ಬಜೆಟ್ ನಲ್ಲಿ ವಾತ್ಸಲ್ಯ ಯೋಜನೆ ಘೋಷಣೆ : ಇದರಿಂದ ಮಕ್ಕಳಿಗೇನು ಉಪಯೋಗ ಗೊತ್ತಾ..?
ಬೆಂಗಳೂರು: ನಿನ್ನೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಜೆಟ್ ನಲ್ಲಿ ಎನ್ಪಿಎಸ್ ವಾತ್ಸಲ್ಯ ಯೋಜನೆಯ ಬಗ್ಗೆಯೂ ಘೋಷಣೆ ಮಾಡಿದ್ದಾರೆ. ಹಾಗಾದ್ರೆ ಈ ಪಿಂಚಣಿ ಏನು..? ನಮ್ಮ ಮಕ್ಕಳಿಗೆ ಹೇಗೆ ಉಪಯೋಗವಾಗಬಹುದು ಎಂಬ ಮಾಹಿತಿ ಇಲ್ಲಿದೆ.
ಮಕ್ಕಳಿಗಾಗಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ನಿರ್ಮಲಾ ಸೀತರಾಮನ್ ಘೋಷಣೆ ಮಾಡಿದ್ದಾರೆ. ಇದರಲ್ಲಿ ನಮ್ಮ ಮಕ್ಕಳಿಗೆ 18ನೇ ವಯಸ್ಸಿನಿಂದಾನೇ ಪಿಂಚಣಿ ಘೋಷಣೆ ಮಾಡಿ, 70 ವರ್ಷದವರೆಗೂ ಹೂಡಿಕೆ ಮಾಡಬಹುದು. ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಪೋಷಕರು ಮಾಡಬಹುದಾದಂತ ಉಳಿತಾಯದ ಪಿಂಚಣಿ ಯೋಜನೆ ಇದಾಗಿದೆ.
ಈ ಸಂಬಂಧ ಮ್ಯಾಕ್ಸ್ ಲೈಫ್ ಪಿಂಚಣಿ ನಿಧಿ ನಿರ್ವಹಣೆಯ ಮುಖ್ಯ ಕಾರ್ಯನಿರ್ವಾಣಾಧಿಕಾರಿ ರಣಬೀರ್ ಸಿಂಗ್ ಧರಿವಾಲ್ ಸ್ಪಷ್ಟನೆ ನೀಡಿದ್ದಾರೆ. ನಿವೃತ್ತಿ ಉಳಿತಾಯ ಹಾಗೂ ದೀರ್ಘಾವಧಿಯ ಆರ್ಥಿಕ ಭದ್ರತಯನ್ನು ಉತ್ತೇಜಿಸುವಲ್ಲಿ ಕೇಂದ್ರ ಬಜೆಟ್ ನ ರಾಷ್ಟ್ರೀಯ ಪಿಂಚಣಿ ಯೋಜನೆ ವಾತ್ಸಲ್ಯವು ಶ್ಲಾಘನೀಯ ಯೋಜನೆಯಾಗಿದೆ. ಪೋಷಕರು ತಮ್ಮ ಅಪ್ರಾಪ್ತ ಮಕ್ಕಳಿಗೆ ಎನ್ಪಿಎಸ್ ಖಾತೆಯನ್ನು ತೆರೆಯಲು ಅವಕಾಶ ನೀಡುವ ಮೂಲಕ ಚಿಕ್ಕವಯಸ್ಸಿನಿಂದಾನೇ ಜವಾಬ್ದಾರಿಯುತ ಹಣಕಾಸು ನಿರ್ವಹಣೆಗೆ ಅಡಿಪಾಯ ಹಾಕಿದಂತೆ ಆಗುತ್ತದೆ. ಇದರಿಂದಾಗಿ ಪ್ರೌಢಾವಸ್ಥೆಗೆ ಬಂದಾಗ ಮಕ್ಕಳ ಉಳಿತಾಯವೂ ಸುಗಮವಾಗುತ್ತದೆ ಎಂದಿದ್ದಾರೆ.
ಇನ್ನು ಈ ಯೋಜನೆಯನ್ನು ಮಾರುಕಟ್ಟೆಗೆ ಲಿಂಕ್ ಮಾಡಲಾಗಿದೆ. ಇದರಿಂದ ನಿಧಿ ಯೋಜನೆ ಮತ್ತು ಈಕ್ವಿಟಿ ಮಾನ್ಯತೆಯ ಶೇಕಡವಾರು ಪ್ರಮಾಣವನ್ನು ಆಯ್ಕೆ ಮಾಡಬಹುದು. ನಿಧಿಯಲ್ಲಿ ಹೂಡಿಕೆಯಾಗಿರುವ ಕಾರ್ಯಕ್ಷಮೆತೆಯ ಆಧಾರದ ಮೇಲೆ ಎನ್ಪಿಎಸ್ ಖಾತೆದಾರರು ನಿವೃತ್ತಿಯ ಸಮಯದಲ್ಲಿ ಒಂದು ದೊಡ್ಡ ಮೊತ್ತವನ್ನು ಪಡೆಯುತ್ತಾರೆ. 60 ವರ್ಷಗಳ ನಿವೃತ್ತಿ ವಯಸ್ಸಿನಲ್ಲಿ ನಿವೃತ್ತಿ ಮೊತ್ತದ ಗರಿಷ್ಠ ಶೇ. 60ರಷ್ಟನ್ನು ಹಿಂತೆಗೆದುಕೊಳ್ಳುವ ಇನ್ನೊಂದು ಆಯ್ಕೆ ಇದರಲ್ಲಿದೆ. ಇದರಲ್ಲಿ ಉಳಿದ ಶೇ. 40ರಷ್ಟನ್ನು ವರ್ಷಾಶನವಾಗಿ ಖರೀದಿ ಮಾಡಬಹುದು. ಈ ರೀತಿಯ ನಿವೃತ್ತಿ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ.