Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮೃತ ನೇಹಾ ಮನೆಗೆ ಮುಸ್ಲಿಂ ಮುಖಂಡರ ಭೇಟಿ : ನಿರಂಜನ ದೇಶಪಾಂಡೆಗೆ ಸಾಂತ್ವನ

08:53 PM Apr 20, 2024 IST | suddionenews
Advertisement

ಹುಬ್ಬಳ್ಳಿ: ನೇಹಾ ಎಂಬ ಎಂಸಿಎ ವಿದ್ಯಾರ್ಥಿನಿಯನ್ನು ಫಯಾಜ್ ನಿನ್ನೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈಗಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆಯನ್ನು ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಹೋರಾಟಗಳು ಕೂಡ ನಡೆದಿವೆ. ಇದೀಗ ಮುಸ್ಲಿಂ ಮುಖಂಡರು ಮೃತ ನೇಹಾ ಮನೆಗೆ ಭೇಟಿ ನೀಡಿ, ನಿರಂಜನ್ ಹಿರೇಮಠ ಅವರಿಗೆ ಸಾಂತ್ವನ ಹೇಳಿ ಬಂದಿದ್ದಾರೆ.

Advertisement

ಮುಸ್ಲಿಂ ಮುಖಂಡರು ಭೇಟಿ ನೀಡಿದ್ದು, ನಿನ್ನೆಯೇ ನಿಮ್ಮ ಮನೆಗೆ ಬರಬೇಕಿತ್ತು. ಆದರೆ ಭೇಟಿ ನೀಡಲು ಧೈರ್ಯ ಸಾಕಾಗಲಿಲ್ಲ. ಜೊತೆಗೆ ಸಮಾಧಾನ ಹೇಳುವ ಮನಸ್ಸು ಇರಲಿಲ್ಲ ಎಂದಿದ್ದಾರೆ. ಇದೇ ವೇಳೆ ನೇಹಾ ಅಣ್ಣ ನಿರಂಜನ್ ಮಾತನಾಡಿ, ಯಾರೋ ಮಾಡಿದ ತಪ್ಪಿಗೆ ನಾನ್ಯಾವಾಗ ನಿಮ್ಮ ಸಮುದಾಯದ ಬಗ್ಗೆ ಮಾತನಾಡಿದೆ. ಆಕೆ ನಮ್ಮ ಮನೆ ಮಹಾಲಕ್ಷ್ಮಿ ಇದ್ದಂತೆ. ಅವಳನ್ನು ಯಾರೋ ಟಾರ್ಗೆಟ್ ಮಾಡಿದ್ದಾರೆ ಎಂದಿದ್ದಾರೆ.

ನಿರಂಜನ್ ಕೂಡ ಮುಸ್ಲಿಂ ಮುಖಂಡರೊಂದಿಗೆ ಬಾಂಧವ್ಯದಿಂದಾನೆ ಇದ್ದು, ಮನೆಗೆ ಬಂದ ಮುಖಂಡರು, ನೇಹಾರನ್ನು ಯಾರೂ ಟಾರ್ಗೆಟ್ ಮಾಡಿದ್ದಾರೋ ಅವರಿಗೆ ಒಳ್ಳೆಯದು ಆಗಲ್ಲ. ನಾವೆಲ್ಲರೂ ನಿಮ್ಮ ಜೊತೆಗೆ ಇದ್ದೀವಿ. ಕೆಟ್ಟದು ಮಾಡಿದವ್ರಿಗೆ ದೇವರು ಕೆಟ್ಟದ್ದೇ ಮಾಡುತ್ತಾನೆ. ನಾನು ನಿರಂಜನ್ ಡಿಗ್ರಿವರೆಗೂ ಒಟ್ಟಿಗೆ ಓದಿದ್ದೇವೆ ಎಂದಿದ್ದಾರೆ.

Advertisement

Advertisement
Tags :
condolenceshubliMuslim leadersNeha murderNeha's houseNiranjan Deshpandeನಿರಂಜನ ದೇಶಪಾಂಡೆಮುಸ್ಲಿಂ ಮುಖಂಡರ ಭೇಟಿಮೃತ ನೇಹಾಸಾಂತ್ವನಹುಬ್ಬಳ್ಳಿ
Advertisement
Next Article