Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನಮ್ಮಲ್ಲಿಯೂ ಶೂಟೌಟ್ ಮಾಡುವ ಕಾನೂನು ಇರಬೇಕಿತ್ತು : ಕೆ ಎನ್ ರಾಜಣ್ಣ ಹೀಗಂದಿದ್ಯಾಕೆ..?

01:55 PM Mar 09, 2024 IST | suddionenews
Advertisement

ತುಮಕೂರು: ಸಹಕಾರಿ ಸಚಿವ ಕೆ ಎನ್ ರಾಜಣ್ಣ ಹೇಳಿರುವ ಹೇಳಿಕೆಯೊಂದರ ವಿಡಿಯೋವನ್ನು ಬಿಜೆಪಿ ಟ್ವೀಟ್ ಮಾಡಿದೆ. ಆ ವಿಡಿಯೋದಲ್ಲಿ ಕೆ ಎನ್ ರಾಜಣ್ಣ, ವಿದೇಶದಲ್ಲಿ ಮಾಡಿದಂತೆ ನಮ್ಮಲ್ಲಿಯೂ ಶೌಟೌಟ್ ಮಾಡುವ ಕಾನೂನು ಇರಬೇಕಿತ್ತು ಎಂದಿದ್ದಾರೆ.

Advertisement

ಯಾರೇ ಆದರೂ ಸಮಾಜಘಾತುಕ ಕೃತ್ಯ ಎಸಗಿದರೆ ಅಂತವರನ್ನು ಖಂಡನೆ ಮಾಡಬೇಕು. ನಾನೇ ಮಾಡಲಿ ಅಥವಾ ಇನ್ನೊಬ್ಬರು ಮಾಡಲಿ ಅಂತವರನ್ನು ವಿರೋಧ ಮಾಡಬೇಕು. ಸಮಾಜದಲ್ಲಿ ಶಾಂತಿ, ನೆಮ್ಮದಿ ಇದ್ದಾಗ ಮಾತ್ರ ಎಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ. ಶಾಂತಿಯ ವಾತಾವರಣವನ್ನು ಕದಡುವಂತೆ ಯಾರೇ ಮಾಡಿದರೂ ಕೂಡ ವಿದೇಶದಲ್ಲಿ ಮಾಡಿದಂತೆ ನಮ್ಮಲ್ಲೂ ಶೂಟೌಟ್ ಮಾಡುವಂತಹ ಕಾನೂನು ಬಂದರೆ ಒಳ್ಳೆಯದು ಎಂದು ಸಹಕಾರಿ ಸಚಿವ ಕೆ ಎನ್ ರಾಜಣ್ಣ ಮಾತನಾಡಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

ಈ ವಿಡಿಯೋವನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಬಿಜೆಪಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ. 'ದೇಶ ದ್ರೋಹಿ ಆಪ್ತರನ್ನು ಹೊಂದಿರುವ ರಾಜ್ಯಸಭಾ ಸದಸ್ಯ ನಾಸೀರ್‌ ಹುಸೇನ್ ಯಾವುದೇ ಕಾರಣಕ್ಕೂ ಪ್ರಮಾಣ ವಚನ ಸ್ವೀಕರಿಸಬಾರದೆಂದು ಕಾಂಗ್ರೆಸ್ ಪಕ್ಷದ ನಾಯಕರಾದ ಸಹಕಾರ ಸಚಿವ @KNRajanna_Off ಆಗ್ರಹಿಸುತ್ತಿದ್ದಾರೆ. ಆದರೆ, @INCKarnataka ದ ಪಾ'ಕೈ'ಸ್ತಾನ್‌ ಸರ್ಕಾರ ಮಾತ್ರ ನಾಸೀರ್‌ ಸಾಬ್‌ ಜಿಂದಾಬಾದ್‌ ಎನ್ನುತ್ತಿದೆ. FSL ವರದಿಯಲ್ಲಿ ಘೋಷಣೆ ದೃಢವಾಗಿದ್ದರೂ ಮಜಾವಾದಿ @siddaramaiah ಸರ್ಕಾರ ಬ್ರದರ್ಸ್ ಕಾಪಾಡಿಕೊಳ್ಳುವ ಕುತಂತ್ರದಲ್ಲೇ ಕಾಲ ಕಳೆಯುತ್ತಿದೆ. @INCIndia ಗೆ ಸ್ವಲ್ವವಾದರೂ ದೇಶಾಭಿಮಾನ, ಸ್ವಾಭಿಮಾನ, ಮರ್ಯಾದೆ ಇದ್ದರೆ, ಕೂಡಲೇ ನಾಸೀರ್‌ ಹುಸೇನ್‌ ಅವರಿಂದ ರಾಜೀನಾಮೆ ಪಡೆದು ನಾವು ದೇಶ ದ್ರೋಹಿಗಳ ವಿರುದ್ಧ ನಿಂತಿದ್ದೇವೆ ಎಂದು ತೋರಿಸಬೇಕು' ಎಂದು ಟ್ವೀಟ್ ಮಾಡಿದೆ.

Advertisement

Advertisement
Tags :
bangaloreK n rajannatumkurಕಾನೂನುಕೆ ಎನ್ ರಾಜಣ್ಣತುಮಕೂರುಬೆಂಗಳೂರುಶೂಟೌಟ್
Advertisement
Next Article