Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬೆಂಗಳೂರಿನಲ್ಲಿ ನಟ-ನಟಿಯರ ರೇವ್ ಪಾರ್ಟಿಯಲ್ಲಿ ಸಿಕ್ಕಿದ್ದೇನು..?

01:21 PM May 20, 2024 IST | suddionenews
Advertisement

 

Advertisement

ಬೆಂಗಳೂರು: ಇಂದು ಬೆಳಗಿನ ಜಾವ 3 ಗಂಟೆ ವೇಳೆಗೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ಫಾರ್ಮ್ ಹೌಸ್ ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ತೆಲುಗು ಮತ್ತು ಕನ್ನಡದ ನಟ, ನಟಿಯರು, ಮಾಡೆಲ್ ಗಳು, ಡಿಜೆಗಳು ಪತ್ತೆಯಾಗಿದ್ದರೆ.‌ ಸಿಸಿಬಿ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ.

ಕಾನ್ ಕಾರ್ಡ್ ಮಲೀಕ ಗೋಪಾಲ ರೆಡ್ಡಿ ಎಂಬುವವರ ಮಾಲೀಕತ್ವದ ಜಿ.ಆರ್ ಫಾರ್ಮ್ ಹೌಸ್ ನಲ್ಲಿ ವಾಸು ಎಂಬಾತ ಬರ್ತ್ ಡೇ ಪಾರ್ಟಿ ಹೆಸರಲ್ಲಿ ಪಾರ್ಟಿ ಆಯೋಜನೆ ಮಾಡಿದ್ದರು. ಈ ಪಾರ್ಟಿ ತಡರಾತ್ರಿ 3 ಗಂಟೆಯಾದರೂ ಅಂತ್ಯವಾಗಿರಲಿಲ್ಲ. ನಿಯಮ ಉಲ್ಲಂಘಿಸಿ, ಅವಧಿ ಮೀರಿ ಪಾರ್ಟಿ ಮಾಡಲಾಗಿತ್ತು. ಆದ್ದರಿಂದ ಸಿಸಿಬಿಯ ಆಂಟಿ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಡ್ರಗ್ಸ್ ಕೂಡ ಪತ್ತೆಯಾಗಿದೆ. ಸಿಸಿಬಿ ಪೊಲೀಸರ ದಾಳಿ ವೇಳೆ 17 ಎಂಡಿಎಂಎ ಮಾತ್ರೆಗಳು, ಕೊಕೇನ್ ಕಂಡು ಬಂದಿದೆ. ಆಂಧ್ರ, ಬೆಂಗಳೂರು ಮೂಲದ 100ಕ್ಕೂ ಹೆಚ್ಚು ಜನ ಮತ್ತು 25ಕ್ಕೂ ಹೆಚ್ಚು ಯುವತಿಯರು ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎಂಬುದು ತಿಳಿದು ಬಂದಿದೆ.

Advertisement

ಇನ್ನು ಈ ಪಾರ್ಟಿಯಲ್ಲಿ ಶಾಸಕರೊಬ್ಬರ ಪಾಸ್ ಕೂಡ ಕಂಡು ಬಂದಿದೆ. ಆಂಧ್ರ ಮೂಲದ ಕಾಕನಿ ಶಾಸಕ ಗೋವರ್ಧನ ರೆಡ್ಡಿ ಹೆಸರಿನ ಪಾಸ್ ಅದಾಗಿದೆ. ಮರ್ಸಿಡಿಸ್, ಬೆನ್ಜ್, ಜಾಗ್ವಾರ್, ಆಡಿ ಕಾರು ಸೇರಿದಮನತೆ ಹದಿನೈದಕ್ಕೂ ಹೆಚ್ಚು ಐಷರಾಮಿ ಕಾರುಗಳು ಕಂಡು ಬಂದಿವೆ. 30-50 ಲಕ್ಷ ಖರ್ಚು ಮಾಡಿ ಈ ಪಾರ್ಟಿ ಆಯೋಜನೆಗೆ ಖರ್ಚಾಗಿತ್ತು ಎನ್ನಲಾಗುತ್ತಿದೆ. ಸದ್ಯ ಸಿಸಿಬಿ ಪೊಲೀಸರು ನಾರ್ಕೊಟಿಕ್ಸ್ ಸ್ನಿಫರ್ ಡಾಗ್ ಗಳಿಂದ ಪರಿಶೀಲನೆ ನಡೆಸುತ್ತಿದ್ದಾರೆ.

Advertisement
Tags :
actorsactressesbangalorebengaluruchitradurgarave partysuddionesuddione newsಚಿತ್ರದುರ್ಗನಟನಟಿಯರುಬೆಂಗಳೂರುರೇವ್ ಪಾರ್ಟಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article