ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು..?
ಬೆಂಗಳೂರು: ಬಿಜೆಪಿಯಿಂದ ಮತ್ತೆ ಪ್ರಹ್ಲಾದ್ ಜೋಶಿಯವರಿಗೆ ಟಿಕೆಟ್ ನೀಡಿದ್ದು, ದಿಂಗಾಲೇಶ್ವರ ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದರು. ಅಭ್ಯರ್ಥಿ ಬದಲಾಯಿಸುವಂತೆ ಒತ್ತಾಯಿಸಿದ್ದರು. ಆದರೂ ಬಿಜೆಪಿ ಹಠ ಬಿಡಲಿಲ್ಲ. ಇದೀಗ ದಿಂಗಾಲೇಶ್ವರ ಶ್ರೀಗಳು ಜೋಶಿ ಅವರನ್ನು ಸೋಲಿಸಲೇಬೇಕೆಂಬ ಹಠದಿಂದ ಅವರೇ ಸ್ಪರ್ಧೆಗೆ ಇಳಿದಿದ್ದಾರೆ. ಶ್ರೀಗಳಿಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡಿ ಎಂದು ಒತ್ತಾಯಿಸುತ್ತಿದ್ದಾರೆ.
ದಿಂಗಾಲೇಶ್ವರ ಶ್ರೀಗೆ ಕೈ ಟಿಕೆಟ್ ವಿಚಾರವಾಗಿ ಮಾತನಾಡಿದ ಡಿಕೆ ಶಿವಕುಮಾರ್, ಶ್ರೀಗಳು ಹೋರಾಟದ ಮೂಲಕ ಬಂದವರು. ಅವರು ಏನೋ ಕೇಳ್ತಿದ್ದಾರೆ. ಆದರೆ ಅಂತಹ ಸ್ಥಿತಿ ಈಗಿಲ್ಲ. ಹಿಂದೆ ವೀರಶೈವರಿಗೆ ಟಿಕೆಟ್ ಕೊಟ್ಟಿದ್ದೆವು. ಈ ಬಗ್ಗೆ ಚರ್ಚೆ ಮಾಡ್ತೇವೆ. ಬಹಳ ಜನ ಒತ್ತಡ ಮಾಡ್ತಿದ್ದಾರೆ. ಎಐಸಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸಿಎಂ, ಜಿಲ್ಲಾ ಉಸ್ತುವಾರಿಗಳ ಜೊತೆ ಮಾತನಾಡಬೇಕು. ಮೊದಲೇ ಬಂದಿದ್ದರೆ ನೋಡಬಹುದಿತ್ತೇನೋ ಎಂದು ದಿಂಗಾಲೇಶ್ವರ ಶ್ರೀ ಟಿಕೆಟ್ ಬಗ್ಗೆ ಡಿಕೆಶಿ ಸ್ಪಷ್ಟನೆ ನೀಡಿದ್ದಾರೆ.
ತೇಜಸ್ವಿ ರಮೇಶ್ ಅವರು ಕೂಡ ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದು, ಆ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್, ತೇಜಸ್ವಿ ರಮೇಶ್ ವಾಪಸ್ ಬಂದಿದ್ದಾರೆ. ಅವರಿಗೆ ಬಿಜೆಪಿ ಬೇಡವಾಗಿದೆ. 10 ವರ್ಷಗಳ ನಂತರ ಮತ್ತೆ ಬಂದಿದ್ದಾರೆ. ಕೇರಳದಲ್ಲಿ ನಾನು ಪ್ರಚಾರ ಮಾಡಿದ್ದೆ. ಎರಡು ಕ್ಷೇತ್ರಗಳಲ್ಲಿ ಪ್ರಚಾರ ಪ್ರಾರಂಭಿಸಿದ್ದೆ. ಕಳೆದ ಬಾರಿ 9 ಸೀಟು ಯುಡಿಎಫ್ ಗೆದ್ದಿತ್ತು. ಈ ಭಾರಿ 20 ಸೀಟು ಗೆಲ್ಲಬಹುದು. ಬೆಂಗಳೂರು ಗ್ರಾಮಾಂತರದಲ್ಲಿ ಬಿಎಸ್ ಪಿ ವಿಥ್ ಡ್ರಾ ಮಾಡಿದ್ದಾರೆ. ಕಾಂಗ್ರೆಸ್ ಜೊತೆ ಸೇರಿದ್ದಾರೆ. ನಮ್ಮಲ್ಲಿ ಯಾವ ಭಿನ್ನಮತವಿಲ್ಲ ಎಂದಿದ್ದಾರೆ.