Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ವಕ್ಫ್ ವಿವಾದ : ರೈತರಿಗೆ ಕೊಟ್ಟ ನೋಟೀಸ್ ವಾಪಸ್, ಕಂದಾಯ ಇಲಾಖೆಯ ದಾಖಲೆಯೇ ಅಂತಿಮ : ಜಿ.ಪರಮೇಶ್ವರ್ ಹೇಳಿದ್ದೇನು..?

01:17 PM Nov 02, 2024 IST | suddionenews
Advertisement

ಬೆಂಗಳೂರು: ಕಳೆದ ಕೆಲವು ದಿನಗಳಿಂದಾ‌ನೂ ವಕ್ಫ್ ಮಂಡಳಿ ಹಾಗೂ ರೈತರ ನಡುವೆ ಹೋರಾಟ ನಡೆಯುತ್ತಿದೆ. ಜಿಲ್ಲಾಧಿಕಾರಿಗಳ ಮಾತಿನಂತೆ ರೈತರು ಸದ್ಯ ಹೋರಾಟ ಕೈ ಬಿಟ್ಟಿದ್ದಾರೆ. ಈ ಸಂಬಂಧ ಗೃಹ ಸಚಿವ ಜಿ.ಪರಮೇಶ್ವರ್ ಅವರು ಮಾತನಾಡಿ, ವಕ್ಫ್ ಆಸ್ತಿ ವಿವಾದ ಸಂಬಂಧ ರೈತರಿಗೆ ಯಾವ ನೋಟೀಸ್ ಕೊಡುವಂತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಅದರಂತೆ ಈಗಾಗಲೇ ನೋಟೀಸ್ ನೀಡಿದ್ದರು ಅದನ್ನು ವಾಪಾಸ್ ತೆಗೆದುಕೊಳ್ಳಲು ತಿಳಿಸಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.

Advertisement

ತುಮಕೂರಿನಲ್ಲಿ ಸದ್ಯಕ್ಕೆ ಯಾರಿಗೂ ನೋಟೀಸ್ ಕೊಟ್ಟಿಲ್ಲ. ಇಲ್ಲಿಗೆ ಇದು ಮುಗಿದು ಹೋದ ಅಧ್ಯಾಯ. ಮುಂದೆ ಯಾವ ರೀತಿ ಬೆಳವಣಿಗೆಯಾಗುತ್ತೆ ಎಂಬುದು ಗೊತ್ತಿಲ್ಲ. ಕಂದಾಯ ಇಲಾಖೆಯ ದಾಖಲಾತಿಗಳು ಹಾಗೂ ವಕ್ಫ್ ದಾಖಲಾತಿಗಳು ಒಂದೇ ರೀತಿ ಇದ್ದಾಗ ಮಾತ್ರ ಗೊಂದಲವಾಗುವುದಿಲ್ಲ. ಕಂದಾಯ ಇಲಾಖೆಯಲ್ಲಿನ ದಾಖಲಾತಿಗಳೇ ಅಂತಿಮ ಎಂದಿದ್ದಾರೆ.

ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲು ಕೆಲಸ ಮಾಡಲ್ಲ ಎಂದಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಅವರು ಸಿದ್ದರಾಮಯ್ಯ ಬಗ್ಗೆ ರಾಜಕೀಯ ಪುಡಾರಿ ಎಂಬ ಮಾತು ಬಳಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದಸಚಿವ ಪರಮೇಶ್ವರ್, ಈ ಬಗ್ಗೆ ಅಂದಿರೋದು ಗೊತ್ತಿಲ್ಲ. ಆದರೆ ರಾಜಕೀಯ ಪುಡಾರಿ ಅಂದಿದ್ದು ತಪ್ಪಾ..? ಸರಿನಾ..? ನಂಗೆ ಗೊತ್ತಿಲ್ಲ. ನಮ್ಮನ್ನು ಪುಡಾರಿ ಎನ್ನುತ್ತಾರೆ. ಪುಡಾರಿ ಶಬ್ಧ ಬಳಸಿದ್ದು ಸರಿನಾ ಎಂದು ಗೃಹ ಸಚಿವ ಜಿ ಪರಮೇಶ್ವರ್ ಪ್ರಶ್ನೆ ಮಾಡಿದ್ದಾರೆ. ಪ್ರಧಾನಿ ಮೋದಿ ಅವರಿ ಪುಡಾರಿ ಪದ ಬಳಸಿದ್ದಾರೆ ಎಂಬುದಕ್ಕೆ ವಿರೋಧ ವ್ಯಕ್ತವಾಗಿದೆ.

Advertisement

Advertisement
Tags :
bengaluruchitradurgaDr.G parameshwarFarmersG ParameshwarRevenue departmentsuddionesuddione newsWaqf Controversyಕಂದಾಯ ಇಲಾಖೆಚಿತ್ರದುರ್ಗಡಾ.ಜಿ.ಪರಮೇಶ್ವರ್ನೋಟೀಸ್ ವಾಪಸ್ಬೆಂಗಳೂರುರೈತರುವಕ್ಫ್ ವಿವಾದಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article