ಸಿಟಿ ರವಿ ನೀಡಿದ ಅಂಡಮಾನ್ ಜೈಲು ಭೇಟಿ ಆಫರ್ ಬಗ್ಗೆ ಪ್ರಿಯಾಂಕ್ ಖರ್ಗೆ ಏನಂದ್ರು..?
ಆತ್ಮೀಯರಾದ ಪ್ರಿಯಾಂಕ್ ಖರ್ಗೆ ಅವರೇ, ತಾಯಿ ಭಾರತಿಯ ಮಡಿಲಿನಲ್ಲಿ ಜನಿಸಿದ ಮಹಾನ್ ರಾಷ್ಟ್ರೀಯವಾದಿ, ಕರಿನೀರ ವೀರ, ಹುತಾತ್ಮ ವೀರ್ ಸಾವರ್ಕರ್ ಅವರು, ಬ್ರಿಟಿಷರಿಂದ ಕಠಿಣ ಕಾರಾಗ್ರಹ ಶಿಕ್ಷೆಗೊಳಪಡಿಸುವ ತೀರ್ಪಿನಂತೆ, ಘೋರ ಕರಿನೀರಿನ ಶಿಕ್ಷೆ ಅನುಭವಿಸಿದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇರುವ ಸೆಲ್ಯುಲರ್ ಜೈಲಿಗೆ ಭೇಟಿ ನೀಡಲು ನಿಮ್ಮನ್ನು ಆಹ್ವಾನಿಸುತ್ತೇನೆ. ಅಂದ ಹಾಗೆ ನಿಮ್ಮ ಪ್ರವಾಸದ ಸಂಪೂರ್ಣ ಖರ್ಚುವೆಚ್ಚ ನಾನೇ ಭರಿಸುತ್ತೇನೆ ಎಂದಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಿಟಿ ರವಿ ಅವರ ಸವಾಲನ್ನು ಸ್ವೀಕರಿಸಿದ್ದಾರೆ.
ಸಿ ಟಿ ರವಿ ಅವರು ಫಂಡ್ ಮಾಡುವುದರಿಂದ ನಾನು ಹೋಗಿ ಸಾವರ್ಕರ್ ಇದ್ದ ಜೈಲಿಗೆ ಹೋಗಿ ನೋಡಿಕೊಂಡು ಬರುತ್ತೀನಿ. ಆದರೆ ಈಗ ರಾಜ್ಯದಲ್ಲಿ ಬರದ ಪರಿಸ್ಥಿತಿ ಇದೆ. ಬರ ಪ್ರವಾಸದಲ್ಲಿ ಇದ್ದೇನೆ. ಬರ ಪ್ರವಾಸ ಮುಗಿದ ಮೇಲೆ ಹೋಗಿ ಬರುತ್ತೇನೆ. ಅಲ್ಲಿಯವರೆಗೂ ಆ ಆಫರ್ ಇರುತ್ತದೆಯಾ..? ನನ್ನ ಸಿದ್ದಾಂತ ನನಗೆ ಕ್ಲಿಯರ್ ಇದೆ. ಬಸವ ತತ್ವ, ಅಂಬೇಡ್ಕರ್ ತತ್ವ ಸಿದ್ದಾಂತ ನನ್ನದು.
ಬಿಜೆಪಿಗೆ ಮೂರು - ನಾಲ್ಕು ಪ್ರಶ್ನೆಗಳನ್ನು ಕೇಳುತ್ತೇನೆ.
* ಸಾವರ್ಕರ್ ಬ್ರಿಟಿಷರ ಪಿಂಚಣಿಗೆ ಅರ್ಜಿ ಹಾಕಿರಲಿಲ್ಲವಾ..?
* ವೀರ ಅಂತ ಬಿರುದು ಸಾವರ್ಕರ್ ಗೆ ಕೊಟ್ಟವರು ಯಾರು..?
* ದೇಶ ವಿಭಜನೆ ಮಾಡುವುದಕ್ಕೆ ಮೊದಲು ಪ್ರಸ್ತಾಪ ಮಾಡಿದ್ದು ಯಾರು..? ಎಂದು ಪ್ರಶ್ನೆ ಕೇಳಿದ್ದಾರೆ.
ವಿಧಾನಸಭೆಯಲ್ಲಿ ಹಾಕಿರುವ ಸಾವರ್ಕರ್ ಫೋಟೋವನ್ನು ತೆಗೆಯಲು ಅವಕಾಶ ಸಿಕ್ಕರೆ ನಾನು ಈಗಲೇ ತೆಗೆಯುತ್ತೇನೆ ಎಂದಿದ್ದರು. ಈ ಹೇಳಿಕೆಗೆ ಸಿಟಿ ರವಿ ಆಕ್ರೋಶ ಹೊರ ಹಾಕಿ, ಅಂಡಮಾನ್ ಜೈಲಿನ ಆಫರ್ ನೀಡಿದ್ದರು.