Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ವಕ್ಫ್ ವಿವಾದ : ಜಮೀರ್‌ ಮೇಲೆ ರೇಣುಕಾಚಾರ್ಯ ಕಿಡಿ..!

06:48 PM Nov 14, 2024 IST | suddionenews
Advertisement

ದಾವಣಗೆರೆ: ರಾಜ್ಯದೆಲ್ಲೆಡೆ ವಕ್ಫ್ ವಿವಾದ ಜೋರಾಗಿದೆ. ರೈತರ ಜಮೀನು, ದೇವಸ್ಥಾನಗಳ ಪಹಣಿಗಳೆಲ್ಲಾ ವಕ್ಫ್ ಹೆಸರು ಸೇರ್ಪಡೆಯಾಗಿ ವಿವಾದ ಹುಟ್ಟು ಹಾಕಿದೆ. ಈ ಸಂಬಂಧ ಕೋಪಗೊಂಡ ರೇಣುಕಾಚಾರ್ಯ, ಇದೀಗ ಸಚಿವ ಜಮೀರ್ ಅಹ್ಮದ್ ವಿರುದ್ಧ ಕೆಂಡದಂತ ಕೋಪ ಹೊರ ಹಾಕಿದ್ದಾರೆ.

Advertisement

ದಾವಣಗೆರೆಯಲ್ಲಿ ಮಾತನಾಡಿದ ಅವರು, ಸಿದ್ದು ಸರ್ಕಾರ ರಾಜ್ಯವನ್ನು ಪಾಕಿಸ್ತಾನ ಮಾಡ್ತಿದೆ. ಜಮೀರ್ ಅಹ್ಮದ್ ನಡವಳಿಕೆಯನ್ನು ಪಕ್ಷಾತೀತವಾಗಿ ಖಂಡಿಸಬೇಕಿದೆ. ಮೌನವಾಗಿದ್ದರೆ ಅದು ನಮ್ಮ ದೌರ್ಬಲ್ಯದಂತಾಗುತ್ತದೆ. ಸಿಎಂ ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ತಾಳಕ್ಕೆ ಕುಣಿಯುತ್ತಾ ಇದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಅಷ್ಟೇ ನೋಟೀಸ್ ವಾಪಾಸ್ ಪಡೆಯುವುದಕ್ಕೆ ಹೇಳಿದ್ದಾರೆ ವಿನಃ, ಪಹಣಿಯಲ್ಲಿ ಬದಲಾಯಿಸಲು ಹೇಳಿಲ್ಲ. ಇದಿ ಸಿಎಂ ಸಿದ್ದರಾಮಯ್ಯ ಅವರು ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. ನೀವೂ ಹಿಂದೂ ಪರವಾ ಅಥವಾ ಜಮೀರ್ ಸಂತತಿ ಪರವಾ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿದ್ದಾರೆ.

ಇನ್ನು ಇದೆ ವೇಳೆ ನಾಗೇಂದ್ರ ಅವರ ಬಗ್ಗೆ ವಾಗ್ದಾಳಿ ನಡೆಸಿ, ನಾಗೇಂದ್ರನನ್ನು ಮತ್ತೆ ಸಚಿವನಾಗುವುದಕ್ಕೆ ಬಿಜೆಪಿ ಬಿಡುವುದಿಲ್ಲ. ಸಿದ್ದರಾಮಯ್ಯ ಪ್ರಮಾಣ ವಚನದ ವೇಳೆ ನಾಡಿನ ಹಿತ ಕಾಯುವುದಾಗಿ ಹೇಳಿದ್ದೀರಿ. ಆದರೆ ಈಗ ಮಾಡುತ್ತಿರುವುದೇ ಬೇರೆ. ಜಮೀರ್ ತಾಳಕ್ಕೆ ಕುಣಿಯುತ್ತಾ ಇದ್ದಾರೆ. ವಕ್ಫ್ ದೇಶಕ್ಕೆ ಮಾರಕವಾಗಿದೆ. ಕಾಲಿಯಾ ಪದ ಬಳಕೆ ಮಾಡ್ತೀಯ ಜಮೀರ್ ನಾಚಿಕೆ ಆಗಲ್ವಾ. ಇದು ಅವರ ಕುಟುಂಬಕ್ಕೆ ಮಾಡಿದ ಅವಮಾನ ಅಲ್ವಾ. ನೀನು ಗುಜರಿ ಕೆಲಸ ಮಾಡ್ತಾ ಇದ್ದೆ. ಆದರೆ ಆಗ ನಿನ್ನನ್ನು ಶಾಸಕನನ್ನಾಗಿ ಮಾಡಿದ್ದು, ದೇವೇಗೌಡರು ಹಾಗೂ ಕುಮಾರಸ್ವಾಮಿ ಎಂದು ಜಮೀರ್ ಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.

Advertisement

Advertisement
Tags :
bengaluruchitradurgaJameerkannadaKannadaNewsRenukacharyasuddionesuddionenewsWaqf Controversyಎಂಪಿ ರೇಣುಕಾಚಾರ್ಯಕನ್ನಡಕನ್ನಡವಾರ್ತೆಕನ್ನಡಸುದ್ದಿಚಿತ್ರದುರ್ಗಜಮೀರ್ಬೆಂಗಳೂರುವಕ್ಫ್ ವಿವಾದಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article