿಗೆ ಉತ್ತರಿಸಿದ ವಿಸ್ವನಾಥ್, ಆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಇನ್ನು ಯಾರ ಜೊತೆಗೂ ಇನ್ನೂ ಮಾತನಾಡಿಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತೆ ನೋಡೋಣಾ. ನನ್ನ ಮತ್ತು ಡಿಕೆ ಶಿವಕುಮಾರ್ ಭೇಟಿಯಲ್ಲಿ ಯಾವುದೇ ವಿಶೇಷತೆ ಇಲ್ಲ. 40 ವರ್ಷದಿಂದ ಸ್ನಬೇಹಿತರಾಗಿದ್ದವರು. ಇನ್ನು ಸಿದ್ದರಾಮಯ್ಯ ಅವರ ಜೊತೆಗೂ ಕೆಲಸ ಮಾಡಿದ್ದೇನೆ ಎಂದಿದ್ದಾರೆ.

Advertisement
Tags :
bengaluruBjpfeaturedH. Vishwanathmysoremysurusuddioneಬಿಜೆಪಿಬೆಂಗಳೂರುಮೈಸೂರುವಿಶ್ವನಾಥ್ಸಚಿವ ಸ್ಥಾನಸುದ್ದಿಒನ್
Advertisement
Next Article