Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹೊರಗೆ ಬಾರದಂತೆ ಮೈಸೂರಿಗರಿಗೆ ಹವಮಾನ ಇಲಾಖೆಯಿಂದ ಎಚ್ಚರಿಕೆ : ಆರೆಂಜ್ ಅಲರ್ಟ್ ಘೋಷಣೆ

12:08 PM May 02, 2024 IST | suddionenews
Advertisement

ಮೈಸೂರು: ಬೆಳಗಿನ ಜಾವವೇ ಬಿಸಿಲಿನ ತಾಪ ಜೋರಾಗಿರುತ್ತೆ. ಮೇ ಸಮಯಕ್ಕೆ ಅದಾಗಲೇ ಭೂಮಿ ತಂಪಾಗಬೇಕಿತ್ತು. ಆದರೆ ಧಗೆ ಎಷ್ಟಿದೆ ಅಂದ್ರೆ ಹೊರಗೆ ಬರೋದಕ್ಕೆ ಸಾಧ್ಯವಾಗುತ್ತಿಲ್ಲ. ದಾಹವೂ ಹೆಚ್ಚಾಗಿದೆ. ಪಾನೀಯಗಳ ಬೆಲೆಯೂ ಗಗನಕ್ಕೇರುತ್ತಿದೆ. ಅದರಲ್ಲೂ ಕೆಲವು ಜಿಲ್ಲೆಗಳಲ್ಲಿ ಉಷ್ಣಾಂಶ ದಿನೇ ದಿನೇ‌ ಮಿತಿಮೀರುತ್ತಿದೆ. ಮೈಸೂರಲ್ಲಿ ಉಷ್ಣಾಂಶ ಹೆಚ್ಚಾಗಿದ್ದು, ಹವಮಾನ ಇಲಾಖೆ ಜನರ ಆರೋಗ್ಯದ ದೃಷ್ಟಿಯಿಂದ ಸಲಹೆ ನೀಡಿದೆ.

Advertisement

ಮೈಸೂರಿನಲ್ಲಿ ಆರೆಂಜ್ ಅಲರ್ಟ್ ಘೋಷಣೆ ಆಗಿದೆ. ಮೇ 5ರವರೆಗೂ ಮೈಸೂರಿನಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಶಾಖ ಜೋರಾದ ಕಾರಣ ಜನರಿಗೆ ಅಲರ್ಟ್ ಮಾಡಲು ಆರೇಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ವಯಸ್ಸದಾವರು, ಮಕ್ಕಳಿಗೇನೆ ಈ ವಾತಾವರಣ ಡೇಂಜರಸ್ ಆಗಿದೆ. ಕೆಲ ಜಿಲ್ಲೆಗಳಲ್ಲಿ ಬಿಸಿಲಿನ ತಾಪಕ್ಕೆ ವಯಸ್ಸಾದವರು ಸಾವನ್ನಪ್ಪಿರುವ ಘಟನೆಯೂ ನಡೆದಿದೆ.

ಇನ್ನು ಮೈಸೂರಿನಲ್ಲಿ ಕಾರ್ಮಿಕರಿಗೂ ಸೂಚನೆಯನ್ನು ನೀಡಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯ ತನಕ ಬಿಸಿಲಿನಲ್ಲಿ ನಿಂತು ಕೆಲಸ ಮಾಡಬೇಡಿ. ಇದರಿಂದ ಆಯಾಸವಾಗಿ ತಲೆ ಸುತ್ತು ಬರುವ ಸಾಧ್ಯತೆಯೂ ಇದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಜೊತೆಗೆ ವಯಸ್ಸಾದವರು ಮತ್ತು ಮಕ್ಕಳು ಆದಷ್ಟು‌ಮನೆಯಲ್ಲಿಯೇ ಇರುವುದಕ್ಕೆ ಪ್ರಯತ್ನ ಪಡಿ. ಹಿರಗೆ ಬಂದರೆ ಬಿಸಿಲಿನ ಬೇಗೆಗೆ ಆಯಾಸವಾಗಬಹುದು, ಅನಾರೋಗ್ಯಕ್ಕೂ ಕಾರಣವಾಗಬಹುದು ಎಂಬ ಎಚ್ಚರಿಕೆಯನ್ನು ಅವಮಾನ ಇಲಾಖೆ ನೀಡಿದೆ.

Advertisement

ಈ ಬಿಸಿಲಿನಿಂದಾಗಿ ಎಷ್ಟೋ ಜನರಿಗೆ ಅನಾರೋಗ್ಯ ಕಾಡುತ್ತಿದೆ. ಅತಿಸಾರ ಬೇಧಿ, ವಾಂತಿ, ಆಯಾಸವಾಗುವುದು ಸೇರಿದಂತೆ ಹಲವು ರೀತಿಯ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ ಡಿಹೈಡ್ರೇಷನ್ ಜಾಸ್ತಿಯಾಗುತ್ತಿದ್ದು, ಸಾಧ್ಯವಾದಷ್ಟು ನೀರು ಕುಡಿಯುವುದು ಉತ್ತಮವಾಗಿದೆ.

Advertisement
Tags :
announcedbengaluruchitradurgamysuruOrange alertoutsideresidentssuddionesuddione newsWeather department warns Mysoreಆರೆಂಜ್ ಅಲರ್ಟ್ಎಚ್ಚರಿಕೆಘೋಷಣೆಚಿತ್ರದುರ್ಗಬೆಂಗಳೂರುಮೈಸೂರುಸುದ್ದಿಒನ್ಸುದ್ದಿಒನ್ ನ್ಯೂಸ್ಹವಮಾನ ಇಲಾಖೆ
Advertisement
Next Article