For the best experience, open
https://m.suddione.com
on your mobile browser.
Advertisement

'ಕೆಂಡ'ದ ಹಾಡು ಮೆಚ್ಚಿದ ವಿ ಹರಿಕೃಷ್ಣ: ಡಿ ಬೀಟ್ಸ್ ಸಂಸ್ಥೆಗೆ ಆಡಿಯೋ ರೈಟ್ಸ್ ಸೇಲ್

09:38 PM Mar 08, 2024 IST | suddionenews
 ಕೆಂಡ ದ ಹಾಡು ಮೆಚ್ಚಿದ ವಿ ಹರಿಕೃಷ್ಣ  ಡಿ ಬೀಟ್ಸ್ ಸಂಸ್ಥೆಗೆ ಆಡಿಯೋ ರೈಟ್ಸ್ ಸೇಲ್
Advertisement

ಬೆಂಗಳೂರು : ಸಿನಿಮಾ ಸಾಕಷ್ಟು ಸಲ ಗೆಲ್ಲುವುದೆ ಹಾಡುಗಳ ಮೂಲಕ. ಒಂದು ಸಿನಿಮಾದ ಹಾಡು ಚೆನ್ನಾಗಿತ್ತು ಎಂದರೆ ಜನ ಸಿನಿಮಾ ರಿಲೀಸ್ ಆಗುವ ತನಕ ವೈಟ್ ಮಾಡ್ತಾರೆ, ಸಿನಿಮಾವನ್ನ ಥಿಯೇಟರ್ ನಲ್ಲಿ ನೋಡ್ತಾರೆ. ಹೀಗಾಗಿಯೇ ಹಾಡುಗಳು ಬಹಳ ಮುಖ್ಯವಾಗುತ್ತವೆ. ಕೇಳುಗರಿಗೆ ಇಂಪಾಗಿ ಅನ್ನಿಸಿದರೆ, ಡಿಮ್ಯಾಂಡ್ ಕೂಡ ಹಾಗೇ ಬರುತ್ತದೆ. ಈಗ ಕೆಂಡ ಸಿನಿಮಾಗೂ ಮ್ಯೂಸಿಕ್ ವಿಚಾರದಲ್ಲಿ ಅಂತ ಡಿಮ್ಯಾಂಡ್ ಒಂದು ಕ್ರಿಯೇಟ್ ಆಗಿದೆ.

Advertisement

ಸಹದೇವ್ ಕೆಲವಡಿ ನಿರ್ದೇಶನದ, ಗಂಟುಮೂಟೆ ಖ್ಯಾತಿಯ ರೂಪಾ ರಾವ್ ನಿರ್ಮಾಣ ಮಾಡಿರುವ 'ಕೆಂಡ' ಸಿನಿಮಾದ ಆಡಿಯೋ ಹಕ್ಕುಗಳ ವಿಚಾರದಲ್ಲಿ ಖುಷಿಯ ಸಂಗತಿಯೊಂದನ್ನು ಚಿತ್ರತಂಡ ಹಂಚಿಕೊಂಡಿದೆ. ಹೆಸರಲ್ಲೇ ನಿಗಿನಿಗಿಸುವ ಆವೇಗವೊಂದನ್ನು ಬಚ್ಚಿಟ್ಟುಕೊಂಡಂತಿರೋ ಸಿನಿಮಾ `ಕೆಂಡ’. ಇದರ ಮೂಲಕ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಪುತ್ರ ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರ ಸಂಗೀತ ನೀಡಿರುವ ಹಾಡಿಗಳ ಆಡಿಯೋ ರೈಟ್ಸ್ ಅನ್ನು ಡಿ ಬೀಟ್ಸ್ ಪಡೆದುಕೊಂಡಿದೆ. ಸಿನಿಮಾ ಮ್ಯೂಸಿಕ್ ವಲಯದಲ್ಲಿ ದೊಡ್ಡ ಹೆಸರು ಮಾಡಿರುವ ಸಂಸ್ಥೆ ಡಿ ಬೀಟ್ಸ್. ಖುದ್ದು ಸಂಗೀತ ನಿರ್ದೇಶಕ ಕಂ ಈ ಸಂಸ್ಥೆಯ ಮುಖ್ಯಸ್ಥರಾದ ವಿ. ಹರಿಕೃಷ್ಣ ಅವರೇ ಕೆಂಡದ ಹಾಡುಗಳನ್ನು ಕೇಳಿ, ಬಹುವಾಗಿ ಮೆಚ್ಚಿಕೊಂಡು ಆಡಿಯೋ ಹಕ್ಕುಗಳನ್ನು ಖರೀದಿಸಿದ್ದಾರೆ.

Advertisement

ಈ ಸಂದರ್ಭದಲ್ಲಿ ಹರಿಕೃಷ್ಣ ಅವರ ಕಡೆಯಿಂದ ಬಂದಿರುವ ಮೆಚ್ಚುಗೆಯ ಮಾತುಗಳು ಚಿತ್ರತಂಡಕ್ಕೆ ಮತ್ತಷ್ಟು ಹುರುಪು ತುಂಬಿವೆ. ಎಲ್ಲ ರೀತಿಯಿಂದಲೂ ಈ ಹಾಡುಗಳು ಅದ್ಭುತವಾಗಿ ಮೂಡಿ ಬಂದಿವೆ ಎಂಬ ಅಭಿಪ್ರಾಯ ಹರಿಕೃಷ್ಣರ ಕಡೆಯಿಂದ ರವಾನೆಯಾಗಿದೆ. ಈ ಮೂಲಕ ಮೊದಲ ಹೆಜ್ಜೆಯಲ್ಲಿಯೇ ರಿತ್ವಿಕ್ ಕಾಯ್ಕಿಣಿ ಗಮನ ಸೆಳೆದಿದ್ದಾರೆ. ಅಂದಹಾಗೆ, ಕೆಂಡ ಹಾಡುಗಳಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಅದರಲ್ಲೊಂದು ಹಾಡನ್ನು ಖ್ಯಾತ ಸಂಗೀತ ನಿರ್ದೇಶಕ ಚರಣ್ ರಾಜ್ ಹಾಡಿರೋದು ವಿಶೇಷ. ಅದಿತಿ ಸಾಗರ್ ಕೂಡಾ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಸದ್ಯಕ್ಕೆ ಇವಿಷ್ಟು ಮಾಹಿತಿಯನ್ನಷ್ಟೇ ಚಿತ್ರತಂಡ ಜಾಹೀರು ಮಾಡಿದೆ. ಮಿಕ್ಕುಳಿದ ಮಾಹಿತಿಗಳು ಇಷ್ಟರಲ್ಲಿಯೇ ಪ್ರೇಕ್ಷಕರನ್ನು ತಲುಪಿಕೊಳ್ಳಲಿವೆ.

Tags :
Advertisement