For the best experience, open
https://m.suddione.com
on your mobile browser.
Advertisement

ಐಪಿಎಲ್ ನಿಂದ ಹೊರಬಿದ್ದ ಮೇಲೆ ಅಭಿಮಾನಿಗಳಿಗಾಗಿ ಪೋಸ್ಟ್ ಹಾಕಿದ ವಿರಾಟ್ ಕೊಹ್ಲಿ

06:21 PM May 24, 2024 IST | suddionenews
ಐಪಿಎಲ್ ನಿಂದ ಹೊರಬಿದ್ದ ಮೇಲೆ ಅಭಿಮಾನಿಗಳಿಗಾಗಿ ಪೋಸ್ಟ್ ಹಾಕಿದ ವಿರಾಟ್ ಕೊಹ್ಲಿ
Advertisement

Advertisement

ಈ ಬಾರಿಯ ಐಪಿಎಲ್ ನಲ್ಲಿ ಆರ್ಸಿಬಿ ಟೀಂ ಆಡಿದ್ದು ನೋಡಿದ್ರೆ ಖಂಡಿತ ಕಪ್ ಗೆದ್ದು ತಂದೇ ತರುತ್ತಾರೆ ಎಂಬ ವಿಶ್ವಾಸ ಎಲ್ಲರಿಗೂ ಮೂಡಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಸೋತು, ಮನೆ ಕಡೆಯ ದಾರಿ ಹಿಡಿಯಿತು. ಅಭಿಮಾನಿಗಳಿಗೆ ಬೇಸರವಾದರೂ ತಮ್ಮ ಆರ್ಸಿಬಿ ತಂಡವನ್ನು ಪ್ರಶಂಸಿದರೆ ಬಿಡಲಿಲ್ಲ. ಕೊನೆ ಗಳಿಗೆಯಲ್ಲೂ ಚೆನ್ನಾಗಿ ಆಡಿದ್ರಿ ಎಂದು ಹೊಗಳಿದ್ದರು. ಇದೀಗ ಐಪಿಎಲ್ ಸೋತ ಮೂರು ದಿನಗಳ ಬಳಿಕ ವಿರಾಟ್ ಕೊಹ್ಲಿ ಅಭಿಮಾನಿಗಳಿಗಾಗಿ ಪೋಸ್ಟ್ ಒಂದನ್ನು ಹಾಕಿದ್ದಾರೆ.

Advertisement

ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗಾಗಿ ಪೋಸ್ಟ್ ಹಾಕಿರುವ ವಿರಾಟ್ ಕೊಹ್ಲಿ, ಯಾವಾಗಲೂ ನಮ್ಮನ್ನು ಪ್ರೀತಿಸುವ, ಪ್ರಶಂಶಿಸುವ ಅಭಿಮಾನಿಗಳಿಗೆ ಮತ್ತೊಮ್ಮೆ ಧನ್ಯವಾದಗಳು ಎಂದು ಐಪಿಎಲ್ ನಲ್ಲಿ ತಮ್ಮ ಟೀಂ ಫೋಟೋ ಹಂಚಿಕೊಂಡು ಅಭಿಮಾನಿಗಳಿಗಾಗಿ ಪೋಸ್ಟ್ ಹಾಕಿದ್ದಾರೆ. ಅಭಿಮಾನಿಗಳೆಲ್ಲಾ ಈ ಪೋಸ್ಟ್ ಗೆ ಹಾರ್ಟ್ ನೀಡಿ, ಸದಾ ನಿಮ್ಮ ಬೆಂಬಲಕ್ಕೆ ಇದ್ದೀವಿ. ಮುಂದಿನ ಸಲ ಖಂಡಿತ ಕಪ್ ನಮ್ಮದೆ ಎಂದಿದ್ದಾರೆ.

Advertisement

ಸತತ 16 ವರ್ಷ.. ಆರ್ಸಿಬಿ ಮಾತ್ರ ಕಪ್ ಗೆಲ್ಲಲಿಲ್ಲ. ಈ ಬೇಸರ ಆರ್ಸಿಬಿ ತಂಡಕ್ಕೂ ಇದೆ ಎಂಬುದಾಗಿಯೇ ಎಲ್ಲರೂ ಭಾವಿಸಿದ್ದಾರೆ. ಈ ಬಾರಿ ಮಹಿಳಾ ಮಣಿಗಳೇ ಕಪ್ ಹೊಡೆದುಕೊಂಡು ಬಂದಿದ್ದಾರೆ. ಪುರುಷರು ಕೂಡ ಗೆದ್ದೆ ಗೆಲ್ಲುತ್ತಾರೆ ಎಂದುಕೊಂಡಿದ್ದರು. ಆದರೆ ಪ್ಲೇ ಆಫ್ ಗೆ ಬಂದು ಕನಸನ್ನು ನನಸು ಮಾಡಿಕೊಳ್ಳುವುದಕ್ಕೆ ಆಗಿಲ್ಲ. ಇದು ಸಹಜವಾಗಿಯೇ ಅಭಿಮಾನಿಗಳಿಗೆ ಬೇಸರ ತರಿಸಿದೆ. ಆದರೂ ಭರವಸೆಯನ್ನಿಟ್ಟುಕೊಂಡು ಮತ್ತೆ ಬೆಂಬಲ ಸೂಚಿಸಿದ್ದಾರೆ. ಅದರಲ್ಲೂ ಈ ಬಾರಿಯ ಸೀಸನ್ ನಲ್ಲಿ ಕೊಹ್ಲಿ ಅದ್ಬುತ ಪ್ರದರ್ಶನ ನೀಡಿದ್ದಾರೆ.

Advertisement
Advertisement

Advertisement
Tags :
Advertisement