Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನಾಯಕನಹಟ್ಟಿ ಚಿಕ್ಕಕೆರೆಗೆ ಹರಿದು ಬರುತ್ತಿರುವ ನೀರು : ರೈತರ ಮೊಗದಲ್ಲಿ ಸಂತಸ

05:35 PM Aug 22, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಳ್ಳಕೆರೆ ಆ.22 : ಕಳೆದ ಕೆಲವು ದಿನಗಳಿಂದ ಬೆಂಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ, ಕಟ್ಟೆಗಳು, ಜಲಾಶಯಗಳು ತುಂಬುತ್ತಿವೆ. ಇದೇ ನಾಡಿನ ಜನತೆಗೆ ಹರ್ಷ ತರುವಂತೆ ಮಾಡಿದೆ. ಅದರಲ್ಲೂ ಐತಿಹಾಸಿಕ ಕೆರೆಗಳು ತುಂಬಿವೆ. ನಾಯಕನಹಟ್ಟಿ ಪಟ್ಟಣದಲ್ಲಿ ಚಿಕ್ಕಕೆರೆ ಇದೆ. ಅದನ್ನು ಮಧ್ಯ ಕರ್ನಾಟಕದ ಐತಿಹಾಸಿಕ ಪವಾಡ ಪುರುಷ ಮಾಡಿದಷ್ಟು ಬಿಕ್ಷೆ ನೀಡಿ ಎಂಬ ವಚನ ನುಡಿದಿರುವ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಗಳು ನಿರ್ಮಿಸಿದ್ದರು. ಇದೀಗ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಚಿಕ್ಕಕೆರೆಗೆ ನೀರು ಬಂದಿದೆ. ಕೆರೆಗೆ ನೀರು ಬಂದು ರೈತರ ಮೊಗದಲ್ಲಿ ಮಂದಹಾಸವನ್ನು ಮೂಡಿಸಿದೆ.

Advertisement

ಹಲವು ವರ್ಷಗಳಿಂದ ಈ ಕೆರೆ ನೀರಿಲ್ಲದೆ ಬರಿದಾಗಿತ್ತು. ಕೆರೆಯ ಮೂಲ ಹಳ್ಳಗಳಲ್ಲಿ ಗೋಕಟ್ಟೆಗಳ ನಿರ್ಮಾಣದಿಂದಾಗಿ ಕೆರೆಗೆ ನೀರು ಬರುವ ಸಾಧ್ಯತೆ ಕಡಿಮೆ ಇತ್ತು. ಆದರೆ ಸುರಿದ ಮಳೆಯಿಂದಾಗಿ ಎಲ್ಲಾ ಗೋಕಟ್ಟುಗಳು ತುಂಬಿ, ಕೆರೆಗೆ ನೀರು ಬಂದಿದ್ದು ಅಕ್ಕ ಪಕ್ಕದ ರೈತರ ಜಮೀನುಗಳಲ್ಲಿ ನೀರಿನ ಕೊರತೆ ಉಂಟಾಗದಂತೆ ಈ ಕೆರೆ ನೋಡಿಕೊಳ್ಳುತ್ತದೆ. ಆದ್ದರಿಂದ ರೈತರು ಮೊಗದಲ್ಲಿ ಸಂತೋಷ ಉಂಟಾಗಿದೆ. ಚಿಕ್ಕಕೆರೆ ತುಂಬಿದರೆ ಸುತ್ತಮುತ್ತ ಹಳ್ಳಿನ ಜನರಿಗೆ ಅಂತರ್ಜಲ ವೃದ್ಧಿಯಾಗುತ್ತದೆ
ಸುಮಾರು ಹತ್ತು ವರ್ಷಗಳಿಂದ ಚಿಕ್ಕಕೆರೆಯಲ್ಲಿ ನೀರು ಇಲ್ಲದೆ ಸೊರಗುತ್ತಿತ್ತು.

ಆದರೆ ಮಳೆರಾಯ ಕೊನೆಗೂ ನಮ್ಮನ್ನು ಕೈ ಬಿಡಲಿಲ್ಲ.
ಕೊನೆಗೂ ವರುಣ ದೇವನಿಗೆ ರೈತರು ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ನಾಯಕನಹಟ್ಟಿ ಪಟ್ಟಣದ ಧಾರ್ಮಿಕ ಕೇಂದ್ರ 15 ಸಾವಿರ ಹೆಚ್ಚು ಜನಸಂಖ್ಯೆ ಹೊಂದಿದೆ. ಇಲ್ಲಿನ ಜನಗಳಿಗೆ ಚಿಕ್ಕಕೆರೆ ಜೀವನಾಡಿ, ಹಸುಗಳಿಗೆ ನೀರಿನ ಮೂಲ ಇದಾಗಿದೆ. ಅಂತರ್ಜಲಕ್ಕೆ ಪ್ರಮುಖ ಆಸರೆಯಾಗಿದೆ. ಶ್ರೀ ಗುರು ತಿಪ್ಪೇರುದ್ರಸ್ವಾಮಿ ಸುಮಾರು 300 ವರ್ಷಗಳ ಹಿಂದೆ ಈ ಕೆರೆಯನ್ನು ನಿರ್ಮಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

Advertisement
Tags :
bengaluruchitradurgaFarmers are happyNayakanahattiNayakanahatti Chikkaresuddionesuddione newsWater flowinಚಿಕ್ಕಕೆರೆಚಿತ್ರದುರ್ಗನಾಯಕನಹಟ್ಟಿಬೆಂಗಳೂರುರೈತರ ಮೊಗದಲ್ಲಿ ಸಂತಸಸುದ್ದಿಒನ್ಸುದ್ದಿಒನ್ ನ್ಯೂಸ್ಹರಿದು ಬರುತ್ತಿರುವ ನೀರು
Advertisement
Next Article