For the best experience, open
https://m.suddione.com
on your mobile browser.
Advertisement

ಕೋಲ ನಡೆಸಿದ ಖಾದರ್ ನರಕಕ್ಕೆ ಹೋಗಲಿ ಎಂಬ ವ್ಯಕ್ತಿಗೆ ಖಾದರ್ ಹೇಳಿದ್ದೇನು..?

05:17 PM Feb 05, 2024 IST | suddionenews
ಕೋಲ ನಡೆಸಿದ ಖಾದರ್ ನರಕಕ್ಕೆ ಹೋಗಲಿ ಎಂಬ ವ್ಯಕ್ತಿಗೆ ಖಾದರ್ ಹೇಳಿದ್ದೇನು
Advertisement

ಮಂಗಳೂರು ಕಡೆಯೆಲ್ಲಾ ದೈವ, ಕೋಲದ ಪದ್ದತಿ ಇದೆ. ವಿಧಾನಸಭಾ ಅಧ್ಯಕ್ಷ ಯುಟಿ ಖಾದರ್ ಕೂಡ ಇತ್ತಿಚೆಗೆ ಹರಕೆ ಕೋಲದಲ್ಲಿ ಭಾಗಿಯಾಗಿದ್ದರು. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಮುಖಂಡ ಸಾಲೇತ್ತೂರು ಫೈಜಿ ಆಕ್ರೋಶ ಹೊರ ಹಾಕಿದ್ದರು. ಕೊರಗಜ್ಜನ ಭಕ್ತ ಯುಟಿ ಖಾದರ್ ನನ್ನು ಮುಸ್ಲಿಮರು ಕೇವಲ ರಾಜಕಾರಣಿಯಾಗಿ ಕಂಡರೆ ಸಾಕು. ಧಾರ್ಮಿಕ ಮುಖಂಡರಾಗಿ ಕಾಣುವುದು ಬೇಡ. ಖಾದರ್ ಕೊರಗಜ್ಜನಿಗೂ, ಕಲ್ಲುರ್ಟಿ, ಪಂಜುರ್ಲಿಗೂ ಆರಾಧಿಸಲಿ. ಪ್ರಸಾದ ತೆಗೆದುಕೊಂಡು ತಲೆಗೆ ಮೆತ್ತಿಕೊಂಡು ನರಕಕ್ಕೆ ಹೋಗಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು.

Advertisement
Advertisement

ಈ ವಿಚಾರಕ್ಕೆ ಸಂಬಂಧಿಸಿದಂತೆ ಯುಟಿ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಗೀಚುವವರನ್ನು ಇತಿಹಾಸ ನೆನಪಿಟ್ಟುಕೊಳ್ಳುವುದಿಲ್ಲ. ಪ್ರಶ್ನೆ ಕೇಳುವವರನ್ನು ನೆನಪಿಟ್ಟುಕೊಳ್ಳುವುದಿಲ್ಲ. ಬದಲಿಗೆ ಯಾರು ಕೆಲಸ ಮಾಡುತ್ತಾರೆ, ಯಾರು ಉತ್ತರ ಕೊಡುತ್ತಾರೆ ಅಂಥವರನ್ನು ಮಾತ್ರ ನೆನಪಿಟ್ಟುಕೊಳ್ಳುತ್ತದೆ.

Advertisement

Advertisement
Advertisement

ನಮ್ಮ ಪ್ರಾಚೀನ ಆಚರಣೆ ಅನುಗುಣವಾಗಿ ಅವರು ಹರಕೆ ಇಟ್ಟುಕೊಂಡಿದ್ರು. ಅದಕ್ಕೆ ಹೋಗುವುದು, ಗೌರವ ಕೊಡುವುದು ನಮ್ಮ ಸಂಸ್ಕೃತಿ. ಹೀಗಾಗಿ ನಾನು ಹೋಗಿದ್ದೆ. ಯಾರೋ ಒಬ್ಬ ಗೀಚಿದ್ರೆ , ನೂರು ಜನ ಒಪ್ಪಿಕೊಳ್ಳಲ್ಲ. ಅದಕ್ಕೆಲ್ಲ ನಾವು ಇಂಪಾರ್ಟೆಂಟ್ ಕೊಡಬಾರದು ಎಂದು ಯುಟಿ ಖಾದರ್ ಸ್ಪಷ್ಟ ಉತ್ತರ ನೀಡಿದ್ದಾರೆ.

ವಿಧಾನಸಭಾ ಅಧ್ಯಕ್ಷ ಯು ಟಿ ಖಾದರ್  ಶ್ರೀ ಕ್ಷೇತ್ರ ಪಣೋಲಿ ಬೈಲ್​ಗೆ ಭೇಟಿ ನೀಡಿ ಹರಕೆ ಕೋಲ ನೆರವೇರಿಸಿದ್ದರು. ಬಳಿಕ ಕಾರ್ಣಿಕ ದೈವಗಳಾದ ಕಲ್ಲುರ್ಟಿ ಕಲ್ಕುಡ ದೈವಗಳ ಆಶೀರ್ವಾದ ಪಡೆದರು. ಅವರೊಂದಿಗೆ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜಾವ ಮತ್ತಿತ್ತರು ಭಾಗಿಯಾಗಿದ್ದರು. ಆದರೆ ಯು ಟಿ ಖಾದರ್​ ಮುಸ್ಲಿಂ ಪಂಗಡಕ್ಕೆ ಸೇರಿದವರಾಗಿದ್ದು, ಅವರ ನಡತೆಯನ್ನು ವಿರೋಧಿಸಿ ಮುಸ್ಲಿಂ ಧಾರ್ಮಿಕ ಮುಖಂಡ ಸಾಲೆತ್ತೂರು ಫೈಝಿ ಸಾಮಾಜಿಕ ಜಾಲತಾಣದಲ್ಲಿ ಬರೆದು ಹಾಕುವ ಮೂಲಕ ವಿರೋಧಿಸಿದ್ದಾರೆ.

Advertisement
Tags :
Advertisement