Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

30 ಗಂಟೆಗಳ ಕಾರ್ಯಾಚರಣೆಗೆ ಜಯ : ತುಂಗಾ ಭದ್ರಾ ಡ್ಯಾಂ ಸ್ಟಾಪ್ ಲಾಗ್ ಅಳವಡಿಕೆ ಸಕ್ಸಸ್..!

05:31 PM Aug 17, 2024 IST | suddionenews
Advertisement

ವಿಜಯನಗರ: ಕಳೆದ 30 ಗಂಟೆಗಳ ಕಾರ್ಯಾಚರಣೆ ಯಶಸ್ವಿಯಾಗಿದೆ. ತುಂಗಾಭದ್ರಾ ಡ್ಯಾಂಗೆ ಸ್ಟಾಪ್ ಲಾಗ್ ಅಳವಡಿಕೆ ಮಾಡುವ ಕಾರ್ಯ ಯಶಸ್ವಿಯಾಗಿ ಸಾಗಿದೆ. ತಾತ್ಕಾಲಿಕ ಸ್ಟಾಪ್ ಲಾಗ್ ಅಳವಡಿಕೆ ಕಾರ್ಯ ಕಡೆಗೂ ಯಶಸ್ವಿಯಾಗಿದೆ. ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಅವರ ಪ್ಲ್ಯಾನ್ ಸಕ್ಸಸ್ ಆಗಿದೆ. ಟಿ.ಬಿ. ಡ್ಯಾಂ ಕ್ರಸ್ಟ್ ಗೇಟ್ 19 ದುರಸ್ತಿ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಮೊದಲ ಸ್ಟಾಪ್ ಲಾಗ್ ಅಳವಡಿಕೆ ಮಾಡಿ, ನಿಟ್ಟುಸಿರು ಬಿಡಲಾಗಿತ್ತು. ಇಂದು 3 ಸ್ಟಾಪ್ ಲಾಗ್ ಅಳವಡಿಕೆಯನ್ನು ಯಶಸ್ವಿಯಾಗಿ ಅಳವಡಿಕೆ ಮಾಡಲಾಗಿದೆ.

Advertisement

ಮೂರು ದಿನ ಸತತ ಮೂವತ್ತು ಗಂಟೆಗಳ ಕಾರ್ಯಾಚರಣೆ ಇದಾಗಿದ್ದು, ಟಿಬಿ ಡ್ಯಾಂ ಅಧಿಕಾರಿಗಳು ಈಗ ಜಲಾಶಯದ ಸಂಪೂರ್ಣ ಹೊರ ಹರಿವು ಬಂದ್ ಮಾಡಿದ್ದಾರೆ. ನಿನ್ನೆ ರಾತ್ರಿ ಮೊದಲ ಸ್ಪಾಟ್ ಲಾಗ್ ಅಳವಡಿಕೆ ಕಾರ್ಯ ಶುರುವಾಗಿತ್ತು. ಸರಿಯಾಗಿ 26 ನಿಮಿಷಗಳಲ್ಲಿ ಮೂರನೇ ಸ್ಟಾಪ್ ಲಾಗ್ ಅಳವಡಿಕೆ ಮಾಡಲಾಯಿತು. 19ನೇ ಗೇಟ್ ನಲ್ಲಿ ಮೊದಲ ಸ್ಟಾಪ್ ಲಾಗ್ ಅಳವಡಿಸಿದ ಮೇಲೆ ನಿನ್ನೆ ಡ್ಯಾಂನ 33 ಗೇಟ್ ಗಳಲ್ಲಿ 25 ಗೇಟ್ ಗಳಿಂದ ನೀರು ಹರಿಸಲಾಗಿತ್ತು.

ನಿನ್ನೆ ಒಂದೇ ದಿನ ಎಂಟು ಗೇಟ್ ಗಳನ್ನು ಕ್ಲೋಸ್ ಮಾಡಲಾಗಿತ್ತು. ಇಂದು ಎರಡನೇ ಸ್ಟಾಪ್ ಲಾಗ್ ಅಳವಡಿಸಿದ ನಂತರ ಮತ್ತೆ ನಾಲ್ಕನೇ ಗೇಟ್ ಕ್ಲೋಸ್ ಮಾಡಲಾಗಿದೆ. ಇನ್ನು ತುಂಗಾಭದ್ರಾ ಡ್ಯಾಂನ 33 ಗೇಟ್ ಗಳಲ್ಲಿ 19 ಗೇಟ್ ಹೊರತುಪಡಿಸಿ ಎಲ್ಲಾ ಗೇಟ್ ಗಳನ್ನು ಕ್ಲೋಸ್ ಮಾಡಲಾಗಿದೆ. 105 ಟಿಎಂಸಿ ನೀರಿನಲ್ಲಿ ಕಳೆದ ಆರು ದಿನಗಳಿಂದ 40-45 ಟಿಎಂಸಿ ನೀರು ವ್ಯರ್ಥವಾಗಿದೆ.

Advertisement

Advertisement
Tags :
bengaluruchitradurgaOperationsuddionesuddione newsTunga Bhadra Damvictoryಅಳವಡಿಕೆಚಿತ್ರದುರ್ಗತುಂಗಾ ಭದ್ರಾ ಡ್ಯಾಂಬೆಂಗಳೂರುಸಕ್ಸಸ್ಸುದ್ದಿಒನ್ಸುದ್ದಿಒನ್ ನ್ಯೂಸ್ಸ್ಟಾಪ್ ಲಾಗ್
Advertisement
Next Article