ವಿಜಯಪುರ ಗೋದಾಮು ದುರಂತ : 6 ಮೃತದೇಹ ಪತ್ತೆ.. ಹೆಚ್ಚಿದ ಆತಂಕ..!
ವಿಜಯಪುರ: ಕೈಗಾರಿಕ ಪ್ರದೇಶದಲ್ಲಿದ್ದ ಫುಡ್ಸ್ ಗೋದಾಮಿನಲ್ಲಿ ಸಂಗ್ರಹಿಸಿದ್ದ ಜೋಳದ ರಾಶಿ ಕಾರ್ಮಿಕರ ಮೇಲೆ ಸುರಿದ ಪರಿಣಾಮ ಸಂಭವಿಸಿದ ಅವಘಡದಲ್ಲಿ ಸಾವು ನೋವು ಹೆಚ್ಚಾಗಿದೆ. ಈಗಾಗಲೇ ಆರು ಮೃತದೇಹಗಳನ್ನು ಹೊರಗೆ ತೆಗೆದಿದ್ದು, ಇನ್ನೂ ಹಲವರು ದುರಂಯದಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಎಸ್ಡಿಆರ್ಎಫ್ ಪಡೆ ಕಾರ್ಯಾಚತಣೆಯಲ್ಲಿ ತೊಡಗಿದ್ದು, ನಾಪತ್ತೆಯಾಗಿರುವವರನ್ನು ಹುಡುಕುವ ಪ್ರಯತ್ನ ನಡೆಸುತ್ತಿದೆ. ಆರು ಮೃತದೇಹವನ್ನು ತೆಗೆಯಲಾಗಿದ್ದು, ಇನ್ನೊಂದು ಮೃತದೇಹ ತೆಗೆಯಲು ಹರಸಾಹಸ ಪಡಲಾಗುತ್ತಿದೆ. ರಾಜೇಶ್ ಮುಖಿಯಾ (25), ರಾಮಬ್ರೀಜ್ ಮುಖಿಯಾ (29), ಶಂಭು ಮುಖಿಯಾ (26), ಕೃಷ್ಣಾ ಮುಖಿಯಾ (18) ಸೇರಿ ಒಟ್ಟು ಆರು ಕಾರ್ಮಿಕರ ಮೃತದೇಹವನ್ನು ಹೊರಗೆ ತೆಗೆಯಲಾಗಿದೆ. ಸ್ಥಳಕ್ಕೆ ಸಚಿವ ಎಂ ಬಿ ಪಾಟೀಲ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ, ಮಾಹಿತಿ ಪಡೆದುಕೊಂಡಿದ್ದಾರೆ.
ನಿನ್ನೆ ರಾತ್ರಿ ಸುಮಾರು 11.30ಕ್ಕೆ ಈ ಘಟನೆ ನಡೆದಿದೆ. ಮೆಕ್ಕೆಜೋಳ ಸಂಸ್ಕರಣ ಘಟಕದಲ್ಲಿ ಬಿಹಾರ ಮಿಉಲದವರೇ ಕೆಲಸ ಮಾಡುತ್ತಿದ್ದರು. ಈ ಘಟನೆಯಿಂದ ಅಲ್ಲಿ ಕೆಲಸ ಮಾಡುತ್ತಿದ್ದ ಉಳಿದ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತದೇಹ ಸಾಗಿಸಲು ಹೋದಾಗ ಪೊಲೀಸರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಕಾರ್ಮಿಕರು ಚದುರಿಸುವಷ್ಟರಲ್ಲಿ ಪೊಲೀಸರು ಸುಸ್ತಾಗಿ ಹೋಗಿದ್ದಾರೆ. ಈ ಘಟನೆ ಬಗ್ಗೆ ಮಾತನಾಡಿರುವ ಸಚಿವ ಎಂ ಬಿ ಪಾಟೀಲ್, ಇದೊಂದು ಅತ್ಯಂತ ಭೀಕರ ದುರಂತ. ಬೇರೆ ರಾಜ್ಯದಿಂದ ಬಂದು ಇಲ್ಲಿ ಕೆಲಸ ಮಾಡುತ್ತಿದ್ದರು. ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ಪೊಲೀಸ್ ತನಿಖೆಯ ನಂತರ ಘಟನೆಯ ವಿವರ ನೀಡಲಾಗುವುದು. ಮೃತದೇಹಗಳನ್ನು ಅವರ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.