ವಕ್ಫ್ ಬೋರ್ಡ್ ವಿವಾದ : ಸಿಎಂ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕೆಂಡಾಮಂಡಲ..!
ಚಿತ್ರದುರ್ಗ : ರಾಜ್ಯದಲ್ಲಿ ಸದ್ಯ ವಕ್ಪ್ ಬೋರ್ಡ್ ವಿವಾದ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ನೋಟೀಸ್ ವಾಪಸ್ ಪಡೆಯಲು ಸೂಚಿಸಿದ್ದಾರೆ. ಈ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಕೆಂಡಾಮಂಡಲರಾಗಿದ್ದಾರೆ. ರೈತರ ಜಮೀನು ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೊಂದಲ ಸೃಷ್ಟಿಸಿದರು, ಸಚಿವ ಜಮೀರ್ ಬೆಂಕಿ ಹಚ್ಚಿದ್ರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕಿಡಿಕಾರಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂ ರೈತರ ಜಮೀನುಗಳನ್ನು ಒಂದು ಕಡೆಯಾದರೆ, ಮತ್ತೊಂದು ಕಡೆ ದೇವಸ್ಥಾನಗಳು ಮಠಮಾನ್ಯಗಳ ಜಮೀನು ಕೂಡ ಒಡೆಯುತ್ತಿದ್ದಾರೆ. ಸಿದ್ದರಾಮಯ್ಯ ಮೋಸಳೆ ಕಣ್ಣೀರು ಹಾಕುತ್ತಿದ್ದಾರೆ. ಇವರಿಗೆ ತಾಕತ್ತಿದ್ರೆ ಗೆಜೆಟ್ ನೋಟಿಫಿಕೇಶನ್ ಮೊದಲು ರದ್ದು ಮಾಡಬೇಕು. ಉಪಚುನಾವಣೆ ಬಳಿಕ ನೋಟಿಸ್ ಕೊಟ್ಟು ರೈತರಿಗೆ ಅನ್ಯಾಯ ಮಾಡುತ್ತಾರೆ. ಜಮೀರ್ ಮಾಡುವ ಕೆಲಸ ಏನು, ಗೂಂಡಾ ವರ್ತನೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಸಚಿವ ಜಮೀರ್ ಅವರನ್ನು ಗಡಿಪಾರು ಮಾಡಿದ್ರೆ ರಾಜ್ಯಕ್ಕೆ ಒಳಿತಾಗುತ್ತದೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ. ವಕ್ಫ್ ಬೋರ್ಡ್ ವಿಷಯದಲ್ಲಿ ಗೊಂದಲ ಸೃಷ್ಟಿ ಮಾಡಿದ್ದು ಸಿದ್ದರಾಮಯ್ಯ, ಬೆಂಕಿ ಹಚ್ಚಿದ್ದು ಜಮೀರ್ ಅಹ್ಮದ್ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಭ್ರಷ್ಟಾಚಾರ ರಹಿತ ಆಡಳಿತ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಆದರೆ ಇದೀಗ ಅವರ ಬಣ್ಣ ಬದಲಾಗಿದ್ದು, ಸಿಎಂ ಕುಟುಂಬ 14 ಮೂಡ ನಿವೇಶನ ದೋಚಿದೆ. ಮುಖ್ಯಮಂತ್ರಿಗಳ ಆಪ್ತ ಹಾಗೂ ಮೂಡ ಕಮಿಷನರ್ ಓಡಿ ಹೋಗಿದ್ದಾರೆ. ರಾಜ್ಯದ ಐದು ಗ್ಯಾರಂಟಿಗಳನ್ನ ಟಿಕಿಸಿರುವ ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ ಕಾರಿದ್ದರು. ಸಿಎಂ ಹೇಳಿಕೆಗೆ ಉತ್ತರಿಸಿರುವ ವಿಜಯೇಂದ್ರ ಅವರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡುವ ಯೋಗ್ಯತೆ ಸಿದ್ದರಾಮಯ್ಯ ಅವರಿಗೆ ಇಲ್ಲ. ಮೋದಿ ನಾಯಕತ್ವವನ್ನು ವಿಶ್ವ ಒಪ್ಪಿಕೊಂಡಿದೆ. ಅವರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಬಾಯಿ ಮುಚ್ಚಿಕೊಂಡು ಇದ್ರೆ ಒಳ್ಳೆಯದು ಎಂದರು.