Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸದನದಲ್ಲಿ ಇಂದು ವಾಲ್ಮೀಕಿ ಹಗರಣದ ಸದ್ದು : ಸಿಎಂ ರಾಜೀನಾಮೆಗೆ ಒತ್ತಾಯಿಸಿದ ಬಿಜೆಪಿ ನಾಯಕರು..!

06:28 PM Jul 22, 2024 IST | suddionenews
Advertisement

 

Advertisement

ಬೆಂಗಳೂರು : ವಿಧಾನಸಭೆಯ ಅಧಿವೇಶನದಲ್ಲಿ ಇಂದು ಕೂಡ ಬಿಜೆಪಿ ನಾಯಕರು ವಾಲ್ಮೀಕಿ ಹಗರಣದ ಬಗ್ಗೆ ಸದ್ದು ಗದ್ದಲ ಎಬ್ಬಿಸಿದ್ದಾರೆ. ಅಧಿವೇಶನದ ಆರಂಭದಿಂದಾನೂ ಕಾಂಗ್ರೆಸ್ ಮಣಿಸಲು ವಿಪಕಗಷ ನಾಯಕರು ಹಗರಣಗಳ ಬಗ್ಗೆ ಸಿದ್ಧತೆ ನಡೆಸಿಕೊಂಡು ಬಂದಿವೆ. ಇಂದು ಕೂಡ ಪ್ರತಿಭಟನೆ ನಡೆಸಿದ್ದು, ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ಸಮರ್ಪಕವಾದ ಉತ್ತರ ಕೊಟ್ಟಿಲ್ಲ. ಹೀಗಾಗಿ ಅವರು ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ. ಆದರೆ ಅಶೋಕ್ ಅವರ ಮಾತಿಗೆ ಆಡಳಿತ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸಿದರು.

Advertisement

ಇನ್ನು ಈ ವಿಚಾರವಾಗಿ ಈಗಾಗಲೇ ಸಾಕಷ್ಟು ಬಾರಿ ಉತ್ತರ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಇಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿಯವರಿಗೆ ನನ್ನ ಹೆಸರಿಗೆ ಮಸಿ ಬಳಿಯಬೇಕು ಎಂಬ ಉದ್ದೇಶ ಇಟ್ಟುಕೊಂಡಿದ್ದಾರೆ. ಬಿಜೆಪಿ ಮಾಡಿದ ಆರೋಪಗಳು ಸತ್ಯಕ್ಕೆ ದೂರವಾದುದ್ದಾಗಿದೆ. ಅಕ್ರಮ ನಡೆದೇ ಇಲ್ಲ ಅಂತ ನಾನು ಹೇಳಲ್ಲ. ಆದರೆ ಅಕ್ರಮಕ್ಕೂ ಸರ್ಕಾರಕ್ಕೂ, ಹಣಕಾಸು ಇಲಾಖೆಗೂ ಸಂಬಂಧವಿಲ್ಲ. ಅಷ್ಟಕ್ಕೂ ನಾನ್ಯಾಕೆ ರಾಜೀನಾಮೆ ನೀಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಬಿಜೆಪಿಯವರು ಸುಳ್ಳನ್ನೇ ನೂರು ಬಾರಿ ಹೇಳುವ ನಿಸ್ಸೀಮರು ಎಂದಿದ್ದಾರೆ.

ಸಿಎಂ ಉತ್ತರಕ್ಕೆ ಸಮಾಧಾನಗೊಳ್ಳದ ಬಿಜೆಪಿ ನಾಯಕರು ಆರಂಭದಲ್ಲಿಯೇ ವಿರೋಧ ವ್ಯಕ್ತಪಡಿಸಿದ್ದಾರೆ. ನೀವೂ ಭ್ರಷ್ಟಾಚಾರದಲ್ಲಿ‌ ನಿಸ್ಸೀಮರು ಎಂದು ಬಿಜೆಪಿಯ ರವಿಕುಮಾರ್ ಆಕ್ರೋಶ ಹೊರ ಹಾಕಿದ್ದಾರೆ. ಅತ್ತ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ.

Advertisement
Tags :
bengalurubjp leaderschitradurgaCMdemandedhouseresignationsuddionesuddione newsValmiki scandalಒತ್ತಾಯಚಿತ್ರದುರ್ಗಬಿಜೆಪಿ ನಾಯಕರುಬೆಂಗಳೂರುವಾಲ್ಮೀಕಿ ಹಗರಣಸದನಸದ್ದುಸಿಎಂ ರಾಜೀನಾಮೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article