For the best experience, open
https://m.suddione.com
on your mobile browser.
Advertisement

ತೀವ್ರ ಹೃದಯಾಘಾತದಿಂದ ವಿರಕ್ತಪಠದ ಸ್ವಾಮೀಜಿ ನಿಧನ..!

01:29 PM Jul 08, 2024 IST | suddionenews
ತೀವ್ರ ಹೃದಯಾಘಾತದಿಂದ ವಿರಕ್ತಪಠದ ಸ್ವಾಮೀಜಿ ನಿಧನ
Advertisement

ಕಲಬುರಗಿ: ವಿರಕ್ತ ಮಠದ ಶ್ರೀ ಸಿದ್ದರಾಮ ಸ್ವಾಮೀಜಿಗಳು ತೀವ್ರ ಹೃದಯಾಘಾತದಿಂದ ನಿಧನರಾಗಿರುವ ಸುದ್ದಿ ಹೊರ ಬಂದಿದೆ. ರಾತ್ರಿ ಪ್ರವಚನ ಮುಗಿಸಿದ್ದ ಸ್ವಾಮೀಜಿ ಬೆಳಗಾಗುವುದರೊಳಗೆ ಇಹಲೋಕ ತ್ಯಜಿಸಿದ್ದಾರೆ. ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿ ರಠಕಲ್ ವಿರಕ್ತ ಮಠದ ಸ್ವಾಮೀಜಿ ನಿಧನರಾಗಿದ್ದಾರೆ. ಆದರೆ ಸ್ವಾಮೀಜಿಗೆ ಬರೀ 35 ವರ್ಷವಾಗಿತ್ತು. ಇಷ್ಟು ಚಿಕ್ಕ ವಯಸ್ಸಿಗೇನೆ ಹೃದಯಾಘಾತವಾಗಿದ್ದು ಭಕ್ತ ವೃಂದದವರಿಗೆ ಶಾಕ್ ಆಗಿದೆ. ನಸುಕಿನ ಜಾವ ತೀವ್ರ ಹೃದಯಾಘಾತದಿಂದ ಮಠದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.

Advertisement
Advertisement

ನಿನ್ನ ರಠಕಲ್ ಗ್ರಾಮದಲ್ಲಿ ಅದ್ದೂರಿಯಾಗಿ ವಚನ ಸಂಗಮ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗಿಯಾಗಿದ್ದರು. ಪ್ರವಚನವನ್ನು ನೀಡಿದ್ದರು. ಈ ವಚನ ಕಾರ್ಯಕ್ರಮದಲ್ಲಿ ಸಚಿವರು ಕೂಡ ಭಾಗಿಯಾಗಿದ್ದರು. ಗಣ್ಯರೊಂದಿಗೆ ರಾತ್ರಿ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸ್ವಾಮೀಜಿ ಇಂದು ಬೆಳಗ್ಗೆ ಎದ್ದೇ ಇಲ್ಲ. ಭಕ್ತ ವೃಂದ ಸ್ವಾಮೀಜಿ ನಿಧನದಿಂದ ದುಃಖದಲ್ಲಿದೆ.

Advertisement

ಇಂದು ಸಂಜೆ 5 ಗಂಟೆಗೆ ಸ್ವಾಮೀಜಿಯ ಅಂತ್ಯ ಸಂಸ್ಕಾರ ನಡೆಯಲಿದೆ. ಅದಕ್ಕೂ ಮೊದಲು ಭಕ್ತರಿಗಾಗಿ, ಸಾರ್ವಜನಿಕರಿಗಾಗಿ ಸ್ವಾಮೀಜಿ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ. ಇಷ್ಟು ಚಿಕ್ಕ ವಯಸ್ಸಿಗೇನೆ ಸ್ವಾಮೀಜಿ ನಿಧನರಾಗಿದ್ದು, ಅರಗಿಸಿಕೊಳ್ಳಲಾರದ ಸತ್ಯವಾಗಿದೆ.

Advertisement

ಇತ್ತಿಚೆಗೆ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಚಿಕ್ಕ ವಯಸ್ಸಿಗೇನೆ ಹೃದಯಾಘಾತ ಸಂಭವಿಸುತ್ತಿದ್ದು, ನೋಡ ನೋಡುತ್ತಿದ್ದಂತೆಯೇ ನಿಧನರಾಗುತ್ತಿದ್ದಾರೆ. ಆಹಾರ ಪದ್ಧತಿ, ಕೆಲಸದ ಒತ್ತಡ ಎಲ್ಲವೂ ಕಾರಣವಾಗುತ್ತಿವೆ. ಹೀಗಾಗಿ ಹೃದಯಾಘಾತದಿಂದ ತಪ್ಪಿಸಿಕೊಳ್ಳಲು ಹೃದಯದ ಆರೊಇಗ್ಯ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಚಿಕ್ಕ ವಯಸ್ಸಿಗೇನೆ ಹೃದಯಾಘಾತವಾದರೆ ಪೋಷಕರಿಗೂ ಆ ನೋವು ಕೊನೆಯವರೆಗೂ ಉಳಿದು ಬಿಡುತ್ತದೆ. ಸ್ವಾಮೀಜಿಯವರ ನಿಧನವೂ ಭಕ್ತರಿಗೆ ಅಷ್ಟೇ ನೋವು ಕೊಟ್ಟಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಕ್ತರು ಬೇಡಿಕೊಂಡಿದ್ದಾರೆ.

Tags :
Advertisement