Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಿದ್ದರಾಮಯ್ಯ ಬಗ್ಗೆ ಅನಂತ್ ಕುಮಾರ್ ಹೆಗಡೆ ಆಡಿದ ಮಾತಿಗೆ ವಿ ಸೋಮಣ್ಣ ಏನಂದ್ರು..?

12:56 PM Jan 15, 2024 IST | suddionenews
Advertisement

ಬೆಂಗಳೂರು: ಅಯೋಧ್ಯೆ142 ಕೋಟಿ ಭಾರತೀಯರದ್ದಲ್ಲ. ವಿಶ್ವದ ಭೂಪಟದಲ್ಲಿ, ಇಂಥ ದೊಡ್ಡ ಸಮಸ್ಯೆಯನ್ನು, ಈ ದೇಶದ ಇತಿಹಾಸವನ್ನು, ಈ ದೇಶದ ಸಂಸ್ಕೃತಿಯನ್ನು, ಈ ದೇಶದ ನೆಲೆಯಲ್ಲಿ, ಶ್ರೀರಾಮಚಂದ್ರನ ಇತಿಹಾಸವನ್ನು ವಿಶ್ವಕ್ಕೆ ಪರಿಚಯಿಸುವಂತ ಜಾಗದಲ್ಲಿ ಮಾಡುತ್ತಾ ಇದ್ದಾರೆ. ನಾನು, ಇನ್ನೊಬ್ಬರು ಹೋಗಬೇಕೆಂಬ ವಿಚಾರಕ್ಕಿಂತ ಹೆಚ್ಚಾಗಿ, ಎಲ್ಲಾ ಭಾರತೀಯರಿಗೂ ಸಲ್ಲುತ್ತದೆ. ಶ್ರೀರಾಮಚಂದ್ರ ಒಬ್ಬ ದೇವರು. ನಂಬಿಕೆ ಎಂಬುದನ್ನು ಇಟ್ಟುಕೊಂಡು ಮಾಡಿದ್ದಕ್ಕೇನೆ ಪ್ರಧಾನಿ ಮೋದಿಯವರು ಯಶಸ್ಸು ಕಂಡಿದ್ದಾರೆ ಎಂದಿದ್ದಾರೆ.

Advertisement

 

ಇದೆ ವೇಳೆ ದೆಹಲಿ ಪ್ರವಾಸದ ಬಗ್ಗೆ ಮಾತನಾಡಿ, ದೆಹಲಿಗೆ ಹೋಗಿದ್ದೆ. ನಾಯಕರನ್ನು ಭೇಟಿ ಮಾಡುವುದರ ಜೊತೆಗೆ ದೇವಸ್ತಾನಗಳಿಗೂ ಓಡಾಡಿಕೊಂಡು ಬಂದಿದ್ದೀನಿ. ಸಾಮಾನ್ಯ ಜನರ ಬಗ್ಗೆ ಕಾಳಜಿ ಇಟ್ಟುಕೊಂಡು, ಬಡವರು ಬಡವರಾಗಿಯೇ ಉಳಿಯಬಾರದು ಎಂಬ ಒಳ್ಳೆಯ ಭಾವನೆ ಇಟ್ಟುಕೊಂಡು ಕೆಲಸ ಮಾಡಿದರೆ, ಒಳ್ಳೆಯದ್ದೆ ಆಗುತ್ತೆ ಎಂಬಂತೆ ಈ ಸಲದ ದೆಹಲಿಯ ಯಾತ್ರೆ ನನಗೆ ದೊಡ್ಡ ಅನುಭವವನ್ನೇ ಕೊಟ್ಟರು‌. ಜೆಪಿ ನಡ್ಡಾ ಅವರು, ಸಂತೋಷ್ ಜೀ ಅವರು, ಅಮಿತ್ ಶಾ ಜೀ ಅವರು ಸಿಕ್ಕಿದ್ರು. ಅವರು ಕೊಟ್ಟಂತ ಸಲಹೆ ಸೂಚನೆ, ಅವರ ನಡವಳಿಕೆ, ಅವರ ಅಂತರಾಳದ ಮಾತುಗಳನ್ನು ಕೇಳಿದಾಗ ಒಬ್ಬ ರಾಜಕಾರಣಿ ಆದವರು, ದೊಡ್ಡವರ ಮಾತು ಕೇಳಿದಾಗ ಆಗುವ ತೊಂದರೆಗೆ ಎಲ್ಲೋ ಒಂದು ಕಡೆ ಯಾವ ರೀತಿ ನೋವು ಕೊಡುತ್ತದೆ ಎಂಬುದು ಇದರಿಂದ ಅರ್ಥವಾಗಿದೆ. ರಾಷ್ಟ್ರಕ್ಕೆ ಮೋದಿಯವರ ಅಗತ್ಯವಿದೆ ಎಂದಿದ್ದಾರೆ.

Advertisement

 

ಅನಂತ್ ಕುಮಾರ್ ಹೆಗಡೆ ಅವರ ಸ್ಟೇಟ್ಮಂಟ್ ಕೂಡ ಗಮನಿಸಿದ್ದೀನಿ. ಅವರು ಒಬ್ಬ ಹಿರಿಯ ನಾಯಕ. ನಾನು ಅವರ ನಿಶ್ಕಲ್ಮಶ ಭಾವನೆಯನ್ನು ನೋಡಿದ್ದೀನಿ. ಏನು ಬಾಯಿಗೆ ಬರುತ್ತೆ, ಅದನ್ನೇ ಹೇಳುತ್ತಾರೆ ನನ್ನ ಥರ. ಹಿಂದೆ ಮುಂದೆ ನೋಡಲ್ಲ. ಆದರೆ ಅವರು ಸಿದ್ದರಾಮಯ್ಯ ಅಲ್ಲ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಸಿದ್ದರಾಮಯ್ಯ ಅವರು ಎಷ್ಟರಮಟ್ಟಿಗೆ ಮಾತನಾಡುತ್ತಾರೆ ಎಂಬುದು ಅವರಿಗೆ ಬಿಟ್ಟಿದ್ದು. ಅನಂತ್ ಕುಮಾರ್ ಹೆಗಡೆ ಅವರು ಸುಸಂಸ್ಕೃತ ಕುಟುಂಬದಿಂದ ಬಂದವರು. ನಮ್ಮ ಭಾಷೆಯನ್ನು ನಾವೇ ಹಿಡಿತದಲ್ಲಿ ಇಡದೆ ಹೋದರೆ, ನಂಗೆ ವೈಯಕ್ತಿಕವಾಗಿ ಇಷ್ಟವಾಗಲಿಲ್ಲ ಎಂದಿದ್ದಾರೆ.

Advertisement
Tags :
ananth kumar hegdebangaloreCM Siddaramaiahv somannaಅನಂತ್ ಕುಮಾರ್ ಹೆಗಡೆಬೆಂಗಳೂರುವಿ.ಸೋಮಣ್ಣಸಿದ್ದರಾಮಯ್ಯ
Advertisement
Next Article