For the best experience, open
https://m.suddione.com
on your mobile browser.
Advertisement

ಡಿಕೆ ಶಿವಕುಮಾರ್ ಅವರನ್ನ ವಿಜಯಲಕ್ಷ್ಮೀ ಭೇಟಿ ಮಾಡಿದ್ದು ದರ್ಶನ್ ವಿಚಾರಕ್ಕಲ್ಲ : ಮತ್ಯಾಕೆ ಗೊತ್ತಾ..?

03:11 PM Jul 24, 2024 IST | suddionenews
ಡಿಕೆ ಶಿವಕುಮಾರ್ ಅವರನ್ನ ವಿಜಯಲಕ್ಷ್ಮೀ ಭೇಟಿ ಮಾಡಿದ್ದು ದರ್ಶನ್ ವಿಚಾರಕ್ಕಲ್ಲ   ಮತ್ಯಾಕೆ ಗೊತ್ತಾ
Advertisement

Advertisement
Advertisement

ಬೆಂಗಳೂರು: ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ದರ್ಶನ್ ಅವರನ್ನು ರಿಲೀಸ್ ಮಾಡಿಸಲು ವಿಜಯಲಕ್ಷ್ಮೀ ಸಾಕಷ್ಟು ಹೋರಾಟ ಮಾಡುತ್ತಿದ್ದಾರೆ. ಇದರ ನಡುವೆಯೇ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು, ಆಶ್ಚರ್ಯಕರ ಘಟನೆಯಾಗಿತ್ತು. ಇದೀಗ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ಕುತೂಹಲಕಾರಿ ಬೆಳವಣಿಗೆಗೆ ಸಾಕ್ಷಿಯಾಗಿತ್ತು.

Advertisement
Advertisement

ಈ ಬಗ್ಗೆ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆಯೇ ವಿಜಯಲಕ್ಷ್ಮೀ ಅವರು ನನ್ನ ಭೇಟಿ ಮಾಡುವುದಕ್ಕೆ ಬಂದಿದ್ದರು. ಆದರೆ ನಾನು ಭೇಟಿ ಮಾಡಲು ಒಪ್ಪಿರಲಿಲ್ಲ. ಇಂದು ಮನೆಯಲ್ಲಿ ಭೇಟಿಯಾಗುವಂತೆ ಹೇಳಿದ್ದೆ. ಈ ಹಿಂದೆ ದರ್ಶನ್ ಅವರ ಮಗನಿಗೆ ನನ್ನ ಸ್ಕೂಲ್ ನಲ್ಲಿ ಸೀಟ್ ಕೊಟ್ಟಿದ್ದೆ. ಈಗ ಮತ್ತೆ ನಮ್ಮ ಸ್ಕೂಲ್ ನಲ್ಲಿ ಸೇರಿಸಿಕೊಡಿ ಎಂದು ಮನವಿ ಮಾಡಲು ಬಂದಿದ್ದರು‌. ಪ್ರಿನ್ಸಿಪಾಲ್ ಗೆ ಹೇಳ್ತೀನಿ ಎಂದಿದ್ದೇನೆ. ಮಗನ ಶಿಕ್ಷಣದ ಬಗ್ಗೆ ಅವರಿಗೆ ಕಾಳಜಿ ಇದೆ.

ನಮ್ಮ ಸ್ಕೂಲ್ ನಲ್ಲಿ ಮಕ್ಕಳ ವರ್ತನೆ ಬಗ್ಗೆ ಪೇರೇಂಟ್ಸ್ ಗಮನಕ್ಕೆ ತರುತ್ತೇವೆ. ಹಾಗೇ ಈ ಹಿಂದೆ ದರ್ಶನ್ ಅವರನ್ನು ಕರೆಸಿದ್ದೆವು. ಮನೆ ಎದುರಿನ ಶಾಲೆಗೆ ಹೋದ್ರೆ ಹೋಗ್ತಾ ಬರ್ತಾ ಇರಬಹುದು ಎಂದು ಕೇಳಿದ್ದಾರೆ. ನಮಗೆ ಮಕ್ಕಳ ವಿಚಾರ ದೊಡ್ಡದು. ಸರಿ ಸಹಾಯ ಮಾಡ್ತೀನಿ ಎಂದು ಹೇಳಿದ್ದಾನೆ ಎಂದಿದ್ದಾರೆ.

ಇದೇ ವೇಳೆ ದರ್ಶನ್ ಬಗ್ಗೆ ಕೇಳಿದಾಗ, ನಿನ್ನೆ ನಮ್ಮ ಕ್ಷೇತ್ರದ ಹುಡುಗರು ಬಾಸ್ ಬಾಸ್ ಅಂತ ಗಲಾಟೆ ಮಾಡುತ್ತಿದ್ದರು. ಯಾವ ಬಾಸ್ ನಂಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಏನು ಬರ್ತಿದೆ ಎಂಬುದನ್ನು ನೋಡುವುದಕ್ಕೆ ಸಮಯ ಇಲ್ಲ. ಒಂದೊಂದು ಮಾಧ್ಯಮದಲ್ಲಿ ಒಂದೊಂದು ರೀತಿ ಬರುತ್ತಿದೆ. ಪೊಲೀಸ್ ತನಿಖೆಯಲ್ಲಿ ಮಧ್ಯ ಪ್ರವೇಶ ಮಾಡಲು ಸಾಧ್ಯವಿಲ್ಲ. ನಾನು ಗೃಹ ಸಚಿವನು ಅಲ್ಲ ಎಂದಿದ್ದಾರೆ.

Advertisement
Tags :
Advertisement