For the best experience, open
https://m.suddione.com
on your mobile browser.
Advertisement

ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ನೇಮಕ : ಬಿಜೆಪಿಯ ಈ ನಿರ್ಧಾರಕ್ಕೆ ಕಾರಣವೇನು..?

08:00 PM Nov 10, 2023 IST | suddionenews
ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ ವೈ  ವಿಜಯೇಂದ್ರ ನೇಮಕ   ಬಿಜೆಪಿಯ ಈ ನಿರ್ಧಾರಕ್ಕೆ ಕಾರಣವೇನು
Advertisement

Advertisement

ಬೆಂಗಳೂರು: ಕಡೆಗೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿದೆ. ಬಿಎಸ್ ವೈ ಪುತ್ರ ವಿಜಯೇಂದ್ರ ಅವರನ್ನೇ ನೇಮಕ ಮಾಡಲಾಗಿದೆ. ಯಡಿಯೂರಪ್ಪ ಅವರು ಕೂಡ ತಮ್ಮ ಪುತ್ರನಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ಶೋಭಾ ಕರಂದ್ಲಾಜೆ ಅವರನ್ನು ರಾಜ್ಯಾಧ್ಯಕ್ಷೆ ಮಾಡಲಾಗುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಇದೀಗ ಬಿಎಸ್ವೈ ಹೊಲಿಸಿಕೊಳ್ಳುವ ದಾರಿಯಲ್ಲಿರುವ ಹೈಕಮಾಂಡ್ ಇದೀಗ ಬಿವೈ ವಿಜಯೇಂದ್ರ ಅವರನ್ನು ನೇಮಕ ಮಾಡಲಾಗಿದೆ. ಇದರಿಂದ ಬಿಜೆಪಿಗೂ ಲಾಭವಾಗುವ ನಿರೀಕ್ಷೆ ಇದೆ.

Advertisement

ಕರ್ನಾಟಕದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿಗೆ ಬಹಳ ಮುಖ್ಯ. ಜನರ ನಾಡಿಮಿಡಿತ ಬಿಎಸ್ವೈ ಪರವಾಗಿದೆ. ಅದು ಬಿಜೆಪಿ ಹೈಕಮಾಂಡ್ ಗೂ ಅರ್ಥವಾಗಿದೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ತಮ್ಮದಾಗಿಸಿಕೊಳ್ಳಬೇಕೆಂಬ ಹಠ ಇದೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಿಸಿದರೆ ಗೆಲುವು ಸುಲಭ ಎಂಬುದನ್ನು ಅರ್ಥ ಮಾಡಿಕೊಂಡಿರುವ ಬಿಜೆಪಿ ಹೈಕಮಾಂಡ್ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ಈಗ ಬಿಜೆಪಿಗೆ ಲಿಂಗಾಯತ ಮತಗಳನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಯಾಕಂದ್ರೆ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಗೆ ಹೋದ ಬಳಿಕ ಲಿಂಗಾಯತರ ಮತ ಛಿದ್ರವಾಗುವ ಸಾಧ್ಯತೆ ಎದ್ದು ಕಾಣಿಸುತ್ತಾ ಇದೆ. ಹೀಗಾಗಿ ಬಿಎಸ್ವೈ ಅವರ ಫೇವರ್ ಆಗಿ ಕೆಲಸ ಮಾಡಿದರೆ ಲಿಂಗಾಯತ ಮತಗಳು ಉಳಿಯಬಹುದು ಎಂಬುದು ಲೆಲ್ಕಚಾರವಿದೆ. ಹೀಗಾಗಿ ಬಿಎಸ್ವೈ ಆಸೆಯಂತೆ ಅವರ ಪುತ್ರನಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಬಿಜೆಪಿ ಸೋತಿತ್ತು. ಈ ಸೋಲಿಗೆ ರಾಜ್ಯಾಧ್ಯಕ್ಷ ಸ್ಥಾನದಲ್ಲಿದ್ದ ನಳೀನ್ ಕುಮಾರ್ ಕಟೀಲು ಕೂಡ ಕಾರಣ ಎಂದೇ ಆರೋಪಗಳಯ ಕೇಳಿ ಬಂದಿತ್ತು. ಅದರ ನೈತಿಕ ಹೊಣೆ ಹೊತ್ತು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳೀನ್ ಕುನಾರ್ ಕಟೀಲು ರಾಜೀನಾಮೆ‌ ನೀಡಿದ್ದರು. ಆದರೆ ಚುನಾವಣೆ ಮುಗಿದು ಬಹಳ ತಿಂಗಳಾದ ಮೇಲೆ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದೆ.

Advertisement
Tags :
Advertisement