For the best experience, open
https://m.suddione.com
on your mobile browser.
Advertisement

ತುಂಗಾ ಭದ್ರಾ ನದಿಗೆ 9 ದಿನಗಳ ಕಾಲ ನೀರು ಬಿಡುಗಡೆ

02:24 PM Mar 27, 2024 IST | suddionenews
ತುಂಗಾ ಭದ್ರಾ ನದಿಗೆ 9 ದಿನಗಳ ಕಾಲ ನೀರು ಬಿಡುಗಡೆ
Advertisement

ಶಿವಮೊಗ್ಗ: ಬೇಸಿಗೆಯ ಬಿಸಿ ಹೇಗಿದೆ ಅಂದ್ರೆ ಜನ ಕುಡಿಯುವ ನೀರಿಗೂ ಹಾಹಾಕಾರ ಅನುಭವಿಸುವಂತೆ ಆಗಿದೆ. ಜನ ಇರಲಿ ಜಾನುವಾರುಗಳಿಗೂ ಅದು ಸಮಸ್ಯೆಯೇ ಆಗಿದೆ. ನದಿಗಳು, ಡ್ಯಾಮ್ ಗಳು ಬತ್ತಿ ಹೋಗಿದೆ. ತುಂಗಾ ಭದ್ರಾ ನದಿಯಲ್ಲೂ ನೀರು ಕಡಿಮೆಯಾಗುತ್ತಿದ್ದು, ಸುತ್ತಮುತ್ತಲಿನ ಗ್ರಾಮದ ಜನ ನೀರಿನ ಬಗ್ಗೆ ಭಯ ಪಟ್ಟಿದ್ದರು. ಇದೀಗ ಒಂಭತ್ತು ದಿನಗಳ ಕಾಲ ತುಂಗಭದ್ರಾ ನದಿಗೆ ನೀರು ಬಿಡುವ ನಿರ್ಧಾರ ಮಾಡಿದೆ. ಭದ್ರಾ ಡ್ಯಾಂನಿಂದ ನೀರು ಬಿಡಲಾಗುತ್ತಿದೆ.

Advertisement

ಕರ್ನಾಟಕ ನೀರಾವರಿ ನಿಗಮ ನಿಯಮಿತ ಅಧೀಕ್ಷಕ ಇಂಜಿನಿಯರ್ ಕಚೇರಿ ಭದ್ರಾ ಯೋಜನಾ ಔಋತ್ತ ಭದ್ರಾ ನದಿ ಮೂಲಕ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ನದಿಗೆ ನೀರು ಹರಿಸಲು ವೇಳಾಪಟ್ಟಿ ಘೋಷಣೆ ಮಾಡಿದೆ. ಸದಸ್ಯ, ಕಾರ್ಯದರ್ಶಿಗಳು, ಭದ್ರಾ ಜಲಾಶಯ ಯೋಜನೆಯ ಕುಡಿಯುವ ನೀರಿನ ಸಮಿತಿ ಹಾಗೂ ಅಧೀಕ್ಷಕ ಅಭಿಯಂತರರು, ಭದ್ರ ಯೋಜನಾ ವೃತ್ತ ಬಿ ಆರ್ ಪ್ರಾಜೆಕ್ಟ್ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ.

Advertisement

ಮಾರ್ಚ್ 29ರ ರಾತ್ರಿಯಿಂದ ಏಪ್ರಿಲ್ 6ರ ರಾತ್ರಿಯ ತನಕ 23,200 ಕ್ಯೂಸೆಕ್ ನೀರು ನೀರನ್ನು ಹರಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. * 30/3/2024 : 3 ಸಾವಿರ ಕ್ಯೂಸೆಕ್. 31/3/2024: 3 ಸಾವಿರ ಕ್ಯುಸೆಕ್, 1/4/2024: 3 ಸಾವಿರ ಕ್ಯುಸೆಕ್, 2/4/2024: 3 ಸಾವಿರ ಕ್ಯುಸಕ್, 3/4/2024: 3 ಸಾವಿರ ಕ್ಯುಸೆಕ್, 4/4/2024 :3 ಸಾವಿರ ಕ್ಯುಸೆಕ್, 5/4/2024: 3 ಸಾವಿರ ಕ್ಯುಸೆಕ್, 6/4/2024: 2,200 ಕ್ಯುಸೆಕ್. ಈ ಸಮಯದಲ್ಲಿ ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದಾಗಲಿ, ದನಕರುಗಳನ್ನು ನದುಗೆ ಇಳಿಸುವುದಾಗಲು ಇತ್ಯಾದಿ ಚಟುವಟಿಕೆಗಾಗಿ ನದುಗೆ ಇಳಿಯದಂತೆ ಎಚ್ಚರಿಕೆ ನೀಡಿದ್ದಾರೆ‌

Tags :
Advertisement